ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಿರುವ ನಟ ದರ್ಶನ್ ಸದ್ಯ ಹೆಚ್ಚಾಗಿ ಹೊರಗೆ ಕಾಣಿಸಿಕೊಳ್ಳದೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಮೊನ್ನೆಯಷ್ಟೇ (ಫೆಬ್ರವರಿ 16) ದರ್ಶನ್ ಹುಟ್ಟುಹಬ್ಬ ನಡೆದಿದ್ದು, ಆ ದಿನವೂ ಸಹ ದರ್ಶನ್ ಎಲ್ಲೂ ಹೊರಗೆ ಕಾಣಿಸಿಕೊಳ್ಳದೇ ಸೈಲೆಂಟ್ ಆಗಿದ್ದಾರೆ. ದರ್ಶನ್ ಸೈಲೆಂಟ್ ಆಗಿದ್ದರೂ ಅವರ ಸಿನಿಮಾಗಳ ಅಪ್ಡೇಟ್ಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಹುಟ್ಟುಹಬ್ಬದ ದಿನದಂದು ಜ್ಯೋತಿಷಿ ಪ್ರಶಾಂತ್ ಕಿಣಿ ಮಾಡಿದ ಟ್ವೀಟ್ ಸಹ ಸದ್ದು ಮಾಡುತ್ತಿದೆ.
ಹೌದು, ಪ್ರಶಾಂತ್ ಕಿಣಿ ತಮ್ಮ ಎಕ್ಸ್ ಖಾತೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 2027ಕ್ಕೆ ರಾಜಕೀಯ ಪ್ರವೇಶಿಸಲಿದ್ದು, ಮಂಡ್ಯದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನು ಇದೇ ಪ್ರಶಾಂತ್ ಕಿಣಿ ದರ್ಶನ್ ಜೈಲಿನಲ್ಲಿದ್ದಾಗ ಎಲ್ಲರಿಗಿಂತ ಮುಂಚೆ ದರ್ಶನ್ ಎಲ್ಲಾ ಕ್ಲೀನ್ ಆಗಿ ಆಚೆ ಬರಲಿದ್ದಾರೆ ಎಂದಿದ್ದರು. ಅಲ್ಲದೇ 2023ರಲ್ಲಿಯೇ 2024ರಲ್ಲಿ ದರ್ಶನ್ಗೆ ಬ್ಯಾಡ್ ಟೈಮ್ ಇದೆ ಎಂದೂ ಸಹ ಪ್ರಶಾಂತ್ ಕಿಣಿ ಹೇಳಿದ್ದರು. ಹೀಗೆ ತಾನು ದರ್ಶನ್ ಕುರಿತಾಗಿ ಹೇಳಿರುವ ಎಲ್ಲಾ ಸಂಗತಿಗಳು ನಿಜವಾಗಿದ್ದು, ಅದೇ ರೀತಿ ದರ್ಶನ್ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಸಹ ಖಚಿತ ಎಂದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


