Tuesday, August 4, 2026
spot_img
More
    spot_img
    HomeEntertainmentಮಹೇಶ್‌ ಬಾಬು ಕಾರಿನ ಮೇಲಿದ್ದ ಟ್ರಾಫಿಕ್‌ ದಂಡ ಕಟ್ಟಿದ ಅಭಿಮಾನಿಗಳು: ವಿಡಿಯೊ ವೈರಲ್

    ಮಹೇಶ್‌ ಬಾಬು ಕಾರಿನ ಮೇಲಿದ್ದ ಟ್ರಾಫಿಕ್‌ ದಂಡ ಕಟ್ಟಿದ ಅಭಿಮಾನಿಗಳು: ವಿಡಿಯೊ ವೈರಲ್

    ಮೊನ್ನೆಯಷ್ಟೇ ರಾಜಮೌಳಿ ಜತೆಗೆ ಮಹೇಶ್‌ ಬಾಬು ಕೈಜೋಡಿಸಿರುವ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ಚಿತ್ರಕ್ಕೆ ವಾರಣಾಸಿ ಎಂಬ ಶೀರ್ಷಿಕೆ ಇಡಲಾಗಿದ್ದು, ಸಣ್ಣದೊಂದು ಟೀಸರ್‌ ಅನ್ನೂ ಸಹ ಬಿಡುಗಡೆ ಮಾಡಲಾಯಿತು.

    Advertisement

    ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಮಹೇಶ್‌ ಬಾಬು ರುದ್ರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಫಸ್ಟ್‌ಲುಕ್‌ ಟೀಸರ್‌ನಲ್ಲಿ ಗೂಳಿ ಮೇಲೆ ಕುಳಿತು ತ್ರಿಶೂಲ ಹಿಡಿದು ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಿದ್ದರು. ಬಹು ದಿನಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಂಡು ಶಿಳ್ಳೆ, ಚಪ್ಪಾಳೆ ಹೊಡೆದು ಸಂಭ್ರಮಿಸಿದರು.

    ಕಳೆದ ಚಿತ್ರಗಳಲ್ಲಿ ಸಾಮ್ಯತೆ ಇರುವ ಲುಕ್‌, ಕಥೆಗಳಲ್ಲಿ ಮಹೇಶ್‌ ಬಾಬುವನ್ನು ನೋಡಿ ಬೇಸತ್ತಿದ್ದ ಅಭಿಮಾನಿಗಳು ಹೊಸ ಅವತಾರದಲ್ಲಿ ತಮ್ಮ ನೆಚ್ಚಿನ ನಟನ ಕಂಡು ಸಂತಸಪಟ್ಟಿದ್ದರು. ಹೀಗೆ ಕಾರ್ಯಕ್ರಮದಲ್ಲಿ ತಮ್ಮ ನಟನಿಗೆ ಜೈಕಾರ ಹಾಕಿದ್ದ ಅಭಿಮಾನಿಗಳು ಇದರ ಬೆನ್ನಲ್ಲೇ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹೇಶ್‌ ಬಾಬು ಕಾರಿನ ನಂಬರ್‌ ಅನ್ನು ಆನ್‌ಲೈನ್‌ ದಂಡ ಪಾವತಿ ವೆಬ್‌ಸೈಟ್‌ನಲ್ಲಿ ಹಾಕಿ ಅದರ ಮೇಲಿದ್ದ ದಂಡವನ್ನು ತಮ್ಮ ಹಣದಿಂದ ಪಾವತಿಸಿದ್ದಾರೆ.

    ಟಿಎಸ್‌ 36 ಎನ್‌ 4005 ರಿಜಿಸ್ಟ್ರೇಷನ್‌ನ ಕಾರಿನ ಮೇಲಿದ್ದ ತಲಾ 1000 ರೂನ ಎರಡು ದಂಡಗಳನ್ನು ( ಒಟ್ಟು 2000 ರೂ ) ಅಭಿಮಾನಿಯೊಬ್ಬ ಪಾವತಿಸಿ ಅದರ ಸ್ಕ್ರೀನ್‌ ರೆಕಾರ್ಡಿಂಗ್‌ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿ ಎಲ್ಲ ಬಾಬುಗೋಸ್ಕರ ಎಂದು ಬರೆದುಕೊಂಡಿದ್ದಾನೆ ಹಾಗೂ ಈ ವಿಡಿಯೊ ವೈರಲ್‌ ಆಗಿದೆ.

    ಇನ್ನು ಅತಿಯಾದ ವೇಗ ಹಾಗೂ ಅಪಾಯಕಾರಿ ಚಾಲನೆಗಾಗಿ ಎರಡು ಬಾರಿ ತಲಾ 1000 ರೂ ದಂಡ ಮಹೇಶ್‌ ಬಾಬು ಕಾರಿನ ಮೇಲಿತ್ತು. ಹೀಗೆ ಅಭಿಮಾನಿ ಹಂಚಿಕೊಂಡ ವಿಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಹುಚ್ಚುತನ ಎಂದಿದ್ದರೆ, ಇನ್ನೂ ಕೆಲವರು ಗುಲಾಮಗಿರಿ ಎಂದಿದ್ದಾರೆ. ಮಹೇಶ್‌ ಬಾಬು ಕಾರ್ಯಕ್ರಮಕ್ಕೆ ಖರ್ಚಾದ ಹಣದಲ್ಲಿ ನಿನ್ನ ಜೀವನವೇ ಮುಗಿದುಹೋಗುತ್ತದೆ ಅಂಥವರಿಗೆ ಈ ರೀತಿ ಕಷ್ಟಪಟ್ಟು ದುಡಿದ ಹಣ ನೀಡುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading