ಮಂಗಳೂರು: ಪೊಲೀಸ್ ಕಾನ್ಸ್ಟೆಬಲ್ನಿಂದಲೇ ಪತ್ನಿ ಮೇಲೆ ಅತ್ಯಾಚಾರ ಎಸಗಿಸಿದ್ದ ಪತಿ ಹಾಗೂ ಕೃತ್ಯವೆಸಗಿದ ಘಟನೆ ಕಂಕನಾಡಿಯಲ್ಲಿ ನಡೆದಿದ್ದು, ಪಾಪಿ ಪೇದೆಯನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಬಾಗಲಕೋಟೆ ಮೂಲದ ಚಂದ್ರ ನಾಯ್ಕ ಹಾಗೂ ಸಂತ್ರಸ್ತೆಯ ಪತಿ ಬಂಧಿತರು. ಗಂಡ ಹಣಕ್ಕಾಗಿ ಒತ್ತಾಯಪೂರ್ವಕವಾಗಿ ಬೇರೆ ಪುರುಷರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಮಾಡಿ, ಅದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ.
ಬಳಿಕ ಇತರರೊಂದಿಗೆ ದೈಹಿಕ ಸಂಪರ್ಕ ನಡೆಸುವಂತೆ ಒತ್ತಾಯ ಮಾಡುತ್ತಿದ್ದ. ವಿರೋಧಿಸಿದಾಗ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆಯೊಡ್ಡುತ್ತಿದ್ದ. ಪರಿಚಯವಿರುವ ಕಾವೂರು ಠಾಣಿ ಕಾನ್ಸ್ಟೆಬಲ್ ಚಂದ್ರನಾಯ್ಕಗೆ ತಿಳಿಸಿದಾಗ, ಆತ ಮನೆಗೆ ಬಂದು ಗಂಡನ ಮೊಬೈಲ್ನಲ್ಲಿದ್ದ ಫೋಟೋ ಮತ್ತು ವಿಡಿಯೋ ಡಿಲೀಟ್ ಮಾಡಿಸಿದ್ದ. ನಂತರ ತನ್ನ ಗಂಡನ ಪ್ರೇರಣೆಯಂತೆ ಚಂದ್ರ ನಾಯ್ಕ ಕೂಡ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಮೆಟ್ರೋದಲ್ಲಿ ಫುಲ್ ನೆಟ್ವರ್ಕ್: ವೈಫೈ ಸೇವೆ ಆರಂಭಕ್ಕೆ ಬಿಎಂಆರ್ಸಿಎಲ್ ತೀರ್ಮಾನ
ಕೃಷಿ ಕನ್ನಡ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


