Saturday, August 8, 2026
spot_img
More
    spot_img
    HomeTop StoryIPL 2025: ಮೂರನೇ ಗೆಲುವು ಕಂಡು ರೇಸ್‌ಗಿಳಿದ ಮುಂಬೈ; 33 ಪಂದ್ಯಗಳ ಬಳಿಕ ಹೇಗಿದೆ ಅಂಕಪಟ್ಟಿ?

    IPL 2025: ಮೂರನೇ ಗೆಲುವು ಕಂಡು ರೇಸ್‌ಗಿಳಿದ ಮುಂಬೈ; 33 ಪಂದ್ಯಗಳ ಬಳಿಕ ಹೇಗಿದೆ ಅಂಕಪಟ್ಟಿ?

    ಪ್ರಸ್ತುತ ನಡೆಯುತ್ತಿರುವ ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 33ನೇ ಪಂದ್ಯ ನಿನ್ನೆ ( ಏಪ್ರಿಲ್ 17 ) ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದೆ.

    Advertisement

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್‌ಗೆ 163 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 18.1 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 166 ರನ್ ಬಾರಿಸಿ 4 ವಿಕೆಟ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ತನ್ನ ಮೂರನೇ ಜಯ ಕಂಡಿದೆ. ಈ ಗೆಲುವಿನೊಂದಿಗೆ ಆರಂಭದ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದ ಮುಂಬೈ ಇಂಡಿಯನ್ಸ್ ಪ್ಲೇಆಫ್ ರೇಸ್‌ಗೆ ಇಳಿದಿದೆ.

    ಈ ಪಂದ್ಯ ಮುಗಿದ ಬಳಿಕ ಅಂಕಪಟ್ಟಿಯಲ್ಲಿ ಯಾವ ತಂಡ ಎಷ್ಟನೇ ಸ್ಥಾನದಲ್ಲಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

    ಡೆಲ್ಲಿ ಕ್ಯಾಪಿಟಲ್ಸ್: 6 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು ಸಾಧಿಸಿ ಒಂದು ಪಂದ್ಯದಲ್ಲಿ ಸೋತು 10 ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ( +0.744)
    ಗುಜರಾತ್ ಟೈಟನ್ಸ್: 6 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. (+1.081)
    ರಾಯಲ್ ಚಾಲೆಂಜರ್ಸ್ ಬೆಂಗಳೂರು: 6 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. (+0.672)
    ಪಂಜಾಬ್ ಕಿಂಗ್ಸ್: 6 ಪಂದ್ಯಗಳನ್ನಾಡಿ 4ರಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತು ನಾಲ್ಕನೇ ಸ್ಥಾನದಲ್ಲಿದೆ. (+0.172)
    ಲಕ್ನೋ ಸೂಪರ್ ಜೈಂಟ್ಸ್: 7 ಪಂದ್ಯಗಳನ್ನಾಡಿ 4ರಲ್ಲಿ ಗೆಲುವು, 3 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಐದನೆ ಸ್ಥಾನದಲ್ಲಿದೆ. (+0.086)
    ಕೊಲ್ಕತ್ತಾ ನೈಟ್ ರೈಡರ್ಸ್: 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು ಆರನೇ ಸ್ಥಾನದಲ್ಲಿದೆ. (+0547)
    ಮುಂಬೈ ಇಂಡಿಯನ್ಸ್: 7 ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು, 4 ಪಂದ್ಯದಲ್ಲಿ ಸೋತು 7ನೇ ಸ್ಥಾನದಲ್ಲಿದೆ. (+0.239)
    ರಾಜಸ್ಥಾನ್ ರಾಯಲ್ಸ್: 7 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 5 ಪಂದ್ಯದಲ್ಲಿ ಸೋತು 8ನೇ ಸ್ಥಾನದಲ್ಲಿದೆ. (-0.714)
    ಸನ್‌ರೈಸರ್ಸ್ ಹೈದರಾಬಾದ್: 7 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 5 ಪಂದ್ಯದಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ. (-1.217)
    ಚೆನ್ನೈ ಸೂಪರ್ ಕಿಂಗ್ಸ್: 7 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು 5 ಪಂದ್ಯದಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. (-1.276)
    ( ಮೇಲಿನ ಅಂಕಪಟ್ಟಿಯಲ್ಲಿ ಆವರಣದಲ್ಲಿರುವುದು ನೆಟ್ ರನ್ ರೇಟ್ )


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading