ಬೆಂಗಳೂರು: ನಾಳೆ (ಫೆಬ್ರವರಿ 19) ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮವು ಶಿವಾಜಿ ಜಯಂತಿಯನ್ನು ನಾಳೆ ಸಂಜೆ 6 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕುರಿತಾಗಿ ಸರ್ಕಾರ ಆಮಂತ್ರಣ ಪತ್ರಿಕೆಯನ್ನೂ ಸಹ ತಯಾರಿಸಿದ್ದು, ಅದರಲ್ಲಿ ಸಿದ್ದರಾಮಯ್ಯ, ಡಿಕೆಶಿ ಹಾಗೂ ಶಿವರಾಜ್ ತಂಗಡಗಿ ಫೋಟೊಗಳಿವೆ.
ಈ ಆಮಂತ್ರಣದ ಫೋಟೊವನ್ನು ಶ್ಯಾಮ್ ಪ್ರಸಾದ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ” ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಶಿವರಾಜ್ ತಂಗಡಗಿಯವರೇ ನಿಮ್ಮ ಯೋಗ್ಯತೆ ಇಷ್ಟೇ. ಕರ್ನಾಟಕದ ಇತಿಹಾಸದಲ್ಲಿ ಒಬ್ಬ ದರೊಡೆಕೋರನನ್ನು ಮೆರೆಸುತ್ತಿರುವ ನೀವುಗಳು ಶಾಶ್ವತವಾಗಿ ಕನ್ನಡ ದ್ರೋಹಿಗಳು. ಮರಾಠಿ ಜನತಾ ಪಕ್ಷದ ಇನ್ನೊಂದು ಮುಖ ಕಾಂಗ್ರೆಸ್. ಎಚ್ಚರಿಕೆ ಕನ್ನಡಿಗ, ಹಿಂದಿ ಹೈಕಮಾಂಡ್ ಪಕ್ಷಗಳು ನಮ್ಮ ಇತಿಹಾಸ ಅಳಿಸಿ ನಮ್ಮನ್ನು ಗುಲಾಮರನ್ನಾಗಿ ಮಾಡಹೊರಟಿವೆ” ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


