ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಬೆನ್ನು ನೋವಿನ ಚಿಕಿತ್ಸೆಗೆಂದು ಹಾಗೂ ರಕ್ಷಿತಾ ಸೋದರನ ಮದುವೆಯ ದಿನದಂದು ಬಿಟ್ಟರೆ ದರ್ಶನ್ ಇನ್ನೆಲ್ಲೂ ಹೊರಗೆ ಕಾಣಿಸಿಕೊಂಡಿಲ್ಲ.
ಇನ್ನು ಇದೇ ತಿಂಗಳ 16ರಂದು ತಮ್ಮ ಹುಟ್ಟುಹಬ್ಬದ ದಿನದಂದೂ ಸಹ ದರ್ಶನ್ ಅಭಿಮಾನಿಗಳಿಗೆ ಸಿಗಲಿಲ್ಲ. ಈ ವಿಷಯವನ್ನು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ಮುಂಚೆಯೇ ದರ್ಶನ್ ತಿಳಿಸಿದ್ದರು.
ದರ್ಶನ್ ಹುಟ್ಟುಹಬ್ಬದಂದು ಸಿಗದಿದ್ದರೂ ಅವರ ಮುಂಬರುವ ಚಿತ್ರಗಳ ಸಾಲು ಸಾಲು ಅಪ್‌ಡೇಟ್‌ಗಳು ಹುಟ್ಟುಹಬ್ಬಕ್ಕೆ ಸಂಭ್ರಮದ ಟಚ್ ನೀಡಿದ್ದವು. ಸಾಮಾಜಿಕ ಜಾಲತಾಣದ ತುಂಬಾ ಅಭಿಮಾನಿಗಳು ದರ್ಶನ್ ಚಿತ್ರಗಳ ಭಿನ್ನ ವಿಭಿನ್ನ ಫೋಟೊ ಹಾಗೂ ವಿಡಿಯೊಗಳನ್ನು ಹಂಚಿಕೊಂಡು ಹುಟ್ಟುಹಬ್ಬ ಆಚರಿಸಿದರು.
ಇನ್ನೂ ಕೆಲವರು ಅನ್ನದಾನ ಹಾಗೂ ದಿನಸಿ ಹಂಚುವ ಮೂಲಕ ಅರ್ಥಪೂರ್ಣವಾಗಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಿದರು.
ಸದ್ಯ ಈ ಕುರಿತು ದರ್ಶನ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಅಭಿಮಾನಿಗಳ ಈ ಪ್ರೀತಿಯ ಬಗ್ಗೆ ಉದ್ದನೆಯ ಪೋಸ್ಟ್ ಬರೆದುಕೊಂಡು ಭಾವುಕರಾಗಿದ್ದಾರೆ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದು ದರ್ಶನ್ ಅಭಿಮಾನಿಗಳ ಪ್ರೀತಿಗೆ ಶಿರ ಬಾಗಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


