Saturday, November 7, 2026
spot_img
More
    spot_img
    HomeEntertainmentಬ್ರಾಹ್ಮಣ, ಶೂದ್ರರೆಂದರೆ ಯಾರು? ಮನುಸ್ಮೃತಿ ಪ್ರಕಾರ ಜಾತಿಯನ್ನು ಹೀಗೆ ಅಳೆಯುತ್ತಿದ್ದರು ಎಂದ ರಾಜಮೌಳಿ!

    ಬ್ರಾಹ್ಮಣ, ಶೂದ್ರರೆಂದರೆ ಯಾರು? ಮನುಸ್ಮೃತಿ ಪ್ರಕಾರ ಜಾತಿಯನ್ನು ಹೀಗೆ ಅಳೆಯುತ್ತಿದ್ದರು ಎಂದ ರಾಜಮೌಳಿ!

    ಮೊನ್ನೆಯಷ್ಟೇ ( ನವೆಂಬರ್‌ 15 ) ರಾಜಮೌಳಿ ಹಾಗೂ ಮಹೇಶ್‌ ಬಾಬು ಕಾಂಬಿನೇಷನ್‌ನ ಚಿತ್ರದ ಶೀರ್ಷಿಕೆ ಅನಾವರಣಗೊಂಡಿತು. ಆರಂಭದಲ್ಲಿ ಗ್ಲೋಬ್‌ಟ್ರಾಟರ್‌ ಎಂಬ ತಾತ್ಕಾಲಿಕ ಶೀರ್ಷಿಕೆಯನ್ನು ಇಟ್ಟಿದ್ದ ರಾಜಮೌಳಿ ಚಿತ್ರಕ್ಕೆ ವಾರಣಾಸಿ ಎಂಬ ಶೀರ್ಷಿಕೆಯನ್ನು ನಿಗದಿಪಡಿಸಿದ್ದು, ನಿನ್ನೆ ಮಹೇಶ್‌ ಬಾಬು ಫಸ್ಟ್‌ಲುಕ್‌ ಹಾಗೂ ಪಾತ್ರದ ಹೆಸರನ್ನು ಸಣ್ಣ ಟೀಸರ್‌ನೊಂದಿಗೆ ಘೋಷಿಸಲಾಯಿತು.

    ಇನ್ನು ಈ ಕಾರ್ಯಕ್ರಮದಲ್ಲಿ ಟೀಸರ್‌ ಪ್ರಸಾರವಾಗುವಾಗ ತಾಂತ್ರಿಕ ತೊಂದರೆಗಳು ಸಂಭವಿಸಿ ತಡವಾಯಿತು. ಕೊನೆಗೂ ಟೀಸರ್‌ ಪ್ರಸಾರವಾಗುತ್ತಿದ್ದಂತೆ ಮಾತನಾಡಿದ ರಾಜಮೌಳಿ ತಮ್ಮ ತಂದೆ ಹನುಮಂತನ ಬಗ್ಗೆ ಹೇಳಿದ ಹೇಳಿಕೆಯನ್ನು ಉಲ್ಲೇಖಿಸಿ ಟೀಕಿಸಿದರು. ಹನುಮ ನಮ್ಮ ಬೆನ್ನ ಹಿಂದೆಯೇ ಇರುತ್ತಾನೆ ಹಾಗೂ ಎದೆ ತಟ್ಟಿ ಕಾಪಾಡುತ್ತಾನೆ ಎಂದಿದ್ದರು. ಇದೇನಾ ಕಾಪಾಡುವುದು? ಎಂದು ಟೀಸರ್‌ ಪ್ರಸಾರದಲ್ಲಿ ತೊಂದರೆಯಾಗಿದ್ದಕ್ಕೆ ಕಿಡಿಕಾರಿದರು ಹಾಗೂ ತನಗೆ ದೇವರ ಮೇಲೆ ದೊಡ್ಡ ನಂಬಿಕೆಯೇನೂ ಇಲ್ಲ ಎಂದರು.

    ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ರಾಜಮೌಳಿ ಓರ್ವ ನಾಸ್ತಿಕ ಎಂಬ ದೊಡ್ಡ ಚರ್ಚೆಗಳು ಆರಂಭವಾದವು. ನಿರೀಕ್ಷೆಯಂತೆ ಬಲಪಂಥೀಯರು ಹಾಗೂ ದೇವರ ಭಕ್ತರು ರಾಜಮೌಳಿ ವಿರುದ್ಧ ಕಿಡಿಕಾರಿ ಕ್ಷಮೆಯಾಚಿಸುವಂತೆ ಪಟ್ಟುಹಿಡಿದರು. ಇದರ ಜತೆಜತೆಗೆ ರಾಜಮೌಳಿ ಈ ಹಿಂದೆ ಮಾಡಿದ್ದ ಟ್ವೀಟ್‌ಗಳೂ ಸಹ ವೈರಲ್‌ ಆದವು.

    ರಾಜಮೌಳಿ ಮನಸ್ಮೃತಿ ಪ್ರಕಾರ ಜಾತಿವ್ಯವಸ್ಥೆ ಹೇಗೆ ರೂಪುಗೊಂಡಿತ್ತು ಎಂಬುದರ ಕುರಿತು 2012ರಲ್ಲಿ ಬರೆದುಕೊಂಡಿದ್ದ ಟ್ವೀಟ್‌ ಸಹ ಈ ಸಮಯದಲ್ಲಿ ವೈರಲ್‌ ಆಗಿದೆ. ಮನುಸ್ಮೃತಿಯ ಪ್ರಕಾರ ಜಾತಿ ವ್ಯವಸ್ಥೆ ಹೇಗಿತ್ತು ಎಂದರೆ ಅದನ್ನು ನಮ್ಮ ಜೀವನಶೈಲಿ ಮೇಲೆ ಅಳೆಯಲಾಗುತ್ತಿತ್ತೇ ಹೊರತು ನಮ್ಮ ಹುಟ್ಟಿನಿಂದಲ್ಲ, ನನ್ನ ಜತೆ ಟೆನ್ನಿಸ್‌ ಆಡುತ್ತಿದ್ದ ಪ್ರಸಾದ್‌ ಎಂಬ ಜಂಟಲ್‌ಮ್ಯಾನ್‌ ಒಬ್ಬರು ಇದರ ಕುರಿತು ಇನ್ನೂ ಚೆನ್ನಾಗಿ ವಿವರಿಸಿದ್ದರು ಎಂದು ಬರೆದುಕೊಂಡಿದ್ದರು.

    ಮೊದಲಿಗೆ ಪಂಚಮ ಜಾತಿ (ಅಸ್ಪೃಶ್ಯರು): ಜೀವನ ಸಾಗಿಸಲು ಇತರರ ಮೇಲೆ ಅವಲಂಬಿತರಾಗಿರುವವರು. ತನಗಾಗಿ ಹಾಗೂ ತನ್ನ ಕುಟುಂಬಕ್ಕಾಗಿ ಬಾಳುವವನು ಶೂದ್ರ. ತನಗಾಗಿ ಹಾಗೂ ತನ್ನ ಜತೆ ವ್ಯವಹಾರ ಮಾಡುವವರಿಗಾಗಿ ಲಾಭ ಮಾಡಿಕೊಳ್ಳುವವನು ವೈಶ್ಯ. ತನ್ನ ಕೆಳಗಿನವರು ತಿಂದ ಬಳಿಕ ತಾನು ತಿನ್ನುವವನು ಕ್ಷತ್ರಿಯ. ಮೊದಲು ತಾನು ಕಲಿತು ಬಳಿಕ ಇತರರಿಗೆ ಬೋಧನೆ ಮಾಡುವವನು ಬ್ರಾಹ್ಮಣ ಎಂದು ಬರೆದುಕೊಂಡಿದ್ದರು.

    ಈ ಟ್ವೀಟ್‌ ವೈರಲ್‌ ಆಗಿದ್ದು, ಇದನ್ನು ಕಂಡ ಬಳಿಕ ರಾಜಮೌಳಿ ಓರ್ವ ನಾಸ್ತಿಕ ಎಂದು ಹೇಳುತ್ತಿದ್ದವರು ಈತ ಪೂರ್ಣ ಪ್ರಮಾಣದ ನಾಸ್ತಿಕನಲ್ಲ ಎಂದು ಕಾಲೆಳೆದರೆ, ಇನ್ನೂ ಕೆಲವರು ಈ ವಿವರಣೆಯಲ್ಲಿಯೂ ತಪ್ಪು ಹುಡುಕಲು ಆರಂಭಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search