ಬೆಂಗಳೂರು: ರಾಜ್ಯದಲ್ಲಿ ವಕ್ಫ್ ಮಂಡಳಿ ಆಸ್ತಿ ವಿವಾದ ಬೃಹತ್ ಮಟ್ಟದಲ್ಲಿ ಚರ್ಚೆಗೊಳಗಾಗಿದ್ದು, ಪ್ರತಿದಿನ ಒಂದೊಂದು ವಕ್ಫ್ ಕರ್ಮಕಾಂಡ ಬೆಳಕಿಗೆ ಬರುತ್ತಿದೆ. ಹೀಗೆ ಒಂದೆಡೆ ವಕ್ಫ್ ಕುರಿತಾಗಿ ಅಕ್ರಮವಾಗಿ ಭೂಕಬಳಿಕೆ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದ್ದು, ಮತ್ತೊಂದೆಡೆ ಮುಜರಾಯಿ ಇಲಾಖೆ ತಮ್ಮ ದೇವಾಲಯಗಳ ಆಸ್ತಿ ರಕ್ಷಣೆಯತ್ತ ಚಿತ್ತ ನೆಟ್ಟಿದೆ.
ಬೆಂಗಳೂರಿನಲ್ಲಿರುವ ಮುಜರಾಯಿ ಇಲಾಖೆಯ ದೇವಸ್ಥಾನಗಳ ಆಸ್ತಿಗಳನ್ನು ಸರ್ವೆ ಮಾಡಿ ಬೇಲಿ ಹಾಕಲು ಸಿದ್ಧತೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಸರ್ವೆ ಆರಂಭಿಸಿ ಒತ್ತುವರಿ ಆಗಿದ್ದರೆ ತೆರವು ಮಾಡಲು ಮುಂದಾಗಿದೆ.
ಈ ಕುರಿತು ಮಾತನಾಡಿರುವ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ʼಬೆಂಗಳೂರಿನಲ್ಲೂ ಸಾವಿರಾರು ಎಕರೆ ಮುಜರಾಯಿ ಜಾಗ ಇದೆ. ಆ ಜಾಗ ಒತ್ತುವರಿ ಆಗಿದೆಯಾ ಎಂದು ಪರಿಶೀಲನೆ ನಡೆಸಲಿದ್ದು, ಸರ್ವೆ ಮಾಡಿದ್ದಾಗ ಒತ್ತುವರಿ ಆಗಿದ್ದರೆ ಕೂಡಲೇ ನ್ಯಾಯಾಲಯದ ಮೂಲಕ ತೆರವಿಗೆ ಅನುಮತಿ ತಂದು ತೆರವು ಮಾಡುತ್ತೇವೆʼ ಎಂದು ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


