ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬೆಳಗ್ಗೆಯಿಂದ ಬೆಂಗಳೂರು ನಗರದಲ್ಲಿ ಜೂನ್ 19 ಹಾಗೂ ಜೂನ್ 20ರಂದು ನೀರಿನ ಪೂರೈಕೆ ಸ್ಥಗಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಕೋಟ್ಯಂತರ ಜನರಿರುವ ನಗರದಲ್ಲಿ ಎರಡು ದಿನಗಳು ಸಂಪೂರ್ಣ ನೀರು ಸ್ಥಗಿತವೆಂದರೆ ಹೇಗೆ ಎಂದು ಹಲವಾರು ಮಂದಿ ಇದನ್ನು ಗಾಳಿ ಸುದ್ದಿ ಎಂದೇ ಕಡೆಗಣಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿರುವ ಈ ಸುದ್ದಿ ನಿಜ. ಸ್ವತಃ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಈ ಕುರಿತು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ತುರ್ತು ಕಾಮಗಾರಿ ನಡೆಯಲಿರುವ ಹಿನ್ನಲೆಯಲ್ಲಿ ಜೂ.19ರ ಗುರುವಾರ ಬೆಳಿಗ್ಗೆ 6 ರಿಂದ ಜೂ.20ರ ಶುಕ್ರವಾರ ಬೆಳಿಗ್ಗೆ 6 ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಪೂರೈಕೆ ಇರುವುದಿಲ್ಲ, ಸಾರ್ವಜನಿಕರು ಅಗತ್ಯ ನೀರಿನ ಸಂಗ್ರಹಣೆ ಮಾಡಿಕೊಂಡು ಮಂಡಳಿಗೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ.
ಹೀಗಾಗಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕರು ಮುನ್ನೆಚ್ಚರಿಕೆಯಾಗಿ ಆದಷ್ಟು ನೀರನ್ನು ಶೇಖರಿಸಿ ಇಟ್ಟುಕೊಳ್ಳುವುದು ಉತ್ತಮ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


