ಮೈಸೂರು: ಇಂದು ( ಜುಲೈ 17 ) ನಗರದ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ವರ್ಧಂತಿ ಇರುವ ಕಾರಣ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮೈಸೂರು ಹಾಗೂ ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ದೇವಿ ದರ್ಶನ ಪಡೆದ ಬಳಿಕ ಮಾಧ್ಯಮದವರ ಜತೆ ಮಾತನಾಡಿದರು.
ಮೊದಲಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಗರದಲ್ಲಿ ನಡೆಸಲಿರುವ ಸಾಧನಾ ಸಮಾವೇಶದ ಕುರಿತು ಕೊಂಕು ನುಡಿದ ಪ್ರತಾಪ್ ಸಿಂಹ ಬಳಿಕ ಪ್ರಿಯಾಂಕ್ ಖರ್ಗೆ ಹಾಗೂ ಸಂತೋಷ್ ಲಾಡ್ ವಿರುದ್ಧ ನೇರ ವಾಗ್ದಾಳಿ ನಡೆಸಿ ಮುಂದಿನ ವಾರ ಬಡ್ಡಿ ಸಮೇತ ಚುಕ್ತಾ ಮಾಡ್ತೀನಿ ಎಂದು ಡೈಲಾಗ್ ಕೌಂಟರ್ ಕೊಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಬಹಳಷ್ಟು ಬಾರಿ ಹೇಳಿದ್ದರೂ ಸಿಲಾಬಸ್ ಬಿಟ್ಟು ಬರೀ ಔಟ್ ಆಫ್ ಸಿಲಾಬಸ್ ಮಾತನಾಡ್ತಾರೆ, ಐಟಿಬಿಟಿ ಸಚಿವರಾಗಿ ಒಮ್ಮೆ ಐಟಿಬಿಟಿ ಕುರಿತು ಪ್ರೆಸ್‌ಮೀಟ್ ಮಾಡಿ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ, ಆದರೂ ಅದೊಂದು ವಿಚಾರ ಬಿಟ್ಟು ಏನೇನೋ ಮಾತನಾಡ್ತಾರೆ. ಇವತ್ತು ವರ್ಧಂತಿ ಇದೆ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನೊಬ್ಬ ಅರ್ಥಶಾಸ್ತ್ರಜ್ಞ, ಮೈನಿಂಗ್ ದೊರೆ ಲಾಡ್‌ಗೆ ಮುಂದಿನ ವಾರ ನೀವೇನು ಪ್ರಶ್ನೆ ಕೇಳಿದ್ದೀರಿ, ವೈಯಕ್ತಿಕ ದಾಳಿಯಿಂದ ಹಿಡಿದು ಪ್ರತಿಯೊಂದಕ್ಕೂ ಬಡ್ಡಿ ಸಮೇತವಾಗಿ ವಾಪಸ್ ಕೊಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು. ಇವತ್ತು ವರ್ಧಂತಿ ಇರುವ ಕಾರಣ ರಾಜಕೀಯ ಮಾತನಾಡಬಾರದು ಎಂದುಕೊಂಡಿದ್ದೆ, ಆದರೆ ಸಾಧನಾ ಸಮಾವೇಶ ಇನ್ನೆರಡು ದಿನಗಳಿರುವ ಕಾರಣ ಮಾತನಾಡಬೇಕಾಗಿ ಬಂತು ಎಂದೂ ಸಹ ಸಿಂಹ ತಿಳಿಸಿದರು.
ಧರ್ಮಸ್ಥಳ: ಆರಂಭವಾಗದ ಅಸ್ತಿಪಂಜರ ಸ್ಥಳ ಮಹಜರು; ಪೊಲೀಸರು ದೂರಿನ ಉದ್ದೇಶವನ್ನೇ ಮರೆಮಾಚುತ್ತಿದ್ದಾರೆ ಎಂದ ವಕೀಲರು!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


