ನಿನ್ನೆ ( ಡಿಸೆಂಬರ್ 16 ) ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು ಪ್ರಕ್ರಿಯೆ ಅಬುದಾಬಿಯ ಇತಿಹಾದ್ ಅರೆನಾ ಹೊಟೇಲ್‌ನಲ್ಲಿ ಜರುಗಿತು.
ಎಲ್ಲ ತಂಡಗಳು ಕಳೆದ ತಿಂಗಳು ರಿಟೆನ್ಷನ್ ಪ್ರಕ್ರಿಯೆ ವೇಳೆ ಖಾಲಿ ತಂಡದಿಂದ ಹೊರಹಾಕಿದ ಆಟಗಾರರ ಸ್ಥಾನಕ್ಕೆ ಈ ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿ ಮಾಡಿದವು. ಅದರಲ್ಲಿಯೂ ರಿಟೆನ್ಷನ್‌ನಲ್ಲಿ ಹೆಚ್ಚು ಆಟಗಾರರನ್ನು ಹೊರಹಾಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ದೊಡ್ಡ ಹಣದೊಂದಿಗೆ ಪಾಲ್ಗೊಂಡು ಆಟಗಾರರ ಮೇಲೆ ಹಣದ ಹೊಳೆಯನ್ನೇ ಹರಿಸಿದವು.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 25.2 ಕೋಟಿ ಪಡೆದು ಸೇರ್ಪಡೆಗೊಂಡ ಕೆಮರಾನ್ ಗ್ರೀನ್ ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದ ಆಟಗಾರ ಎನಿಸಿಕೊಂಡರೆ, 18 ಕೋಟಿಗೆ ಅದೇ ತಂಡ ಸೇರಿದ ಮತೀಶಾ ಪತಿರಾಣಾ ಎರಡನೇ ಅತಿ ದುಬಾರಿ ಆಟಗಾರ ಎನಿಸಿಕೊಂಡರು.
ಈ ಇಬ್ಬರನ್ನು ಹೊರತುಪಡಿಸಿದರೆ, ಅತಿಹೆಚ್ಚು ಮೊತ್ತಕ್ಕೆ ಮಾರಾಟವಾದದ್ದು ಭಾರತದ ಇಬ್ಬರು ಅನ್‌ಕ್ಯಾಪ್ಡ್ ಪ್ಲೇಯರ್‌ಗಳಾದ ಪ್ರಕಾಶ್ ವೀರ್ ಹಾಗೂ ಕಾರ್ತಿಕ್ ಶರ್ಮಾಗೆ. ತಲಾ 30 ಲಕ್ಷ ಮುಖಬೆಲೆ ಹೊಂದಿದ್ದ ಈ ಇಬ್ಬರಿಗೂ ತಲಾ 14.2 ಕೋಟಿಯಂತೆ ಚೆನ್ನೈ ಸೂಪರ್ ಕಿಂಗ್ಸ್ ಬರೋಬ್ಬರಿ 28.4 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ.
ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ಈ ಇಬ್ಬರು ಆಟಗಾರರ ಮೇಲೆ ಇಷ್ಟು ಮೊತ್ತ ಸುರಿಯಲು ಸನ್‌ರೈಸರ್ಸ್ ಹೈದರಾಬಾದ್ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಕಾವ್ಯ ಮಾರನ್ ಈ ಇಬ್ಬರು ಆಟಗಾರರನ್ನು ಬರೋಬ್ಬರಿ 14 ಕೋಟಿ ತಲುಪುವ ತನಕ ಬಿಡದೇ ಹರಾಜು ಕೂಗಿದ್ದರು.
ಸನ್‌ರೈಸರ್ಸ್ ಹೈದರಾಬಾದ್ ಈ ಇಬ್ಬರೂ ಆಟಗಾರರಿಗೂ ಸಹ 14 ಕೋಟಿವರೆಗೂ ಬೇಕಂತಲೇ ಪೈಪೋಟಿ ಒಡ್ಡಿ ಕೊನೆಗೆ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಟ್ಟುಕೊಟ್ಟಿತು. ಸದ್ಯ ಈ ಕುರಿತು ಕ್ರಿಕೆಟ್ ಪ್ರಿಯರಲ್ಲಿ ಚರ್ಚೆ ಏರ್ಪಟ್ಟಿದ್ದು, ಬೇಕಂತಲೇ ಕಾವ್ಯ ಮಾರನ್ ಚೆನ್ನೈ ಫ್ರಾಂಚೈಸಿ ಬಳಿ ಹಣ ವ್ಯಯವಾಗುವಂತೆ ಮಾಡಿಸಿದರು ಎಂದು ಕಾಮೆಂಟ್‌ಗಳು ಹಾಗೂ ಟ್ರೋಲ್‌ಗಳು ಹರಿದಾಡುತ್ತಿವೆ. ಹೀಗೆ ಚೆನ್ನೈ ಬಳಿ ಹಣ ವ್ಯಯಿಸುವ ಹಾಗೆ ಮಾಡಿದ ಕಾವ್ಯ ಮಾರನ್ ಬಳಿಕ ಎರಡೂ ಥಮ್ಸ್‌ಅಪ್ ಸಿಗ್ನಲ್ ಕೊಟ್ಟು ಸಂಭ್ರಮಿಸಿದ್ದಾರೆ.
ಆದರೂ ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತಾನೇ ಬಲಿಷ್ಟವಾದ ತಂಡ ರೂಪಿಸುವಲ್ಲಿ ಎಡಿವಿದ್ದನ್ನು ತಳ್ಳಿಹಾಕುವ ಹಾಗಿಲ್ಲ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


