ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ನೌಕರರು ಹೊಂದಿದ್ದ ಬಿಪಿಎಲ್ ಪಡಿತರ ಚೀಟಿಯ ಅಂಕಿ ಅಂಶಗಳು ಲಭ್ಯವಾಗಿವೆ. ಹೌದು, 31 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರ ಮಾಹಿತಿ ಲಭ್ಯವಾಗಿದ್ದು, ಈ ಎಲ್ಲಾ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.
ಇನ್ನು ಈ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆ ಅಗ್ರಸ್ಥಾನದಲ್ಲಿದೆ. ಹೌದು, ಕಲಬುರಗಿ ಜಿಲ್ಲೆಯಲ್ಲಿ 360 ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿದ್ದರು. ಉಡುಪಿ ಜಿಲ್ಲೆಯಲ್ಲಿ 13 ಮಂದಿ ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದು, ಅತಿ ಕಡಿಮೆ ಎನಿಸಿಕೊಂಡಿದೆ.
ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು?
ಕಲಬುರಗಿ 360, ಬಾಗಲಕೋಟೆ 196, ದಕ್ಷಿಣ ಕನ್ನಡ 189, ವಿಜಯಪುರ 171, ಬಳ್ಳಾರಿ 168, ಬೀದರ್ 146, ಹಾಸನ 102, ಹಾವೇರಿ 100, ರಾಯಚೂರು 96, ಚಾಮರಾಜನಗರ 93, ರಾಮನಗರ 93, ಕೋಲಾರ 80, ಧಾರವಾಡ 48, ಉತ್ತರ ಕನ್ನಡ 45, ಮಂಡ್ಯ 36, ದಾವಣಗೆರೆ 34, ಚಿತ್ರದುರ್ಗ 32, ಚಿಕ್ಕಬಳ್ಳಾಪುರ 31, ಕೊಡಗು 27, ಚಿಕ್ಕಮಗಳೂರು 17 ಮತ್ತು ಉಡುಪಿ 13.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


