ಇಸ್ಲಾಮಾಬಾದ್: ಪಾಕಿಸ್ತಾನದ ಜನಪ್ರಿಯ ಬಾಲನಟ 15 ವರ್ಷದ ಉಮರ್ ಷಾ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್‌ನಲ್ಲಿ ಸೋಮವಾರ ಬೆಳಗ್ಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾನೆ. ಕುಟುಂಬ ಮತ್ತು ವೈದ್ಯಕೀಯ ವರದಿಗಳ ಪ್ರಕಾರ ಉಮರ್‌ಗೆ ವಾಂತಿಯಾಗುತ್ತಿತ್ತು. ಈ ವೇಳೆ ಶ್ವಾಸಕೋಶಕ್ಕೆ ದ್ರವ ಪ್ರವೇಶಿಸಿದ್ದು, ಇದರಿಂದ ಹೃದಯ ಸಂಬಂಧ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ.
ಟಿವಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯನಾಗಿದ್ದ ಉಮರ್ ತನ್ನ ಸಹೋದರನೊಂದಿಗೆ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದ. ಎಆರ್‌ವೈ ಡಿಜಿಟಲ್‌ನ ಜೀತೋ ಪಾಕಿಸ್ತಾನ್ ಮತ್ತು ಶಾನ್ ಎ ರಂಜಾನ್ ಈತನ ಜನಪ್ರಿಯ ಕಾರ್ಯಕ್ರಮಗಳು. ಉಮ ಸಹೋದರರು ಪೀಚೆ ತೊ ದೇಖೋ’ ಎಂಬ ರೀಲ್‌ನಿಂದಲೂ ಪ್ರಸಿದ್ಧರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು.
ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಡೊನಾಲ್ಡ್ ಟ್ರಂಪ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


