Sunday, November 1, 2026
spot_img
More
    spot_img
    HomeEntertainmentನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ! ನಟ ಅಜಯ್ ರಾವ್ ಹೇಳಿದ್ದೇನು ?

    ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ! ನಟ ಅಜಯ್ ರಾವ್ ಹೇಳಿದ್ದೇನು ?

    ನಟ ಅಜಯ್ ರಾವ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. 11 ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಬೀಳಲಿದೆ. ಅಜಯ್ ರಾವ್ ಮತ್ತು ಸ್ವಪ್ನ ಅವರು 2014ನೇ ವರ್ಷದಲ್ಲಿ ಹೊಸೇಪಟೆಯಲ್ಲಿ ಸರಳವಾಗಿ ವಿವಾಹವಾಗಿದ್ದರು. ಒಂದು ಹೆಣ್ಣು ಮಗು ಇದೆ. ಈಗ ನಟ ಅಜಯ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.‌

    ಸ್ವಪ್ನಾ ಅವರದ್ದು ಲವ್‌ ಕಂ ಅರೇಂಜ್‌ ಮ್ಯಾರೇಜ್‌, ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿಗೆ ಚೆರಿಷ್ಮಾ ಎಂಬ ಮುದ್ದಾದ ಮಗಳು ಕೂಡ ಇದ್ದಾಳೆ. ಈಗ ಅಜಯ್ ಅವರು ಡೈವರ್ಸ್ ಬಗ್ಗೆ ಮಾತನಾಡಿದ್ದಾರೆ.‌

    ‘ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ.. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ’ ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಮೂಲಕ ಅವರು ಸುದ್ದಿಯನ್ನು ಅಲ್ಲಗಳೆಯದೇ, ದಯವಿಟ್ಟು ಇಲ್ಲಿಗೇ ನಿಲ್ಲಿಸಿಬಿಡಿ’ ಎಂದು ವಿನಂತಿಸಿಕೊಂಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search