ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. ಇರಾನ್ ಪರಮಾಣು ಬಾಂಬ್ ತಯಾರಿಕೆ ಮಾಡುತ್ತಿದೆ ಎಂದು ಆರೋಪಿಸಿದ ಇಸ್ರೇಲ್ ದಾಳಿ ಆರಂಭಿಸಿತ್ತು. ಸೇನಾ ಅಧಿಕಾರಿಗಳೂ ಹಲವು ಸಾವು ನೋವು ಸಂಭವಿಸಿದ ಬೆನ್ನಲ್ಲೇ ಇರಾನ್ ಇಸ್ರೇಲ್‌ನ ಟೆಲ್ ಅವಿವ್ ನಗರದ ಮೇಲೆ ಪ್ರತಿದಾಳಿ ನಡೆಸಿತು.
ಹೀಗೆ ಎರಡೂ ದೇಶಗಳಲ್ಲಿ ಕ್ಷಿಪಣಿ, ಡ್ರೋನ್, ಬಾಂಬ್‌ಗಳ ಶಬ್ದ ಕೇಳಿಬರುತ್ತಿದ್ದು, ನೆತ್ತರು ಹರಿಯಲಾರಂಭಿಸಿದೆ. ಹೀಗೆ ಎರಡೂ ದೇಶಗಳ ಪರಿಸ್ಥಿತಿ ಹದಗೆಟ್ಟಿರುವಾಗಲೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶಿಸಿದ್ದು, ಇರಾನ್‌ಗೆ ಷರತ್ತುಗಳಿಲ್ಲದೇ ಶರಣಾಗುವಂತೆ ಬೆದರಿಕೆ ಹಾಕಿದ್ದರು.
ಇರಾನ್ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಅಮೆರಿಕಾಗಿಂತ ಬಲಿಷ್ಟವಾಗಿಲ್ಲ ಎಂದು ಕಾಲೆಳೆದಿದ್ದ ಟ್ರಂಪ್ ಇರಾನ್‌ನ ಟೆಹ್ರಾನ್ ಜನರಿಗೆ ನಗರ ತೊರೆಯುವಂತೆ ಹಾಗೂ ಯಾವುದೇ ಷರತ್ತುಗಳಿಲ್ಲದೇ ಶರಣಾಗುವಂತೆ ಒತ್ತಾಯ ಮಾಡಿದ್ದರು. ಅಲ್ಲದೇ ಇರಾನ್ ವಾಯು ಪ್ರದೇಶದ ಮೇಲೆ ಯುಎಸ್‌ಎ ಸಂಪೂರ್ಣ ಹಿಡಿತ ಸಾಧಿಸಿದ್ದೇವೆ ಎಂದಿದ್ದರು.
ಈ ಬೆದರಿಕೆಗೆ ಇದೀಗ ಇರಾನ್‌ನ ಸರ್ವೋಚ್ಛ ನಾಯಕ ಖಮಿನಿ ಪ್ರತಿಕ್ರಿಯಿಸಿದ್ದು, ‘ಯುಎಸ್ ಅಧ್ಯಕ್ಷರು ನಮ್ಮನ್ನು ಬೆದರಿಸುತ್ತಿದ್ದಾರೆ. ತಮ್ಮ ಅಸಂಬದ್ಧ ಭಾಷಣದೊಂದಿಗೆ ಇರಾನಿನ ಜನರು ತಮಗೆ ಶರಣಾಗಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ನಿಮ್ಮ
ಬೆದರಿಕೆಗೆ ಭಯಪಡುವವರ ಮೇಲೆ ಬೆದರಿಕೆ ಹಾಕಿ. ಇರಾನ್ ನಿಮ್ಮ ಬೆದರಿಕೆಗಳಿಗೆ ಭಯಪಡುವುದಿಲ್ಲʼ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಇರಾನ್ ದೇಶವನ್ನು ಶರಣಾಗಿ ಎನ್ನುವುದು ಸರಿಯಲ್ಲ. ಇರಾನ್ ಯಾಕೆ ಶರಣಾಗಬೇಕು? ದಾಳಿ ನಡೆಸಿದ ಯಾರಿಗೂ ನಾವು ಶರಣಾಗುವುದಿಲ್ಲ. ಇದು ಇರಾನ್ ದೇಶದ ತರ್ಕ. ಇದೇ ನಮ್ಮ ಹುಮ್ಮಸ್ಸು ಎಂದು ಬರೆದುಕೊಂಡು ಟ್ರಂಪ್‌ಗೆ ತಿರುಗೇಟು ಕೊಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


