Thursday, November 5, 2026
spot_img
More
    spot_img
    HomeStateDistrictಶಾಲೆ ಬಸ್‌ ಚಾಲಕನಿಗೆ ಹೃದಯಾಘಾತ; ಬಸ್‌ನಲ್ಲಿದ್ದ ಮಕ್ಕಳ ಪ್ರಾಣ ಉಳಿಸಿ ಪ್ರಾಣಬಿಟ್ಟ ಡ್ರೈವರ್

    ಶಾಲೆ ಬಸ್‌ ಚಾಲಕನಿಗೆ ಹೃದಯಾಘಾತ; ಬಸ್‌ನಲ್ಲಿದ್ದ ಮಕ್ಕಳ ಪ್ರಾಣ ಉಳಿಸಿ ಪ್ರಾಣಬಿಟ್ಟ ಡ್ರೈವರ್

    ಹಾವೇರಿ: ರಾಜ್ಯದಲ್ಲಿ ಪ್ರತಿದಿನ ಹೃದಯಾಘಾತದಿಂದ ಮೃತಪಟ್ಟ ಸುದ್ದಿಗಳು ಕಳೆದೊಂದು ತಿಂಗಳಿನಿಂದ ಸತತವಾಗಿ ಕೇಳಿಬರುತ್ತಲೇ ಇವೆ. ಅದರಲ್ಲಿಯೂ ಹಾಸನದಲ್ಲಿ ದಾಖಲಾದ ಸರಣಿ ಹೃದಯಾಘಾತ ಪ್ರಕರಣಗಳು ದೊಡ್ಡ ಸಂಖ್ಯೆಯಲ್ಲಿದ್ದದ್ದು ವಿಚಾರವನ್ನು ಮತ್ತಷ್ಟು ಗಂಭೀರವನ್ನಾಗಿಸಿದೆ.

    ಸದ್ಯ ಈ ಕುರಿತು ವಿಶೇಷ ಸಮಿತಿ ರಚಿಸಿ ವರದಿ ಮಾಡಿಸಿರುವ ಸರ್ಕಾರ ಹೃದಯಾಘಾತ ತಡೆಗೆ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಹೃದಯಾಘಾತ ಸಂಬಂಧಿ ಸಾವುಗಳ ಸುದ್ದಿಗಳು ವರದಿಯಾಗುತ್ತಲೇ ಇವೆ. ನಿನ್ನೆ ( ಜುಲೈ 16 ) ಸಹ ಹೃದಯಾಘಾತಕ್ಕೆ ರಾಜ್ಯದಲ್ಲಿ ಸಾವು ಸಂಭವಿಸಿದ್ದು, ಶಾಲಾ ಬಸ್‌ ಚಾಲಕನೋರ್ವ ಬಸ್‌ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

    ಹಾವೇರಿಯಲ್ಲಿ ಜಿಲ್ಲೆಯ ಕಳಲಗೊಂಡ ಗ್ರಾಮದ ಬಳಿ ಈ ಘಟನೆ ನಡೆದಿದ್ದು 25 ವರ್ಷದ ಪಕ್ಕಿರೇಶ್‌ ಎಂಬಾತ ಮೃತ ಶಾಲಾ ಬಸ್‌ ಚಾಲಕನಾಗಿದ್ದಾರೆ. ನಿನ್ನೆ ಶಾಲಾ ಮಕ್ಕಳನ್ನು ಎಂದಿನಂತೆ ವಾಪಸ್‌ ಬಿಡಲು ತೆರಳಿದ್ದ ಪಕ್ಕೀರೇಶ್‌ ಎದೆ ನೋವು ಕಾಣಿಸಿಕೊಂಡ ಕಾರಣ ರಸ್ತೆ ಬದಿಗೆ ಬಸ್‌ ನಿಲ್ಲಿಸಿದ್ದ. ಈ ಮೂಲಕ ಪಕ್ಕೀರೇಶ್ ಸಾವಿಗೂ ಮುನ್ನ ಸಮಯಪ್ರಜ್ಞೆ ಮೆರೆದಿದ್ದಾರೆ.

    ‌5 ವರ್ಷ ದಾಟಿದ ಮಕ್ಕಳ ‘ಆಧಾರ್’ ಅಪ್ ಡೇಟ್ ಮಾಡೋದು ಕಡ್ಡಾಯ, ಇಲ್ಲಿದೆ ಮಾಹಿತಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search