ಬಿಗ್ಬಾಸ್ ಕನ್ನಡ ಸೀಸನ್ 12ರಲ್ಲಿ ಜಡೆಜಗಳ ಜೋರಾಗಿದೆ. ಅಶ್ವಿನಿ ಗೌಡ ಹಾಗೂ ತಂಡ ಸದಾ ರಕ್ಷಿತಾ ವಿರುದ್ಧ ಕೆಂಡಕಾರುತ್ತಲೇ ಇದೆ. ಆರಂಭದಿಂದಲೂ ರಕ್ಷಿತಾ ವಿರುದ್ಧ ಪೈಪೋಟಿ ಒಡ್ಡುತ್ತಲೇ ಬಂದಿರುವ ಅಶ್ವಿನಿ ಗೌಡ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದಾರೆ.
ಇನ್ನು ರಕ್ಷಿತಾಗೆ ಆಕೆಯ ನೇರ ನುಡಿಯಿಂದಾಗಿಯೇ ದೊಡ್ಡ ಮಟ್ಟದ ಅಭಿಮಾನಿಗಳು ಹುಟ್ಟಿಕೊಂಡಿದ್ದು, ಅಪಾರ ಬೆಂಬಲವನ್ನು ಪಡೆದುಕೊಂಡಿದ್ದಾರೆ. ಇನ್ನು ಕಳೆದ ವಾರದ ಆಟದಲ್ಲಿ ರಕ್ಷಿತಾ ತನ್ನ ತಂಡದ ವಿರುದ್ಧವೇ ಮಾಡಿದ ಒಂದು ತಪ್ಪು ಟೀಕೆಗೊಳಗಾಗಿದೆ. ಸ್ವತಃ ಕಿಚ್ಚ ಸುದೀಪ್ ರಕ್ಷಿತಾಗೆ ಕ್ಲಾಸ್ ತೆಗೆದುಕೊಳ್ಳುವಂತಾಗಿದೆ.
ತಮ್ಮದೇ ತಂಡಕ್ಕೆ ತೊಂದರೆ ಕೊಡುವುದೇಕೆ ಎಂದು ಪ್ರಶ್ನಿಸಿದ ಕಿಚ್ಚ ಸುದೀಪ್ಗೆ ನಾನು ಅವರಿಗೆ ತೊಂದರೆ ಕೊಟ್ಟೆ ಎಂದು ನಿಮಗೆ ಏಕೆ ಎನಿಸಿತು ಎಂದು ಮರುಪ್ರಶ್ನೆ ಹಾಕಿದ ರಕ್ಷಿತಾಗೆ ಉತ್ತರಿಸಿದ ಕಿಚ್ಚ ನನ್ನ ಪಿತ್ತ ನೆತ್ತಿಗೇರಿತಲ್ಲ ಅದಕ್ಕಿಂತ ಮುಂಚೆ ಎನಿಸಿತು ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಅಲ್ಲದೇ ರಕ್ಷಿತಾ ಅವರೇ ನಾನು ಎರಡು ರೀತಿ ನಗುತ್ತೇನೆ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ ಎಂದು ಕಿಡಿಕಾರಿದ್ದರು.
ಈ ಹೇಳಿಕೆಗೆ ಕರಾವಳಿ ಮೂಲದ ಮಹಿಳೆಯೊಬ್ಬರು ಕಿಚ್ಚ ಸುದೀಪ್ ವಿರುದ್ಧ ವಿಡಿಯೊ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ನನ್ನ ಪ್ರಶ್ನೆ ನೇರವಾಗಿ ಸುದೀಪ್ ಅವರಿಗೆ. ಮೂರು ವಾರಗಳಿಂದ ಅಶ್ವಿನಿ ಗೌಡ ರಕ್ಷಿತಾಗೆ ಸ್ಲಮ್ನಿಂದ ಬಂದವಳು, ಅವಳ ಲೆವೆಲ್ಗೆ ಹೋಗಿ ನಾವು ಮಾತನಾಡಲು ಆಗುವುದಿಲ್ಲ, ಎಸ್ ಕ್ಯಾಟಗರಿ, ಈಡಿಯಟ್, ಗಂಡಸರ ಕೈ ಹಿಡಿದುಕೊಂಡು ರೂಮಲ್ಲಿ ಕುಳಿತುಕೊಂಡು ಮಾತನಾಡುತ್ತಾಳೆ ಎಂದೆಲ್ಲ ನಿಮ್ಮ ಮಗಳ ವಯಸ್ಸಿನ ಹುಡುಗಿ ರಕ್ಷಿತಾ ಬಗ್ಗೆ ಕತ್ತೆ ವಯಸ್ಸಿನ ಹೆಂಗಸು ಅಶ್ವಿನಿ ಗೌಡ ಮಾತನಾಡುತ್ತಾಳೆ. ಆಗ ಯಾಕೆ ನಿಮ್ಮ ಪಿತ್ತ ನೆತ್ತಿಗೇರಲಿಲ್ಲ? ಆಗ ಯಾಕೆ ನಿಮ್ಮ ನುಡಿ ಮೆತ್ತಗಿತ್ತು? ಯಾಕೆಂದರೆ ಅಶ್ವಿನಿ ಗೌಡ ಶ್ರೀಮಂತರ ಮನೆಯವಳು, ರಕ್ಷಿತಾ ಬಡ ಕುಟುಂಬದ ಹುಡುಗಿ. ನಿಮಗೆ ಎಲ್ಲಿ ಬಕೆಟ್ ಹಿಡಿಯಬೇಕೋ ಅಲ್ಲಿ ಬಕೆಟ್ ಹಿಡಿಯುತ್ತೀರಿ. ನೀವು ಇಂತಹ ಕೆಲಸ ಮಾಡುವುದಾದರೆ ಶ್ರೀಮಂತರನ್ನೇ ಹಾಕಿಕೊಂಡು ಬಿಗ್ಬಾಸ್ ಮಾಡಿ, ಯಾಕೆ ಬಡವರನ್ನು ಕರೆಸಿ ಅವಮಾನವನ್ನು ಮಾಡುತ್ತೀರಿ? ಅದೇ ಜಾನ್ವಿ ಬಗ್ಗೆ ಎರಡನೇ ಪ್ರೋಮೊದಲ್ಲಿ ಮಾತನಾಡುವಾಗ ತುಂಬಾ ಸಾಫ್ಟ್ ಆಗಿ ಮಾತನಾಡುತ್ತೀರಿ. ನಾಚಿಕೆಯಾಗಲ್ವ ನಿಮಗೆ? ಎಂದು ಕಿಚ್ಚನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


