ಕೊಪ್ಪಳ: ಮಹಿಳೆಯೊಬ್ಬರಿಂದ ಹಣ ಪಡೆದಿದ್ದ ಕಿರಾತಕನೋರ್ವ ಆಕೆಗೆ ಹಣ ಬಾಕಿ ನೀಡಬೇಕಿದ್ದ ಹಣವನ್ನು ವಾಪಸ್ ಕೊಡುವುದಾಗಿ ಕರೆಸಿಕೊಂಡು ತನ್ನ ಸ್ನೇಹಿತರ ಜತೆಗೂಡಿ ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಮಾದ್ಲೂರು ಗ್ರಾಮದಲ್ಲಿ ನಡೆದಿದೆ.
ವಿಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ 36 ವರ್ಷದ ಮಹಿಳೆ ಸಂತ್ರಸ್ತೆಯಾಗಿದ್ದು, ಈಕೆ ಸಮಾಜ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಎನ್ನಲಾಗಿದೆ. ಈಕೆಗೆ ಪರಿಚಯಸ್ಥನಾಗಿದ್ದ ಓರ್ವ ಬಾಕಿ ಇರುವ ಹಣ ವಾಪಸ್ ಕೊಡುತ್ತೇನೆಂದು ಆಕೆಯನ್ನು ನಿನ್ನೆ ( ನವೆಂಬರ್ 16 ) ಕುಷ್ಟಗಿಗೆ ಕರೆಸಿಕೊಂಡಿದ್ದ.
ಬಳಿಕ ಆಕೆಯನ್ನು ತನ್ನ ಇತರೆ ಮೂವರು ಸ್ನೇಹಿತರ ಜತೆಗೂಡಿ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಪಾನೀಯವನ್ನು ಜ್ಯೂಸ್ ಎಂದು ಕುಡಿಸಿದ್ದಾರೆ. ಬಳಿಕ ಆಕೆಯನ್ನು ಪಾಳು ಬಿದ್ದ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಂತ್ರಸ್ತೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಲಬುರ್ಗಾ ಪೊಲೀಸ್ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಲಕ್ಷ್ಮಣ ಕೆಂಚಪ್ಪ ಕರಗುಳಿ ರೋನ್, ಬಸವರಾಜ್ ಸಕ್ರೆಫ್, ಭೀಮಪ್ಪ ಮಹಾದೇವಪ್ಪ ಮಸ್ಕಿ ಹನುಮಾಪುರ ಹಾಗೂ ಶಾಹಿಕುಮಾರ ಮಹದೇವಪ್ಪ ಮಸ್ಕಿ ಹನುಮಾಪುರ ಬಂಧಿತ ಆರೋಪಿಗಳು.
ಅಂಧ ವನಿತೆಯರ ಟಿ20 ವಿಶ್ವಕಪ್: ಪಾಕ್ ಆಟಗಾರ್ತಿಯರ ಕೈಕುಲುಕಿ ಕ್ರೀಡಾಸ್ಪೂರ್ತಿ ಮೆರೆದ ಭಾರತೀಯರು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


