Monday, August 31, 2026
spot_img
More
    spot_img
    HomeJobsಕರ್ನಾಟಕ ಪೊಲೀಸ್ ನೇಮಕಾತಿ: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್, ಹುದ್ದೆಗಳ ವಿವರ

    ಕರ್ನಾಟಕ ಪೊಲೀಸ್ ನೇಮಕಾತಿ: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್, ಹುದ್ದೆಗಳ ವಿವರ

    ಕರ್ನಾಟಕ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ತಯಾರಿ ನಡೆಸಿದೆ. ಒಟ್ಟು 3,500 ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆ? ನಿಗದಿ ಮಾಡಲಾಗಿದೆ? ಎಂದು ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ ಇವರಿಗೆ ಪತ್ರವನ್ನು ಬರೆಯಲಾಗಿದೆ.

    Advertisement

    ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರ ಕಛೇರಿ ಪೊಲೀಸ್ ಮಹಾನಿರ್ದೇಶಕರು, ನೇಮಕಾತಿ ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಪತ್ರವು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿಮಾಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.

    13/11/2025ರಂದು ಬರೆದಿರುವ ಪತ್ರದಲ್ಲಿ ಸರ್ಕಾರದ ವಿವಿಧ ದಿನಾಂಕಗಳ ಪತ್ರವನ್ನು ಉಲ್ಲೇಖಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವಿವಿಧ ನಗರ/ ಜಿಲ್ಲಾ ಪೊಲೀಸ್‌ ಘಟಕಗಳಲ್ಲಿ ಕಲ್ಯಾಣ ಕರ್ನಾಟಕೇತರ ಮೀಸಲಾತಿಯಡಿಯಲ್ಲಿ ರಿಕ್ತವಿರುವ ಒಟ್ಟು 3,500 ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು (ಸಿಪಿಸಿ) ನೇರ ನೇಮಕಾತಿಯ ಮೂಲಕ ಭರ್ತಿಮಾಡಲು ಸರ್ಕಾರವು ಅನುಮತಿ ನೀಡುತ್ತದೆ.

    ಆದ್ದರಿಂದ, ಸರ್ಕಾರದ ಪತ್ರವನ್ನು ಹಾಗೂ ಸದರಿ ಪತ್ರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಿರುವ 3,500 ಕಲ್ಯಾಣ ಕರ್ನಾಟಕೇತರ ಮೀಸಲಾತಿಯ ನಾಗರೀಕ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆಗಳನ್ನು ಇಲಾಖೆಯ ವಿವಿಧ ನಗರ/ ಜಿಲ್ಲಾ ಘಟಕಗಳಿಗೆ ಹಂಚಿಕಮಾಡಿರುವ ಸಂಖ್ಯಾವಾರು ವಿವರವನ್ನು ತಯಾರಿಸಿ ಲಗತ್ತಿಸಿದೆ.

    ಸರ್ಕಾರವು ನೇರ ನೇಮಕಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ನೀಡಿರುವ ನಿರ್ದೇಶನಗಳು ಹಾಗೂ ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಸಮತಳ ಮೀಸಲಾತಿ, ಕ್ರೀಡಾ ಮೀಸಲಾತಿ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳ ನೇಮಕಾತಿಗೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನಗಳಂತೆ ಸಂಬಂಧಪಟ್ಟ ಘಟಕಗಳಿಂದ ನೇರ ಹಾಗೂ ಸಮತಳ ವರ್ಗೀಕರಣವನ್ನು ಸ್ಪಷ್ಟ ಬ್ಯಾಕ್‌ಲಾಗ್ ವಿವರಗಳೊಂದಿಗೆ ಪಡೆದು ಸದರಿ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

    ತೃತೀಯ ಲಿಂಗದ ಅಭ್ಯರ್ಥಿಗಳ ಮೀಸಲಾತಿ ಹಾಗೂ ನೇಮಕಾತಿಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ವಿವರವನ್ನು ಲಗತ್ತಿಸಿ ಕಳುಹಿಸಲಾಗಿದೆ ಎಂದು ಹೇಳಿದ್ದು, ಪತ್ರವನ್ನು ಎಲ್ಲಾ ಪೊಲೀಸ್ ನಗರ ಪೊಲೀಸ್ ಆಯುಕ್ತರುಗಳಿಗೆ, ಎಲ್ಲಾ ಜಿಲ್ಲಾ ಪೊಲೀಸ್‌ ಅಧೀಕ್ಷಕರುಗಳಿಗೆ (ಕೆಜಿಎಫ್ ಸೇರಿದಂತೆ) ಕಳಿಸಲಾಗಿದೆ.

    ತಮ್ಮ ಘಟಕಗಳಿಗೆ ಹಂಚಿಕೆ ಮಾಡಿರುವ ಹುದ್ದೆಗಳಿಗೆ ಸಂಬಂಧಿಸಿದಂತೆ ನೇರ ಮತ್ತು ಸಮತಲ ವರ್ಗೀಕರಣವನ್ನು (ಬ್ಯಾಕ್‌ಲಾಗ್ ಹುದ್ದೆಗಳು ಸೇರಿದಂತೆ) ನೇಮಕಾತಿ ವಿಭಾಗಕ್ಕೆ ಒದಗಿಸಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಹೇಳಿದೆ.

    ಯಾವ ಜಿಲ್ಲೆಗೆ ಎಷ್ಟು ಹುದ್ದೆ?: ಬೆಂಗಳೂರು ನಗರ ಒಟ್ಟು 2,235 ಕ್ರೀಡಾ ಮೀಸಲಾತಿ 105, ಕಲ್ಯಾಣ ಕರ್ನಾಟಕೇತರ 2,130. ಮೈಸೂರು ನಗರ ಒಟ್ಟು 75. ಕಲ್ಯಾಣ ಕರ್ನಾಟಕೇತರ 70. ಹುಬ್ಬಳ್ಳಿ-ಧಾರವಾಡ ಸಿಟಿ ಒಟ್ಟು 75. ಕಲ್ಯಾಣ ಕರ್ನಾಟಕತೇಕರ 75.

    ಮಂಗಳೂರು ಸಿಟಿ ಒಟ್ಟು 125, ಬೆಂಗಳೂರು ನಗರ 50, ತುಮಕೂರು 50, ಕೋಲಾರ 50, ಚಿಕ್ಕಬಳ್ಳಾಪುರ 50, ಮೈಸೂರು ಜಿಲ್ಲೆ 60, ಚಾಮರಾಜನಗರ 50, ಹಾಸನ 50, ಕೊಡಗು 50, ಹಾಸನ 50 ಹುದ್ದೆಗಳು.

    ದಾವಣಗೆರೆ 50, ಶಿವಮೊಗ್ಗ 80, ಚಿತ್ರದುರ್ಗ 50, ಹಾವೇರಿ 50, ದಕ್ಷಿಣ ಕನ್ನಡ 70, ಉಡುಪಿ 100, ಕಾರವಾರ 50, ಚಿಕ್ಕಮಗಳೂರು 50, ಗದಗ 35 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ನೀಡಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading