ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್ ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ಭೈರತಿ ರಣಗಲ್ ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇನ್ನು ಚಿತ್ರ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದ ಪ್ರಿ ಬುಕಿಂಗ್ ಪಡೆದುಕೊಳ್ಳದೇ ಇದ್ದರೂ ಮೊದಲ ಪ್ರದರ್ಶನ ಮುಗಿದ ಬಳಿಕ ಪ್ರೇಕ್ಷಕರಿಂದ ವ್ಯಕ್ತವಾದ ವಿಮರ್ಶೆ ಚಿತ್ರಕ್ಕೆ ವರದಾನವಾಗಿದೆ.
ಹೌದು, ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗುತ್ತಿದ್ದು, ಪರಿಣಾಮ ಮೊದಲ ಶೋ ಮುಗಿದ ಬಳಿಕ ಭೈರತಿ ರಣಗಲ್ ಬುಕಿಂಗ್‌ನಲ್ಲಿ ಗಣನೀಯ ಏರಿಕೆ ಕಂಡಿದೆ. ಇನ್ನು ಬಿಡುಗಡೆ ದಿನಕ್ಕಿಂತಲೂ ಹೆಚ್ಚು ಟಿಕೆಟ್‌ಗಳು ಎರಡನೇ ದಿನ ಮಾರಾಟವಾಗಿದ್ದು, ಇಂದು ( ಭಾನುವಾರ ) ರಜಾ ದಿನವಾದ್ದರಿಂದ ಇಂದು ಇನ್ನೂ ಹೆಚ್ಚಿನ ಟಿಕೆಟ್ ಮಾರಾಟವಾಗುವುದಂತೂ ಖಚಿತ.
ಬಿಡುಗಡೆಯ ದಿನ ಬುಕ್‌ಮೈಶೋ ಮೂಲಕ 47000 ಟಿಕೆಟ್‌ಗಳು ಮಾರಾಟವಾಗಿದ್ದು, ಎರಡನೇ ದಿನ 58000 ಟಿಕೆಟ್‌ಗಳು ಮಾರಾಟವಾಗಿವೆ. ಹೀಗೆ ಮೊದಲ ದಿನಕ್ಕಿಂತ ಎರಡನೇ ದಿನ 11000 ಟಿಕೆಟ್‌ಗಳು ಹೆಚ್ಚಾಗಿ ಮಾರಾಟವಾಗಿದ್ದು, ಇಂದು 70,000 ಟಿಕೆಟ್ ಮಾರಾಟವಾಗುವ ಸಾಧ್ಯತೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


