ಸಿಯಾಟಲ್‌ನಲ್ಲಿರುವ ಐತಿಹಾಸಿಕ 605 ಅಡಿ ಎತ್ತರದ ಬಾಹ್ಯಾಕಾಶ ಕೇಂದ್ರ ಕಟ್ಟಡದ ಗೋಪುರದ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಅಮೆರಿಕದ ಪ್ರಖ್ಯಾತ ತಾಣವಾಗಿರುವ ಇಲ್ಲಿ, ವಿದೇಶವೊಂದರ ಧ್ವಜವನ್ನು ಹಾರಿಸಿರುವುದು ಇದೇ ಮೊದಲು.
ಸಿಯಾಟಲ್ನ ಭಾರತೀಯ ಕಾನ್ಸುಲೇಟ್ ಜನರಲ್ ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದು, ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಜನರು ಸೇರುತ್ತಿರುವಾಗ ಭಾರತದ ಧ್ವಜವನ್ನು ಗಾಳಿಯಲ್ಲಿ ಹಾರಿಸುವುದನ್ನು ತೋರಿಸುವ ವೀಡಿಯೊದೊಂದಿಗೆ ಪೋಸ್ಟ್ ಮಾಡಿದ್ದಾರೆ.
ಭಾರತದ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಗಿದೆ. ಸಿಯಾಟಲ್‌ನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿರುವ ಪ್ರಕಾಶ್ ಗುಪ್ತಾ, ಸಿಯಾಟಲ್ ಮೇಯರ್ ಬ್ರೂಸ್ ಹರ್ರೆಲ್ ಮತ್ತು ಇತರ ಗಣ್ಯರು ಈ ಐತಿಹಾಸಿಕ ಸಮಾಂಭದಲ್ಲಿ ಹಾಜರಿದ್ದರು.
ಸಮಾರಂಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಗುಪ್ತಾ, ‘ಇದಕ್ಕಿಂತಲೂ ದೊಡ್ಡ ಗೌರವ ಮತ್ತೊಂದಿಲ್ಲ! ಸಿಯಾಟಲ್ ಸ್ಕೈಲೈನ್ ಸ್ಪೇಸ್ ನೀಡಲ್‌ನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


