ಯುಎಇ (UAE) ನಲ್ಲಿ ತಿಂಗಳಿಗೆ ₹7.25 ಲಕ್ಷಕ್ಕೂ ಹೆಚ್ಚು (30K AED) ಸಂಬಳ ಪಡೆಯುತ್ತಿದ್ದ ಬೆಂಗಳೂರಿನ ಟೆಕ್ಕಿ ಆಡ್ವಿನ್ ನೆಟ್ಟೊ ಅವರು ಕೆಲಸ ತ್ಯಜಿಸಿದ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸಕ್ಕೆ ಸೇರಿದ ಕೇವಲ ಮೂರು ತಿಂಗಳಲ್ಲಿ ಅವರು ರಾಜೀನಾಮೆ ನೀಡಿದ್ದು ಏಕೆ ಎಂಬುದನ್ನು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.
ಈ ಅದ್ಭುತ ಸಂಬಳ ಮತ್ತು ವರ್ಷಕ್ಕೆ ಸುಮಾರು ₹20 ಲಕ್ಷ ಉಳಿತಾಯ ಮಾಡುವ ಸಾಮರ್ಥ್ಯವಿದ್ದರೂ ಸಹ, ಅವರು ಕೆಲಸಕ್ಕೆ ಸೇರಿಕೊಂಡ ಕೇವಲ ಮೂರು ತಿಂಗಳ ನಂತರ ಅದನ್ನು ಬಿಡಲು ನಿರ್ಧರಿಸಿದರು. ಕಾರಣ, ಅವರ ಪ್ರಕಾರ ಹಣವೇ ಎಲ್ಲವೂ ಅಲ್ಲ!ಅನೇಕ ಉನ್ನತ ಹುದ್ದೆಗಳು ಅರ್ಹತೆಗಿಂತ ಹೆಚ್ಚಾಗಿ ರಾಷ್ಟ್ರೀಯತೆಯನ್ನು ಆಧರಿಸಿದ್ದವು. ಇದರಿಂದ ನಿಜವಾದ ಪರಿಣತಿಗೆ ಬೆಳೆಯಲು ಕಷ್ಟವಾಯಿತು.ಆಳವಾಗಿ ಯೋಚಿಸಿದ ನಂತರ, ಹಣವು ಮುಖ್ಯ, ಆದರೆ ಎಲ್ಲವೂ ಅಲ್ಲ ಎಂದು ಅರಿತು ಕೆಲಸ ಬಿಟ್ಟೆ ಎಂದು ಆಡ್ವಿನ್ ಹೇಳಿದ್ದಾರೆ.
ಅಡ್ವಿನ್ ನೆಟ್ಟೊ ಯಾರು?
ಆಡ್ವಿನ್ ನೆಟ್ಟೊ ಅವರು 2007 ರಲ್ಲಿ ಅನಿಮೇಷನ್ ಮತ್ತು ಗ್ರಾಫಿಕ್ ವಿಭಾಗದಲ್ಲಿ ಪದವಿ ಪಡೆದು, 2008 ರಲ್ಲಿ ವೆಬ್ ಡಿಸೈನರ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು.ಜರ್ಮನಿ ಮತ್ತು ಅಬುಧಾಬಿ ಮೂಲದ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ, ಇದೀಗ ಅವರು ಗೂಗಲ್‌ನ ಬೆಂಗಳೂರು ಕ್ಯಾಂಪಸ್‌ನಲ್ಲಿ ಯುಎಕ್ಸ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಯುಎಇ ಒಂದು ಅದ್ಭುತ ಸ್ಥಳ, ಹೆಚ್ಚು ಮಹತ್ವಾಕಾಂಕ್ಷೆ, ಸುರಕ್ಷತೆ ಮತ್ತು ಅವಕಾಶಗಳಿಂದ ತುಂಬಿರುವ ದೇಶ. ಅಲ್ಲಿ ಅತ್ಯುತ್ತಮ ಆಹಾರಗಳ ಸೇವನೆ ಮಾಡಿದ್ದೇನೆ ಎಂದು ಯುಎಇಯನ್ನು ಹೊಗಳಿದ್ದಾರೆ.
rigid work culture ನಿಂದ ಬೇಸರ
ಆಡ್ವಿನ್ ನೆಟ್ಟೊ ಎಂಬ ಈ ವ್ಯಕ್ತಿಯ ದಿಟ್ಟ ನಿರ್ಧಾರವು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಈ ವ್ಯಕ್ತಿ ಇಷ್ಟು ದೊಡ್ಡ ಸಂಬಳದ ಕೆಲಸ ಬಿಡಲು ಕಾರಣವೇನು?
ಯುಎಇ ಕನಸು, ಕಠಿಣ ವಾಸ್ತವ!
ಆಡ್ವಿನ್ ನೆಟ್ಟೊ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಅನುಭವ ಹಂಚಿಕೊಂಡಿದ್ದಾರೆ ಯುಎಇಗೆ ಹೋಗುವುದು ನನ್ನ ಕನಸಾಗಿತ್ತು, ಅದು ಕೊನೆಗೂ ನನಸಾಯಿತು. ಆದರೆ ಬಂದ ಮೇಲೆ ಗೊತ್ತಾಯಿತು, ಈ ದೇಶದಲ್ಲಿ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು. ಕೇವಲ ಮೂರು ತಿಂಗಳಲ್ಲಿ ನನಗೆ ಎಲ್ಲವೂ ತಿಳಿಯಿತು.
ಇಲ್ಲಿನ ಕೆಲಸದ ಒತ್ತಡ, ತಂತ್ರಜ್ಞಾನದ ಕೊರತೆ ಮತ್ತು ಮುಖ್ಯವಾಗಿ ಮ್ಯಾನೇಜರ್ ನಮ್ಮನ್ನು ನಡೆಸಿಕೊಳ್ಳುವ ರೀತಿ ಎಲ್ಲವೂ ಹಿಂಸೆಯಾಗಿತ್ತು.ಎಲ್ಲವನ್ನೂ ಕೂತು ಯೋಚನೆ ಮಾಡಿ, ಅರಿತುಕೊಂಡು ಅಲ್ಲಿಂದ ಹೊರಟೆ. ವರ್ಷಕ್ಕೆ ಸುಮಾರು ₹20 ಲಕ್ಷ ಉಳಿತಾಯ ಮಾಡುವ ಅವಕಾಶವಿದ್ದರೂ, ಕಠಿಣ ಕೆಲಸದ ಸಂಸ್ಕೃತಿ (Rigid Work Culture) ಮತ್ತು ಕಟ್ಟುನಿಟ್ಟಿನ ನಿಯಮಗಳು ನನಗೆ ಸರಿ ಬರಲಿಲ್ಲ.
ಆಡ್ವಿನ್ ಅವರು ಭಾರತದಲ್ಲಿ ಹೊಂದಿಕೊಳ್ಳುವ, ಫಲಿತಾಂಶ-ಆಧಾರಿತ ಕೆಲಸಕ್ಕೆ ಒಗ್ಗಿಕೊಂಡಿದ್ದರು. ಆದರೆ ಯುಎಇಯಲ್ಲಿ ಕಟ್ಟುನಿಟ್ಟಾದ ಹಾಜರಾತಿ ಮತ್ತು ‘ಕ್ಲಾಕ್-ಇನ್’ ನಿಯಮಗಳು ಮುಖ್ಯವಾಗಿದ್ದವು.
ಅಲ್ಲದೆ, ಅಲ್ಲಿನ ಟೆಕ್ ವಲಯದಲ್ಲಿ ಅರ್ಹತೆಗಿಂತ (Merit) ಹೆಚ್ಚಾಗಿ ರಾಷ್ಟ್ರೀಯತೆಯ ಆಧಾರದ ಮೇಲೆ ನಾಯಕತ್ವದ ಪಾತ್ರಗಳು ಸಿಗುತ್ತಿದ್ದುದರಿಂದ, ಸೃಜನಶೀಲತೆ ಮತ್ತು ಪರಿಣತಿಗೆ ಬೆಲೆ ಸಿಗುತ್ತಿಲ್ಲ ಎಂದು ಅವರು ಗಮನಿಸಿದರು.
ನೆಟ್ಟಿಗರ ಪ್ರತಿಕ್ರಿಯೆಗಳು:
ಆಡ್ವಿನ್ ಅವರ ನಿರ್ಧಾರಕ್ಕೆ ಹಲವಾರು ನೆಟ್ಟಿಗರು ತಮ್ಮ ಅನುಭವಗಳನ್ನು ಹಂಚಿಕೊಂಡು ಬೆಂಬಲಿಸಿದ್ದಾರೆ:
ಒಬ್ಬ ನೆಟ್ಟಿಗನ ಪ್ರತಿಕ್ರಿಯೆ: ನಾನು ಇದನ್ನು ಒಪ್ಪುತ್ತೇನೆ. ನಾನು ಕೂಡ ಅಬುಧಾಬಿಯಲ್ಲಿ ಕೆಲಸ ಮಾಡಿದ್ದೇನೆ. ಅಲ್ಲಿನ 7 ರಿಂದ ರಾತ್ರಿ 8 ರವರೆಗಿನ ಕೆಲಸ, 3 ಗಂಟೆಗಳ ಊಟದ ವಿರಾಮ, ವಾರಕ್ಕೆ 6 ದಿನ ಕೆಲಸ ಮಾಡುವ ವ್ಯವಸ್ಥೆಗಳು ತುಂಬಾ ಹಿಂಸೆಯಾಗಿರುತ್ತದೆ.
ಇತರರ ಅಭಿಪ್ರಾಯ: “ಹಣಕ್ಕಾಗಿ ವಿದೇಶಕ್ಕೆ ಹೋಗುತ್ತೇವೆ, ಆದರೆ ಅಲ್ಲಿ ಪಡುವ ಕಷ್ಟ ಯಾರಿಗೂ ಬೇಡ.”
ನಾನು ಕೂಡ ಅಲ್ಲಿ ಕೆಲಸ ಬಿಟ್ಟು ಬಂದಿದ್ದೇನೆ. ಅಲ್ಲಿ ಕೆಲಸದ ಸಮಯ ಹುಚ್ಚುತನದಂತಿರುತ್ತದೆ, ಮತ್ತು ಸಂಬಳ ಸಂಪೂರ್ಣವಾಗಿ ನಿಮ್ಮ ಪಾಸ್‌ಪೋರ್ಟ್ ಅನ್ನು ಅವಲಂಬಿಸಿರುತ್ತದೆ. ಯುಕೆ ಮೂಲದವರಿಗೆ ನನಗಿಂತ ದುಪ್ಪಟ್ಟು ಸಂಬಳ ಮತ್ತು 5 ದಿನಗಳ ಕೆಲಸವಿತ್ತು. halfdevil_
ಯುಎಇಯಲ್ಲಿ ಕೆಲಸ ಪಡೆಯುವುದು ಉತ್ತಮ ಆದಾಯ, ತೆರಿಗೆ-ಮುಕ್ತ ಉಳಿತಾಯ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಜೀವನದ ಕಠಿಣ ಭಾಗವನ್ನು ಯಾರೂ ಹೇಳುವುದಿಲ್ಲ. ಆರ್ಥಿಕ ಭದ್ರತೆಯ ಹಂತಕ್ಕೆ ಬಂದಾಗ, ನಾವು ಹಣಕ್ಕಿಂತ ಬೇರೆ ವಿಷಯಗಳ ಬಗ್ಗೆ ಯೋಚಿಸಬೇಕು. vish_.s
OnePlus 15 ಇಂದು ಭಾರತದಲ್ಲಿ ಲಾಂಚ್;₹72,999 ಆರಂಭಿಕ ಬೆಲೆಯಲ್ಲಿ ಸಿಗುವ ಪ್ರಮುಖ ಫೀಚರ್ಸ್‌ಗಳೇನು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


