ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸದ್ಯ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಇದೇ ವೇಳೆ ಈ ಹಿಂದೆ ಕೊಲೆಯಾಗಿದ್ದ ಯುವ ಕಾಂಗ್ರೆಸ್‌ನ ಕಾರ್ಯಕರ್ತರ ಸ್ಮಾರಕ ನಿರ್ಮಾಣಕ್ಕೆ ಡಿಕೆ ಶಿವಕುಮಾರ್ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಹೀಗೆ ಡಿಕೆ ಶಿವಕುಮಾರ್ ಕೇರಳದ ಯುವ ಕಾಂಗ್ರೆಸ್ ಕಾರ್ಯಕರ್ತರ ಸ್ಮಾರಕಕ್ಕೆ ಹಣ ಘೋಷಣೆ ಮಾಡಿರುವುದನ್ನು ರಾಜ್ಯದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದು, ನೆರೆ ರಾಜ್ಯದ ಯುವಕರ ಸ್ಮಾರಕಕ್ಕೆ 25 ಲಕ್ಷ ಘೋಷಣೆ ಮಾಡಿದ್ದೀರಾ, ಖೋಖೋ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಟಿ ನರಸೀಪುರದ ಚೈತ್ರಾಗೆ ಕೇವಲ 5 ಲಕ್ಷ ರೂಪಾಯಿ ಕೊಟ್ಟಿದ್ರಲ್ಲ ನಿಮ್ಮದೆಂತಹ ಘನವೆತ್ತ ಸರ್ಕಾರ ಎಂದು ಬರೆದುಕೊಂಡಿದ್ದಾರೆ.
ಯಾರಿದು ಯುವ ಕಾಂಗ್ರೆಸ್ ಕಾರ್ಯಕರ್ತರು?
2019ರಲ್ಲಿ ಕಾಸರಗೋಡಿನ ಪೆರಿಯದ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕಳ್ಳಿಯೊಟ್‌ನ ಕೃಪೇಶ್ (19) ಹಾಗೂ ಶರತ್ ಲಾಲ್ (21) ಈ ಇಬ್ಬರ ಜೋಡಿ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಕೋರ್ಟ್ 2024ರ ಡಿಸೆಂಬರ್‌ನಲ್ಲಿ 14 ಮಂದಿ ದೋಷಿಯೆಂದು ತೀರ್ಪು ನೀಡಿತ್ತು. ಜನವರಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ ಕೋರ್ಟ್ 10 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಉಳಿದ ನಾಲ್ವರಿಗೆ ತಲಾ 5 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


