Friday, August 7, 2026
spot_img
More
    spot_img
    HomeTop Storyನಡುರಸ್ತೆಯಲ್ಲಿ ಚೇರ್ ಹಾಕಿ ಟೀ ಕುಡಿದು ರೀಲ್ಸ್; 'ಅಣ್ಣಾ ಇನ್ನೂ ಏನೋ ಬೇಕಣ್ಣ' ಎಂದ ಬೆಂಗಳೂರು...

    ನಡುರಸ್ತೆಯಲ್ಲಿ ಚೇರ್ ಹಾಕಿ ಟೀ ಕುಡಿದು ರೀಲ್ಸ್; ‘ಅಣ್ಣಾ ಇನ್ನೂ ಏನೋ ಬೇಕಣ್ಣ’ ಎಂದ ಬೆಂಗಳೂರು ಪೊಲೀಸ್

    ಬೆಂಗಳೂರು ನಗರದ ಟ್ರಾಫಿಕ್ ನಡುವೆ ರಸ್ತೆ ದಾಟುವುದೇ ಹರಸಾಹಸ. ಸಿಗ್ನಲ್ ಪಾಲಿಸದೇ ರಸ್ತೆ ದಾಟಲು ಹೋಗಿ ಪ್ರಾಣ ಕಳೆದುಕೊಂಡವರ ಹಲವಾರು ಉದಾಹರಣೆಗಳಿವೆ. ಹೀಗಿರುವಾಗ ನಡು ರಸ್ತೆಯಲ್ಲಿಯೇ ವ್ಯಕ್ತಿಯೋರ್ವ ಚೇರ್ ಹಾಕಿಕೊಂಡು ಕುಳಿತು ಟೀ ಕುಡಿಯುತ್ತಾ ರೀಲ್ ಮಾಡಿದ್ದಾನೆ.

    Advertisement

    ಈ ರೀಲ್ ವೈರಲ್ ಆಗಿದ್ದು, ಅನೇಕರು ಈತನ ನಡೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಡಿಯೊ ಹಂಚಿಕೊಂಡು ಬೆಂಗಳೂರು ಪೊಲೀಸ್ ಎಕ್ಸ್ ಖಾತೆಯನ್ನು ಉಲ್ಲೇಖಿಸಿದ್ದರು. ಇದರ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಕ್ರಮಕ್ಕೆ ಮುಂದಾದ ಹಲಸೂರು ಗೇಟ್ ಉಪ ವಿಭಾಗದ ಎಸ್ ಜೆ ಪಾರ್ಕ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಬಂಧಿಸಿದ ಬಳಿಕ ಎಂದಿನಂತೆ ರೀಲ್ಸ್ ಹುಚ್ಚಿನಿಂದ ಅಪರಾಧ ಎಸಗಿದ ಈತನಿಗೂ ರೀಲ್ಸ್ ಟ್ರೀಟ್‌ಮೆಂಟ್ ಕೊಟ್ಟಿದ್ದಾರೆ. ಆತನದ್ದೇ ರಸ್ತೆ ಮಧ್ಯೆ ಕುಳಿತು ಟೀ ಕುಡಿಯುವ ವಿಡಿಯೊಗೆ ಕನ್ನಡದ ಪ್ರಸಿದ್ಧ ಕಾಮಿಡಿ ದೃಶ್ಯವೊಂದರನ್ನು ಹಂಚಿಕೊಂಡು ಕಾಲೆಳೆದಿದೆ. ರಂಗಾಯಣ ರಘು ಆಡಿಷನ್‌ನಲ್ಲಿ ಮಾಡುವ ನಟನೆಗೆ ನಿರ್ದೇಶಕ ಹೇಳುವ ‘ಅಣ್ಣಾ.. ಇನ್ನೂ ಏನೋ ಬೇಕಣ್ಣ..’ ಎಂಬ ದಶ್ಯವನ್ನು ಎಡಿಟ್ ಮಾಡಿ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading