Tuesday, November 3, 2026
spot_img
More
    spot_img
    HomeChampions Trophy 2025Champions Trophy 2025 | ಭಾರತ vs ಪಾಕ್‌ ಪಂದ್ಯ ಬಿಲ್ಡಪ್‌ ಕೊಡುವಷ್ಟು ದೊಡ್ಡದಲ್ಲ: ಹರ್ಭಜನ್‌...

    Champions Trophy 2025 | ಭಾರತ vs ಪಾಕ್‌ ಪಂದ್ಯ ಬಿಲ್ಡಪ್‌ ಕೊಡುವಷ್ಟು ದೊಡ್ಡದಲ್ಲ: ಹರ್ಭಜನ್‌ ಸಿಂಗ್‌

    ಬೆಂಗಳೂರು: ಇದೇ ತಿಂಗಳ 19ರಿಂದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಆರಂಭವಾಗಲಿದ್ದು, ಕ್ಷಣಗಣನೆ ಆರಂಭವಾಗಿದೆ. ಮೊದಲ ದಿನ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾದರೆ, ಭಾರತ ಎರಡನೇ ದಿನ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಟೂರ್ನಿಯಲ್ಲಿ ತನ್ನ ಆಟವನ್ನಾರಂಭಿಸಲಿದೆ.

    ಇನ್ನು ಐಸಿಸಿ ಟೂರ್ನಿಗಳೆಂದರೆ ಅವುಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಇರಲಿದೆ ಎಂಬುದೇ ವಿಶೇಷ. ಹೀಗಾಗಿಯೇ ಐಸಿಸಿ ಟೂರ್ನಿಗಳು ಬಂತೆಂದರೆ ಕ್ರಿಕೆಟ್‌ ಪ್ರೇಮಿಗಳಿಗೆ ಹಬ್ಬದ ವಾತಾವರಣ. ಇನ್ನು ಐಸಿಸಿ ಸಹ ಇದನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಒಂದೇ ಗ್ರೂಪ್‌ನಲ್ಲಿ ಹಾಕಿ ಮುಖಾಮುಖಿಯಾಗುವಂತೆ ಮಾಡುತ್ತಿದೆ.

    ಈ ಬಾರಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೆಬ್ರವರಿ 23ರ ಭಾನುವಾರ ನಡೆಯಲಿದೆ. ಒಂದೆಡೆ ಈ ಪಂದ್ಯದ ಹೈಪ್‌ ಹೆಚ್ಚಾಗುತ್ತಿದ್ದರೆ, ಮತ್ತೊಂದೆಡೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಭಾರತ ಹಾಗೂ ಪಾಕ್‌ ನಡುವಿನ ಪಂದ್ಯ ಇಷ್ಟು ಹೈಪ್‌ ಕೊಡುವಷ್ಟು ದೊಡ್ಡದಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳನ್ನು ನೋಡಿದರೆ ಭಾರತ ಬಲಿಷ್ಠ ತಂಡ ಎಂಬುದು ಗೊತ್ತಾಗಲಿದೆ. ಅತ್ತ ಪಾಕಿಸ್ತಾನ ಬಲಿಷ್ಠವಾಗಿಲ್ಲ. ಇತ್ತೀಚೆಗಷ್ಟೆ ತವರಿನಲ್ಲೇ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಹೀನಾಯವಾಗಿ ಸೋತಿದೆ. ಹೀಗಾಗಿ ಇದು ಇಬ್ಬರು ಬಲಿಷ್ಠರ ಕಾಳಗ ಅಲ್ಲ, ಹೆಚ್ಚು ಪ್ರಚಾರ ಬೇಡ ಎಂದು ಹರ್ಭಜನ್‌ ಸಿಂಗ್‌ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search