ಸಾಮಾನ್ಯವಾಗಿ ನಾವು ಉತ್ತಮ ಆರೋಗ್ಯದ (Health) ಕುರಿತು ಮಾತನಾಡುವಾಗ, ಕೇವಲ ದೈಹಿಕ ಆರೋಗ್ಯದ (Physical Health) ಬಗ್ಗೆ ಮಾತ್ರ ಹೆಚ್ಚು ಗಮನ ಹರಿಸುತ್ತೇವೆ. ನಮ್ಮ ಎದುರಿಗಿರುವವರು ಕೂಡ ಆರೋಗ್ಯ ಎಂದರೆ ದೈಹಿಕ ಸದೃಢತೆ ಎಂದು ಭಾವಿಸುತ್ತಾರೆ. ಆದರೆ, ಆರೋಗ್ಯ ಎಂದು ಹೇಳಿದಾಗ, ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಸಮಾನ ಪ್ರಾಮುಖ್ಯತೆ ಇರುತ್ತದೆ.ವ್ಯಕ್ತಿಯ ಜೀವನದಲ್ಲಿ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ (Mental Health) ಅಷ್ಟೇ ನಿರ್ಣಾಯಕ ಪಾತ್ರ ವಹಿಸುತ್ತದೆ.
ಒಮ್ಮೆ ಮಾನಸಿಕ ಆರೋಗ್ಯ ಹದಗೆಟ್ಟರೆ, ಮನಸ್ಸಿಗೆ ನೆಮ್ಮದಿ ಇಲ್ಲವಾಗುತ್ತದೆ. ದೈಹಿಕವಾಗಿ ನಾವು ಎಷ್ಟೇ ಬಲಶಾಲಿಗಳಾಗಿದ್ದರೂ, ಮಾನಸಿಕವಾಗಿ ದುರ್ಬಲರಾಗುತ್ತೇವೆ. ಉತ್ತಮ ಆರೋಗ್ಯ ಎಂದರೆ ಕೇವಲ ದೈಹಿಕವಾಗಿ ಸದೃಢರಾಗಿರುವುದು ಮಾತ್ರವಲ್ಲ, ನಮ್ಮ ಮನಸ್ಸನ್ನು ಚೆನ್ನಾಗಿ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ.
ನಮ್ಮ ದೇಹದ ಮೇಲೆ ಹೆಚ್ಚು ಗಮನ ಹರಿಸುವ ಪ್ರಯತ್ನದಲ್ಲಿ, ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಪರಿಣಾಮ ಬೀರುವ ಮಾನಸಿಕ ಅಭ್ಯಾಸಗಳನ್ನು ನಾವು ಸಾಮಾನ್ಯವಾಗಿ ನಿರ್ಲಕ್ಷಿಸುತ್ತೇವೆ. ಕೆಲವು ಅಭ್ಯಾಸಗಳು ಕಾಲಕ್ರಮೇಣ ನಮ್ಮ ಮೆದುಳಿಗೆ ಗಂಭೀರ ಹಾನಿಯನ್ನುಂಟುಮಾಡಬಹುದು. ಆದ್ದರಿಂದ, ಆರೋಗ್ಯಕರ ಮತ್ತು ನೆಮ್ಮದಿಯ ಜೀವನಕ್ಕಾಗಿ ಅಂತಹ ಅಭ್ಯಾಸಗಳನ್ನು ಗುರುತಿಸಿ ತಪ್ಪಿಸುವುದು ಅತ್ಯಗತ್ಯ.
ಮಾನಸಿಕ ನೆಮ್ಮದಿಗೆ ಅಡ್ಡಿಪಡಿಸುವ 6 ಅಭ್ಯಾಸಗಳು
1.ಅಸ್ವಸ್ಥಕರ ಆಹಾರ ಪದ್ಧತಿ (Unhealthy Diet)
ನಿಮ್ಮ ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಆಹಾರ ಪದ್ಧತಿ ಅತ್ಯಂತ ಪ್ರಮುಖ. ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ, ಮನೋವೈದ್ಯರಾದ ಡಾ. ಆಶುತೋಷ್ ಷಾ ಅವರ ಪ್ರಕಾರ, ಕೆಟ್ಟ ಆಹಾರ ಪದ್ಧತಿಗಳು ಮೆದುಳಿನ ಆರೋಗ್ಯದ ಮೇಲೆ ನೇರವಾದ ಮತ್ತು ಗಮನಾರ್ಹ ಪರಿಣಾಮ ಬೀರುತ್ತವೆ.
ನಮ್ಮ ಮೆದುಳು ಪ್ರತಿದಿನ ನಾವು ತೆಗೆದುಕೊಳ್ಳುವ ಒಟ್ಟು ಶಕ್ತಿಯ ಸುಮಾರು 20% ಅನ್ನು ಬಳಸುತ್ತದೆ. ಓದುವುದು, ಕಲಿಯುವುದು ಮುಂತಾದ ಮಾನಸಿಕ ಚಟುವಟಿಕೆಗಳಲ್ಲಿ ಈ ಬಳಕೆ ಇನ್ನಷ್ಟು ಹೆಚ್ಚುತ್ತದೆ. ಆಮ್ಲಜನಕ ಮತ್ತು ಗ್ಲೂಕೋಸ್ ರೂಪದಲ್ಲಿ ಮೆದುಳು ಅಧಿಕ ಶಕ್ತಿಯನ್ನು ಬಳಸುವುದರಿಂದ, ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುವ ಆರೋಗ್ಯಕರ ಆಹಾರ ಮೆದುಳಿಗೆ ತುಂಬಾ ಸಹಕಾರಿ.
‘ಪಾಶ್ಚಿಮಾತ್ಯ ಆಹಾರ ಪದ್ಧತಿ’ (Western Diet) ಯನ್ನು ಅನುಸರಿಸುವುದರಿಂದ ಆಹಾರ ಉರಿಯೂತದ ಸೂಚ್ಯಂಕ (Dietary Inflammatory Index) ಜಾಸ್ತಿಯಾಗಬಹುದು, ಇದು ದೀರ್ಘಾವಧಿಯಲ್ಲಿ ಮೆದುಳಿನ ಆರೋಗ್ಯಕ್ಕೆ ಹಾನಿಕಾರಕ.ಆದಕ್ಕಾಗಿ ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾದ ‘ಮೆಡಿಟರೇನಿಯನ್ ಡಯಟ್’ ಅನ್ನು ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ.
2.ನಿದ್ರೆಯ ಕೊರತೆ (Lack of Sleep)
ನೀವು ಎಷ್ಟು ಹೊತ್ತು ಮತ್ತು ಯಾವ ಗುಣಮಟ್ಟದ ನಿದ್ರೆ ಮಾಡುತ್ತೀರಿ ಎಂಬುದು ನಿಮ್ಮ ಮೆದುಳಿನ ಆರೋಗ್ಯವನ್ನು ದೊಡ್ಡ ಮಟ್ಟದಲ್ಲಿ ನಿರ್ಧರಿಸುತ್ತದೆ. ನಿದ್ರೆಯ ಸಮಯದಲ್ಲಿ ಹಗಲಿನಲ್ಲಿ ಜಮೆಯಾಗಿರುವ ಚಯಾಪಚಯ ತ್ಯಾಜ್ಯಗಳನ್ನು ತೆಗೆದುಹಾಕುವ ಮಹತ್ವವಾದ ಪ್ರಕ್ರಿಯೆ ನಡೆಯುತ್ತದೆ.
ವಯಸ್ಕರಲ್ಲಿಗಂಟೆ ನಿದ್ರೆ ಸಾಮಾನ್ಯವಾಗಿ ಸೂರ್ಯಾಸ್ತದ ಮೂರು–ನಾಲ್ಕು ಗಂಟೆಗಳ ನಂತರ ಆರಂಭವಾಗಿ, ಏಳು–ಎಂಟು ಗಂಟೆಗಳವರೆಗೆ ಇರಬೇಕು. ನಿದ್ರೆಯ ಆರಂಭದಲ್ಲೋ ಅವಧಿಯಲ್ಲೋ ಯಾವುದೇ ರಾಜಿ ಮಾಡಿದರೆ ಅದು ಮೆದುಳಿಗೂ ದೇಹಕ್ಕೂ ತಕ್ಷಣ ಹಾಗೂ ದೀರ್ಘಾವಧಿಯ ಹಾನಿ ಉಂಟುಮಾಡುತ್ತದೆ. ನಿದ್ರಾಹೀನತೆ ಹಲವು ಮಾನಸಿಕ ಅಸ್ವಸ್ಥತೆಗಳಿಗೆ, ಹಾಗು ಬುದ್ಧಿಮಾಂದ್ಯತೆಯಂತಹ ನರವೈಜ್ಞಾನಿಕ ಸಮಸ್ಯೆಗಳಿಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ.
3.ಸಾಮಾಜಿಕ ಮಾಧ್ಯಮ ವ್ಯಸನ (Social Media Addiction)
ಸಾಮಾಜಿಕ ಮಾಧ್ಯಮವನ್ನು ವಿನೋದಕ್ಕಾಗಿಯೂ ಕೆಲಸಕ್ಕಾಗಿಯೂ ಬಳಸುವುದು ಸಾಮಾನ್ಯ, ಆದರೆ ಅದರಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಮೆದುಳಿನಲ್ಲಿರುವ ಮನೋಭಾವ ನಿಯಂತ್ರಣದ ರಾಸಾಯನಿಕಗಳ ಮೇಲೆ ಪರಿಣಾಮ ಬೀಳಬಹುದು. ಇದು ವ್ಯಸನಕ್ಕೆ ಕಾರಣವಾಗಬಹುದು ಹಾಗೂ ನಿಮ್ಮ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಹಾನಿ ಮಾಡಬಹುದು.ಸಾಮಾಜಿಕ ಮಾಧ್ಯಮವಿಲ್ಲದೆ ಇದ್ದಾಗ ಒಂಟಿತನ ಅಥವಾ ಅತಿಯಾಗಿ ಅವಲಂಬನೆಗೊಂಡಿರುವ ಭಾವನೆ ಕೂಡ ಕಾಣಿಸಬಹುದು.
4.ಜಡ ಜೀವನಶೈಲಿ (Sedentary Lifestyle)
ದೀರ್ಘಕಾಲ ಕುಳಿತುಕೊಳ್ಳುವ ಜಡ ಜೀವನಶೈಲಿ, ಮಧುಮೇಹ, ಇಷ್ಕೆಮಿಕ್ ಹೃದಯರೋಗದಂತಹ ಅತೀವ ಗಂಭೀರ ಜೀವನಶೈಲಿಯ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಿಸುತ್ತದೆ ಇವುಗಳೆಲ್ಲವೂ ಮೆದುಳಿನ ಆರೋಗ್ಯಕ್ಕೂ ಹಾನಿಕಾರಕ.ವಿಕಾಸಶಾಸ್ತ್ರೀಯ ದೃಷ್ಟಿಕೋನದಿಂದ ನೋಡಿದರೆ, ಸ್ನಾಯುಗಳ ಚಲನೆಯು ಎಂಡಾರ್ಫಿನ್ಗಳು ಮತ್ತು ಇತರ ಮೆದುಳಿನ ಬೆಳವಣಿಗೆ ಅಂಶಗಳ ಸ್ರಾವದ ಮೂಲಕ ಆರೋಗ್ಯಕರ ಮೆದುಳಿಗೆ ನೇರವಾಗಿ ಸಂಬಂಧಿಸಿದಿದೆ. ಪರೋಕ್ಷವಾಗಿ, ನಿಯಮಿತ ಚಲನೆ ಉತ್ತಮ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡಿ, ಅದರ ಮೂಲಕ ಮೆದುಳಿನ ಆರೋಗ್ಯಕ್ಕೂ ಮಹತ್ವದ ಪ್ರಯೋಜನ ನೀಡುತ್ತದೆ.ಎಂದು ಡಾ. ಷಾ ವಿವರಿಸುತ್ತಾರೆ
5.ಒತ್ತಡದ ಜೀವನ (Stressful Life)
ನಿರಂತರ ಒತ್ತಡದಲ್ಲಿ ಬದುಕುತ್ತಾ ಅದನ್ನು ನಿರ್ವಹಿಸಲು ಮಾರ್ಗಗಳನ್ನು ಕಂಡುಹಿಡಿಯದಿರುವುದು ನಿಮ್ಮ ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಕಾಲಾನಂತರದಲ್ಲಿ, ಒತ್ತಡವು ನಿಮ್ಮ ಮೆದುಳಿನ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಕಷ್ಟಕರವಾಗಿಸುತ್ತದೆ, ನಿಮ್ಮ ಆಲೋಚನೆಗಳ ಮೇಲೆ ಪರಿಣಾಮ ಬೀರುತ್ತದೆ, ಆತಂಕವನ್ನು ಹೆಚ್ಚಿಸುತ್ತದೆ ಮತ್ತು ಖಿನ್ನತೆಗೂ ಕಾರಣವಾಗಬಹುದು. ಇದು ನಿಮ್ಮ ನಿದ್ರೆಯನ್ನು ಸಹ ಅಡ್ಡಿಪಡಿಸಬಹುದು.
‘ಹಣವೇ ಎಲ್ಲವಲ್ಲ’: ತಿಂಗಳಿಗೆ ₹7 ಲಕ್ಷಕ್ಕೂ ಹೆಚ್ಚು ಸಂಬಳದ ಗೂಗಲ್ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


