ಪ್ರಸ್ತುತ ಯುಎಇಯಲ್ಲಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025 ಟೂರ್ನಿ ನಡೆಯುತ್ತಿದ್ದು, ಗ್ರೂಪ್ ಹಂತದ 6ನೇ ಪಂದ್ಯದಲ್ಲಿ ಭಾರತ ಎ ಹಾಗೂ ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಿದ್ದವು.
ನಿನ್ನೆ ( ನವೆಂಬರ್ 16 ) ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನ ಭಾರತದ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 19 ಓವರ್‌ಗಳಲ್ಲಿ 136 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಪಾಕ್‌ಗೆ 137 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಕೇವಲ 13.2 ಓವರ್‌ಗಳಲ್ಲಿ ಬೆನ್ನಟ್ಟಿದ ಪಾಕಿಸ್ತಾನ 2 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು.
ಭಾರತ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ 45 ರನ್ ಬಾರಿಸಿದರೆ, ಪ್ರಿಯನ್ಶ್ ಆರ್ಯ 10 ರನ್, ನಮನ್ ಧೀರ್ 20 ಎಸೆತಗಳಲ್ಲಿ 35, ನಾಯಕ ಜತೇಶ್ ಶರ್ಮಾ 5, ನೇಹಲ್ ವಧೇರಾ 8, ಅಶುತೋಶ್ ಶರ್ಮಾ ಡಕ್‌ಔಟ್, ರಮಣ್‌ದೀಪ್ ಸಿಂಗ್ 11, ಹರ್ಷ್ ದುಬೆ 19, ಯಶ್ ಠಾಕೂರ್ 2, ಸುಯಶ್ ಶರ್ಮಾ ಡಕ್‌ಔಟ್ ಹಾಗೂ ಗುರ್ಜಪ್‌ನೀತ್ ಸಿಂಗ್ ಅಜೇಯ 1 ರನ್ ಬಾರಿಸಿದರು.
ಪಾಕಿಸ್ತಾನದ ಪರ ಶಾಹಿದ್ ಅಜೀಜ್ 3 ವಿಕೆಟ್, ಸಾದ್ ಮಸೂದ್ ಹಾಗೂ ಮಾಜ್ ಸದಾಖತ್ ತಲಾ 2 ವಿಕೆಟ್, ಉಬೈದ್ ಶಾ, ಅಹ್ಮದ್ ದನಿಯಾಲ್ ಹಾಗೂ ಸುಫಿಯನ್ ಮುಖೀಮ್ ತಲಾ ಒಂದೊಂದು ವಿಕೆಟ್ ಪಡೆದರು.
ಪಾಕಿಸ್ತಾನ ಇನ್ನಿಂಗ್ಸ್: ತಂಡದ ಪಾರ ಆರಂಭಿಕನಾಗಿ ಕಣಕ್ಕಿಳಿದ ಮಾಜ್ ಸದಾಖತ್ 47 ಎಸೆತಗಳಲ್ಲಿ ಅಜೇಯ 79 ರನ್, ಮೊಹಮ್ಮದ್ ನಯೀಮ್ 14, ಯಾಸಿರ್ ಖಾನ್ 11 ಹಾಗೂ ಮೊಹಮ್ಮದ್ ಫಾಯಿಖ್ ಅಜೇಯ 16 ರನ್ ಬಾರಿಸಿದರು.
ಭಾರತದ ಪರ ಯಶ್ ಠಾಕೂರ್ ಹಾಗೂ ಸುಯಶ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.
ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಒಟ್ಟು 29 ಕೃಷ್ಣಮೃಗಗಳ ಸಾವು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


