ಬೆಳಗಾವಿ: “ಐದು ವರ್ಷ ನಾನೇ ಮುಖ್ಯಮಂತ್ರಿ ಆಗಿರಬೇಕೆಂದು ಕರ್ನಾಟಕದ ಜನ ಆಶೀರ್ವಾದ ಮಾಡಿದ್ದಾರೆ. ಹೈಕಮಾಂಡ್ ತೀರ್ಮಾನ ಮಾಡುವವರೆಗೂ ಈಗಲೂ ನಾನೇ ಮುಖ್ಯಮಂತ್ರಿ” ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳುವ ಮೂಲಕ ನಾಯಕತ್ವದ ಬಗ್ಗೆ ಉಂಟಾಗಿರುವ ಗೊಂದಲಕ್ಕೆ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನಸಭಾ ಕಲಾಪದ ವೇಳೆ ವಿರೋಧಪಕ್ಷದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ನಡೆಯುತ್ತಿರುವ ಊಹಾಪೆÇೀಹಗಳಿಗೆ ವಿಧಾನಸಭೆಯಲ್ಲೇ ತೆರೆ ಎಳೆದರು. ವಿರೋಧಪಕ್ಷದವರು ಉದ್ದೇಶಪೂರ್ವಕವಾಗಿ ಸರ್ಕಾರದ ಸ್ಥಿರತೆಯ ಬಗ್ಗೆ ಅನುಮಾನ ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರಶ್ನೊತ್ತರ ವೇಳೆಯಲ್ಲಿ ಆಡಳಿತ ಪಕ್ಷದ ಶಾಸಕರಾ ಡಾ. ಹೆಚ್.ಡಿ.ರಂಗನಾಥ್ ಅವರ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿಗಳಿಂದ ತಾರತಮ್ಯವಾಗಿದ್ದರೆ ಮುಂದಿನ ವರ್ಷದಿಂದ ಸರಿಪಡಿಸವುದಾಗಿ ಭರವಸೆಯನ್ನು ನೀಡಿದರು.ಆಗ ವಿರೋಧ ಪಕ್ಷದ ನಾಯಕ ಅಶೋಕ್, ರಂಗನಾಥ್ ಅವರು ಆಕ್ರೋಶ’ರಿತರಾಗಿ ಮಾತನಾಡುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉರಿಯುವುದಕ್ಕೆ ಉಪ್ಪು ಹಾಕಬೇಡಿ ಎಂದರು, ಕೂಡಲೇ ಅಶೋಕ್ ಹಾಗಾದರೆ ಉರಿಯುತ್ತಿರುವುದು ನಿಜ ಎಂಬಂತೆ ಒಪ್ಪಿಕೊಂಡಂತಾಯಿತಲ್ಲ ಎಂದು ಸಿಎಂ ಅವರನ್ನು ಛೇಡಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಅವರು ಇದು ಗಾದೆ ಮಾತು ಎಂದು ಸ್ಪಷ್ಟನೆ ನೀಡಿದರು.
ಆಗ ಮಧ್ಯ ಪ್ರವೇಶಿಸಿದ ಸುನೀಲ್‍ಕುಮಾರ್ ನೀವು ಹೇಳಿದ್ದು ಗಾದೆ ಮಾತೋ ಅಥವಾ ಮನಸ್ಸಿನಲ್ಲಿರುವ ಮಾತು ಹೇಳಿದ್ದಿರೋ ಎಂದು ಸ್ಪಷ್ಟನೆಯನ್ನು ಕೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯಮಾತು ಮುಂದುವರಿಸಿ, 2018ರಲ್ಲಿ ನಮಗೆ ಜನಾದೇಶವಿರಲಿಲ್ಲ. ನಾವು ಜೆಡಿಎಸ್ ಮನೆ ಬಾಗಿಲಿಗೆ ಹೋಗಿರಲಿಲ್ಲ, ನೀವು(ಬಿಜೆಪಿ) ಏಕೆ ಅವರ ಜೊತೆ ಹೋಗಿದ್ದೀರಿ? ಎಂದು ಪ್ರಶ್ನಿಸಿದರು.
ಇದೇ ರೀತಿ ಬಿಜೆಪಿ ಶಾಸಕರು ಮತ್ತು ಮುಖ್ಯಮಂತ್ರಿಗಳ ನಡುವೆ ವಾಗ್ವಾದ ನಡೆಯಿತು.
“ಉರಿಯುವುದರ ಮೇಲೆ ಉಪ್ಪು ಹಾಕಬಾರದು ಎಂಬ ಗಾದೆ ಮಾತಿದೆ. ಆದರೆ ವಿರೋಧಪಕ್ಷದವರ ಕೆಲಸವೇ ಉರಿಯುವುದರ ಮೇಲೆ ಉಪ್ಪು ಸುರಿಯುವುದು. ಅವರು ಎಷ್ಟೇ ಪ್ರಚೋದನೆ ಮಾಡಿದರೂ ನಮ್ಮ ಶಾಸಕರು ಪ್ರಚೋದಿತರಾಗುವುದಿಲ್ಲ” .ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬಲವಾದ ಜನಾದೇಶ ದೊರೆತಿದ್ದು, ತಮ್ಮ ಸರ್ಕಾರದೊಂದಿಗೆ 140 ಶಾಸಕರು ದೃಢವಾಗಿ ನಿಂತಿದ್ದಾರೆ ಎಂದು ಅವರು ತಿಳಿಸಿದರು. “ಇದರಲ್ಲಿ ಹುಳಿ ಹಿಂಡುವ ಅಗತ್ಯ ವಿರೋಧಪಕ್ಷಕ್ಕೆ ಇಲ್ಲ” ಎಂದು ವ್ಯಂಗ್ಯವಾಡಿದರು.
2023ರಂತೆ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ, “ಜನರ ನಾಡಿಮಿಡಿತ ನಮಗೆ ಚೆನ್ನಾಗಿ ತಿಳಿದಿದೆ. ಕರ್ನಾಟಕದ ಜನ ಬಿಜೆಪಿಗೆ ಎಂದಿಗೂ ಅಧಿಕಾರ ನೀಡಿಲ್ಲ” ಎಂದು ಟೀಕಿಸಿದರು.
“2008 ಮತ್ತು 2018ರಲ್ಲಿ ಬಿಜೆಪಿ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದರು. ರಾಜ್ಯದ ಜನ ಬಿಜೆಪಿಗೆ ಅಧಿಕಾರ ನೀಡುವುದಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕಾಯಿತು. ಆದರೆ ಅದನ್ನೇ ಪ್ರಶ್ನಿಸುವ ನೈತಿಕತೆ ಬಿಜೆಪಿಗೆ ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಐದು ವರ್ಷ ಸುಭದ್ರ ಆಡಳಿತ
“ನಾವು ಐದು ವರ್ಷ ಸುಭದ್ರ ಸರ್ಕಾರ ನೀಡುತ್ತೇವೆ. ಮತ್ತೆ ಚುನಾವಣೆಗೆ ಹೋಗಿ 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ” ಎಂದು ಸ್ಪಷ್ಟಪಡಿಸಿದರು. 2013 ಮತ್ತು 2023ರಲ್ಲಿ ಜನರು ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಬಿಜೆಪಿಗೆ ಒಂದೇ ಬಾರಿಯೂ ಸ್ಪಷ್ಟ ಜನಾದೇಶ ಸಿಕ್ಕಿಲ್ಲ ಎಂದು ಅವರು ಹೇಳಿದರು.
ಕನಕದಾಸರ “ನಾನು ಹೋದರೆ ಹೋದೇನು” ಎಂಬ ವಚನ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, “ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ. ಈಗಲೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ” ಎಂದು ಘೋಷಿಸಿದರು.
ವಿಧಾನಸಭೆಯಲ್ಲಿ ಈ ಮಾತಿನ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಬಿಜೆಪಿ ನಾಯಕ ಆರ್.ಅಶೋಕ್ ಅವರು “ಸಿಎಂ ಕುರ್ಚಿಗಾಗಿ ಪೂಜೆ-ಪುನಸ್ಕಾರ ನಡೆಯುತ್ತಿದೆ” ಎಂದು ಟಾಂಗ್ ನೀಡಿದರೆ, ಅದಕ್ಕೆ ಪ್ರತಿಯಾಗಿ ಸಿಎಂ “ಅದು ಗಾದೆ ಮಾತು” ಎಂದು ಸಮಜಾಯಿಷಿ ನೀಡಿದರು.
ಇದಕ್ಕೆ ಸುನೀಲ್ ಕುಮಾರ್ “ಹೈಕಮಾಂಡ್ ಒಪ್ಪುವವರೆಗೂ ನಾನೇ ಸಿಎಂ ಎನ್ನುವುದರ ಅರ್ಥವೇನು?” ಎಂದು ಪ್ರಶ್ನಿಸಿದರು. ಇದರಿಂದ ಸದನದಲ್ಲಿ ಮಾತಿನ ಚಕಮಕಿ ಮುಂದುವರಿಯಿತು. ಮುಖ್ಯಮಂತ್ರಿ ಕುರ್ಚಿ ಕುರಿತ ಚರ್ಚೆಗೆ ವಿಧಾನಸಭೆಯಲ್ಲೇ ಸ್ಪಷ್ಟತೆ ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರ ಪೂರ್ಣಾವಧಿ ಮುಂದುವರಿಯಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದರು.
ಒಂದು ಹಂತದಲ್ಲಿ ಅವರು ಸುಮ್ಮನಿದ್ದರೂ, ನೀವು ಸುಮ್ಮನಿರಲ್ಲ. ವಿರೋ’ ಪಕ್ಷ ಇರುವುದೇ ಉಪ್ಪು ಹಾಕಲು, ಕಿತಾಪತಿಗೆ ಪ್ರಚೋದನೆ ಮಾಡಲು. ನೀವು ಏನೇ ಮಾಡಿದರೂ ನಮ್ಮವರು ಪ್ರಚೋದೆಗೆ ಒಳಗಾಗಲ್ಲ. ಜನರು ನಮಗೆ ಆಶರ್ವಾದ ಮಾಡಿ ರ್ಕಾರದಲ್ಲಿ ಇರಿ ಎಂದು ಹೇಳಿದ್ದಾರೆ. ನಾವೇ ಇರುತ್ತೇವೆ. ಈ ಬಗ್ಗೆ ನಿಮಗೆ ಅನುಮಾನ ಬೇಡ ಎಂದರು.
ಗೃಹ ಸಚಿವ ಪರವಮೇಶ್ವರ್ ಮಾತನಾಡಿ,ಜನರು 5 ವರ್ಷ ಜನರು ಅಧಿಕಾರ ನಡೆಸಲು ಆರ್ಶೀವಾದ ಮಾಡಿದ್ದಾರೆ,, ಅದರಂತೆ ನಾವು ಅಧಿಕಾರವಧಿಯನ್ನು ಸೂರ್ಣಗೊಳಿಸುತ್ತೇವೆ ಎಂದು ಹೇಳಬಯಸಿದರು. ಮಾತು ಮುಂದುವರಿಸಿದ ಮುಖ್ಯಮಂತ್ರಿಸಿದ್ದರಾಮಯ್ಯ, ಹೈಕಮಾಂಡ್ ಹೇಳಿದ ಹಾಗೇ ಕೇಳುತ್ತೇವೆ, ನಿಮ್ಮಲ್ಲಿ ಹೇಗೆ ಅಧ್ಯಕ್ಷ ಸ್ಥಾನಕ್ಕೆ ಪೈಪೆÇೀಟಿ ನಡೆಯುತ್ತಿದೆ. ನಮ್ಮ ಅಧಿಕಾರ ನೋಡಿ ಹೊಟ್ಟೆ ಕಿಚ್ಚು ಪಡುತ್ತಿದ್ದೀರಿ ಎಂದು ವಿಪಕ್ಷವನ್ನು ಛೇಡಿಸಿದರು.
ಉಪ ನಾಯಕ ಅರವಿಂದ್ ಬೆಲ್ಲದ ಮಾತನಾಡಿ, ಹೈಕಮಾಂಡ್ ಡಿಸಿಎಂ ಅವರಿಗೆ ಏನೂ ಹೇಳಲಿಲ್ಲ ಎಂದರು.
ಸುರೇಶ್‍ಕುಮಾರ್ ಮಾತನಾಡಿ, ನಾನು ಎಂಬ ಏಕವಚನದಿಂದ ನಾವು ಎಂಬ ಬಹುವಚನದವರೆಗೆ ಎಂಬಂತಿದ್ದೀರಿ ಎಂದು ಕನಕದಾಸರ ವಾಣಿಯೊಂದನ್ನು ಉಲ್ಲೇಖಿಸಿದರು.
ಆಗ ಮಾತನಾಡಿದ ಸಿಎಂ, ನಾನು ಹೋದರೆ ಹೋದೇನು ಎಂಬುದು ಕನಕದಾಸರವಾಣಿ ಎಂದರಲ್ಲದೇ, ನಾನೇ ಈಗ ಸಿಎಂ, ಮುಂದೆಯೂ ಸಿಎಂ ಎಲ್ಲಿಯವರೆಗೆ ಹೈಕಮಾಂಡ್ ಮುಂದುವರಿಯಲು ಹೇಳುತ್ತೋ ಎಂದು ಮಾತು ಮುಂದುವರಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಸುನೀಲ್ ಕುಮಾರ್ ಇದನ್ನೇ ನಾವು ಕೇಳಿದ್ದು ಎಂದರು.
ಶಾಸಕ ಬಸವನಗೌಡ ಯತ್ನಾಳ್ ಮಾತನಾಡಿ, ಐದು ವರ್ಷ ಮುಖ್ಯಮಂತ್ರಿ ಯಾರು? ಸಿದ್ದರಾಮಯ್ಯ ಅವರೇ ಆಗಿರುತ್ತಾರೋ, ಇಲ್ಲವೋ ಎಂಬುದನ್ನು ಖಚಿತಪಡಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಮಾತನಾಡಿ, ನಿಮ್ಮ ಪಕ್ಷದ ಬಿಎಸ್‍ಯಡಿಯೂರಪ್ಪ ಅವರನ್ನು 3 ಬಾರಿ ಏಕೆ ಬದಲಾಯಿಸಿದ್ದೀರಿ ಎಂದು ಕೇಳಿದರು. ಆಗ ಅಶೋಕ್ ಮಾತನಾಡಿ, ನಾನು ಪುಸ್ತಕ ಬರೆಯಬೇಕು ಎಂದು ಕೊಂಡಿದ್ದೇನೆ. ಚಾಣಕ್ಯ ತಂತ್ರ ಅಂದರೆ ಸಿದ್ದರಾಮಯ್ಯ ಅವರ ಚಾಣಕ್ಯ ತನದ್ದಾಗಿದೆ ಎಂದರು. ಒಂದು ಇರುವೆ ಬೇಲಿಗೆ ಹೋಗಬೇಕು ಎಂದು ಬರುತ್ತದೆ ಎಂದು ಹೇಳಿದಾಗ ಸದನದಲ್ಲಿ ಗದ್ದಲ ಉಂಟಾಯಿತು,
ಗೊಂದಲದ ನಡುವೆಯೇ ಮಾತನಾಡಿದ ಅಶೋಕ್, ಇರುವೆ ರಾಹುಲ್‍ಗಾಂಧಿ ಅವರ ಜೇಬು ಸೇರಿದೆ ಎಂದು ವ್ಯಂಗ್ಯವಾಡಿದರು, ಇದಕ್ಕೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯಿಸಿ ಮೊದಲು ನೀವು ಪುಸ್ತಕ ಬರೆಯಿರಿ ಎಂದರು.
ಸಭಾಧ್ಯಕ್ಷರಾದ ಯು ಟಿ ಖಾದರ್ ಮದ್ಯಪ್ರವೇಶಿಸಿ, ಈ ವಿಚಾರದ ರ್ಚೆಗೆ ತೆರೆ ಎಳೆದು ಮುಂದಿನ ಕರ್ಯ ಕಲಾಪವನ್ನು ಮುಂದುವರೆಸಿ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


