Tuesday, September 1, 2026
spot_img
More
    spot_img
    HomeLatest newsಕರ್ನಾಟಕದಲ್ಲಿ ಮಳೆಯ ಅಬ್ಬರ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಸಂಪೂರ್ಣ ಹವಾಮಾನ ವರದಿ

    ಕರ್ನಾಟಕದಲ್ಲಿ ಮಳೆಯ ಅಬ್ಬರ: 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಸಂಪೂರ್ಣ ಹವಾಮಾನ ವರದಿ

    ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    Advertisement

    ಯೆಲ್ಲೋ ಅಲರ್ಟ್ ಘೋಷಣೆ

    ಹವಾಮಾನ ಇಲಾಖೆಯ ಪ್ರಕಾರ, ಇಂದು ಮತ್ತು ನಾಳೆ ಅಂದರೆ ಸೆಪ್ಟೆಂಬರ್ 18 ರವರೆಗೆ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ:

    ದಕ್ಷಿಣ ಒಳನಾಡು: ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನ.

    ಉತ್ತರ ಒಳನಾಡು: ಯಾದಗಿರಿ, ವಿಜಯಪುರ, ರಾಯಚೂರು, ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ ಮತ್ತು ಉತ್ತರ ಕನ್ನಡ.

    ಕರಾವಳಿ ಜಿಲ್ಲೆಗಳು: ಉಡುಪಿ ಮತ್ತು ದಕ್ಷಿಣ ಕನ್ನಡ.

    ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.

    ಹವಾಮಾನ ಮುನ್ಸೂಚನೆ

    ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ನೀಡಿರುವ ಮಾಹಿತಿಯ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಳಿದ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಉಷ್ಣಾಂಶದ ವಿವರಗಳು

    ಎಚ್​​ಎಎಲ್: ಗರಿಷ್ಠ ಉಷ್ಣಾಂಶ 29.0°C ಮತ್ತು ಕನಿಷ್ಠ ಉಷ್ಣಾಂಶ 20.6°C.

    ಬೆಂಗಳೂರು ನಗರ: ಗರಿಷ್ಠ ಉಷ್ಣಾಂಶ 28.5°C ಮತ್ತು ಕನಿಷ್ಠ ಉಷ್ಣಾಂಶ 21.3°C.

    ಕೆಐಎಎಲ್ (ಏರ್​ಪೋರ್ಟ್): ಗರಿಷ್ಠ ಉಷ್ಣಾಂಶ 30.4°C.

    ಜಿಕೆವಿಕೆ: ಗರಿಷ್ಠ ಉಷ್ಣಾಂಶ 28.8°C ಮತ್ತು ಕನಿಷ್ಠ ಉಷ್ಣಾಂಶ 20.0°C.

    ಕರಾವಳಿ ಮತ್ತು ಇತರೆ ಜಿಲ್ಲೆಗಳಲ್ಲಿ ಉಷ್ಣಾಂಶ

    ಹೊನ್ನಾವರ: ಗರಿಷ್ಠ ಉಷ್ಣಾಂಶ 29.4°C ಮತ್ತು ಕನಿಷ್ಠ ಉಷ್ಣಾಂಶ 23.1°C.

    ಕಾರವಾರ: ಗರಿಷ್ಠ ಉಷ್ಣಾಂಶ 28.8°C ಮತ್ತು ಕನಿಷ್ಠ ಉಷ್ಣಾಂಶ 24.6°C.

    ಮಂಗಳೂರು ಏರ್​​ಪೋರ್ಟ್: ಗರಿಷ್ಠ ಉಷ್ಣಾಂಶ 28.9°C ಮತ್ತು ಕನಿಷ್ಠ ಉಷ್ಣಾಂಶ 23.1°C.

    ಶಕ್ತಿನಗರ: ಗರಿಷ್ಠ ಉಷ್ಣಾಂಶ 30.1°C ಮತ್ತು ಕನಿಷ್ಠ ಉಷ್ಣಾಂಶ 23.2°C.

    ಬೆಳಗಾವಿ ಏರ್​ಪೋರ್ಟ್: ಗರಿಷ್ಠ ಉಷ್ಣಾಂಶ 26.4°C ಮತ್ತು ಕನಿಷ್ಠ ಉಷ್ಣಾಂಶ 21.4°C.

    ಬೀದರ್: ಗರಿಷ್ಠ ಉಷ್ಣಾಂಶ 31.0°C ಮತ್ತು ಕನಿಷ್ಠ ಉಷ್ಣಾಂಶ 22.4°C.

    ವಿಜಯಪುರ: ಗರಿಷ್ಠ ಉಷ್ಣಾಂಶ 29.2°C ಮತ್ತು ಕನಿಷ್ಠ ಉಷ್ಣಾಂಶ 22.4°C.

    ಧಾರವಾಡ: ಗರಿಷ್ಠ ಉಷ್ಣಾಂಶ 26.8°C.

    ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ: 30,307 ಹೆಚ್ಚು ಹುದ್ದೆಗಳು ಖಾಲಿ! ಕೂಡಲೇ ಅಪ್ಲೈ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading