ದಕ್ಷಿಣ ಕನ್ನಡ: ಧರ್ಮಸ್ಥಳ ಸಮೀಪದ ಪಾಂಗಳ ಗ್ರಾಮದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ, ಆನೆ ಮಾವುತ ಹಾಗೂ ಆತನ ತಂಗಿಯ ಕೊಲೆ, ಪುಷ್ಪಲತಾ, ವೇದವಲ್ಲಿ ಕೊಲೆಗಳ ಜತೆ ಈ ಹಿಂದಿನಿಂದಲೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಹೆಸರು ಕೇಳಿಬರುತ್ತಲೇ ಇದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವೊಂದು ಹೋರಾಟಗಾರರು ವೀರೇಂದ್ರ ಹೆಗ್ಗಡೆಯವರೇ ಈ ಕೃತ್ಯಗಳ ಹಿಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದು, ದಕ್ಷಿಣ ಕನ್ನಡದ ಹಲವು ಸ್ಥಳೀಯ ಯುಟ್ಯೂಬ್ ಚಾನೆಲ್‌ಗಳು ವೀರೇಂದ್ರ ಹೆಗ್ಗಡೆ ವಿರುದ್ಧ ಸುದ್ದಿಗಳನ್ನೂ ಮಾಡಿವೆ.
ಇನ್ನು ಇತ್ತೀಚೆಗಷ್ಟೆ ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ಕೈಗೊಂಡ ಸಂದರ್ಭದಲ್ಲಿ ಸೌಜನ್ಯ ಮನೆಗೆ ಭೇಟಿ ನೀಡಿದಾಗಲೂ ಸೌಜನ್ಯ ತಾಯಿ ವೀರೇಂದ್ರ ಹೆಗ್ಗಡೆ ಅವರೇ ಈ ಅನ್ಯಾಯ ನಮ್ಮ ಮನೆಯಿಂದಲೇ ಆಗಿದೆ, ಎಲ್ಲವನ್ನೂ ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಹೇಳಿದ್ದರು ಎಂದು ವಿಜಯೇಂದ್ರ ಮುಂದೆಯೇ ಹೇಳಿದ್ದರು.
ಹೀಗೆ ಆಗಾಗ ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಜತೆ ಪದೆಪದೆ ವೀರೇಂದ್ರ ಹೆಗ್ಗಡೆ ಹೆಸರು ಕೇಳಿಬರುತ್ತಿದ್ದು, ನಿನ್ನೆ ( ಸೆಪ್ಟೆಂಬರ್ 16 ) ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ್ ನಾಯಕ್ ಮಾತನಾಡಿ ಭೂಕಬಳಿಕೆ ಮತ್ತು ಅತಿಕ್ರಮಣ, ದುಬಾರಿ ಬಡ್ಡಿ ದಂಧೆ, ಧರ್ಮಸ್ಥಳ ದೇವಾಲಯದ ಆದಾಯ, ಆಸ್ತಿ ಕುರಿತ ದಾಖಲೆಗಳು, ಕಾರ್ಮಿಕರಿಗೆ ವಂಚನೆ, ಸೌಜನ್ಯ ಕೊಲೆ, ಮಹಿಳಾ ದೌರ್ಜನ್ಯಗಳು, ಬೆಳ್ತಂಗಡಿ ಸಮಾಜ ಮಂದಿರ ನಾಶ ಮತ್ತು ಭೂಕಬಳಿಕೆ, ಒತ್ತುವರಿಯ ದಾಖಲೆಗಳು, ರುಡ್‌ಸೆಟ್ ಅನುದಾನ ದುರ್ಬಳಕೆ ಹೀಗೆ ವೀರೇಂದ್ರ ಹೆಗ್ಗಡೆ ವಾದಿ – ಪ್ರತಿವಾದಿಯಾಗಿರುವ 334 ಕೋರ್ಟ್ ಕೇಸ್‌ಗಳಿದ್ದು, ಇವೆಲ್ಲ ಆರೋಪಗಳು ಸುಳ್ಳಾದರೆ ಹೆಗ್ಗಡೆ ಅವರ ಕಾಲಿಗೆ ಬೀಳುತ್ತೇವೆ ಎಂದು ಸವಾಲು ಹಾಕಿದರು.
ಧರ್ಮಸ್ಥಳ: ದೂರು ಕೊಟ್ಟರೂ ತನಿಖೆ ನಡೆಸದ ಎಸ್‌ಐಟಿ; ಹೈಕೋರ್ಟ್ ಮೆಟ್ಟಿಲೇರಿದ ಇಬ್ಬರು ದೂರುದಾರರು!
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


