ತಿರುವನಂತಪುರಂ: ಹದಿನಾರು ವರ್ಷದ ಬಾಲಕನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗಳಲ್ಲಿ ಒಬ್ಬ ರಾಜಕಾರಣಿ, ಇಬ್ಬರು ಸರ್ಕಾರಿ ನೌಕರರು ಹಾಗೂ ಒಬ್ಬ ಫುಟ್‌ಬಾಲ್ ಕೋಚ್ ಸಹಿತ 14 ಜನರು ಒಳಗೊಂಡಿರುವ ಪ್ರಕರಣ ಕೇರಳದಲ್ಲಿ ಸಂಚಲನ ಮೂಡಿಸಿದೆ.
ಸಲಿಂಗಿಗಳ ಡೇಟಿಂಗ್ ಆ್ಯಪ್‌ನಲ್ಲಿ ಬಾಲಕನನ್ನು ಪರಿಚಯಿಸಿಕೊಂಡ ಆರೋಪಿಗಳು ಆತನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಬಾಲಕನ ಮನೆ ಹಾಗೂ ಇತರ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ದೌರ್ಜನ್ಯ ನಡೆದಿದೆ ಎನ್ನಲಾಗಿದೆ.
ಒಂದು ದಿನ ಹೊರಗಡೆ ಹೋಗಿದ್ದ ಹುಡುಗನ ತಾಯಿ ಮನೆಗೆ ಬಂದಾಗ ಪುರುಷನೊಬ್ಬ ಮನೆಯಿಂದ ಓಡಿ ಹೋಗುತ್ತಿದ್ದುದನ್ನು ಕಂಡು ಅನುಮಾನಗೊಂಡಾಗ ಹಗರಣ ಬೆಳಕಿಗೆ ಬಂದಿದೆ. ಏನಾಯಿತೆಂದು ತಾಯಿ ಪ್ರಶ್ನಿಸಿದಾಗ, ಆಕೆಯ ಪುತ್ರ ಎಲ್ಲವನ್ನೂ ವಿವರಿಸಿದ್ದಾನೆ. ಪೋಕ್ಸ್ ಕಾನೂನಿನಡಿ 14 ಪ್ರತ್ಯೇಕ ಕೇಸ್ ಗಳನ್ನು ದಾಖಲಿಸಲಾಗಿದೆ.
ಧರ್ಮಸ್ಥಳ: ದೂರು ಕೊಟ್ಟರೂ ತನಿಖೆ ನಡೆಸದ ಎಸ್‌ಐಟಿ; ಹೈಕೋರ್ಟ್ ಮೆಟ್ಟಿಲೇರಿದ ಇಬ್ಬರು ದೂರುದಾರರು!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


