ಬೆಂಗಳೂರು: ನಿರ್ದೇಶಕ ರೋಹಿತ್ ಪದಕಿ ನಿರ್ದೇಶನದ ಭರವಸೆ ಹುಟ್ಟುಹಾಕಿದ್ದ ಚಿತ್ರ ಎಕ್ಕ ಇಂದು ( ಜುಲೈ 18 ) ಬೃಹತ್ ಮಟ್ಟದಲ್ಲಿ ಬಿಡುಗಡೆಯಾಗಿದೆ. ಕಳೆದ ವರ್ಷ ಯುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಯುವ ರಾಜ್‌ಕುಮಾರ್ ನಟನೆಯ ಎರಡನೇ ಚಿತ್ರ ಸಹ ಇದಾಗಿದ್ದು, ಈ ಕಾರಣಕ್ಕೂ ಚಿತ್ರ ಕುತೂಹಲ ಮೂಡಿಸಿತ್ತು.
ಇನ್ನು ಟ್ರೈಲರ್ ಹಾಗೂ ಚಾರ್ಟ್‌ಬಸ್ಟರ್ ಹಾಡುಗಳ ಮೂಲಕ ಜನರ ಗಮನ ಸೆಳೆದಿದ್ದ ಎಕ್ಕ ಚಿತ್ರ ನಿರೀಕ್ಷೆಯನ್ನು ಹುಟ್ಟುಹಾಕಿತ್ತಾದರೂ ಯುವ ನಟನೆಯ ಮೊದಲ ಚಿತ್ರ ಪಡೆದುಕೊಂಡಂತ ಭರ್ಜರಿ ಓಪನಿಂಗ್ ಚಿತ್ರಕ್ಕೆ ಸಿಗಲಿಲ್ಲ ಎನ್ನಬಹುದು. ಬೆಳಗ್ಗೆ ರಾಜ್ಯದ್ಯಂತ ಸುಮಾರು 20+ ಶೋ ಹೌಸ್‌ಫುಲ್ ರಿಪೋರ್ಟ್ ಕಂಡಿದ್ದ ಎಕ್ಕ ಚಿತ್ರದ ವಿಮರ್ಶೆ ಹೊರಬಿದ್ದ ಬಳಿಕ ರಾತ್ರಿ ಬಾಕ್ಸ್ ಆಫೀಸ್‌ನಲ್ಲಿ ಜಾಕಿಯಂತೆ ಮುನ್ನುಗಿದೆ.
ರಾಜ್ಯದ್ಯಂತ ಬರೋಬ್ಬರಿ 100ಕ್ಕೂ ಹೆಚ್ಚು ಸಂಜೆ ಹಾಗೂ ರಾತ್ರಿ ಶೋಗಳು ಸಂಜೆ 6.45ರ ವೇಳೆಗೆ ಸೋಲ್ಡ್‌ಔಟ್ ಆಗಿದ್ದು, ದಿನ ಮುಗಿಯುವುದರೊಳಗೆ ರಾಜ್ಯದ ಪ್ರಮುಖ ನಗರಗಳ ಬಹುತೇಕ ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್ ಆಗುವ ಸಾಧ್ಯತೆಗಳಿವೆ. ಅದರಲ್ಲಿಯೂ ಮೈಸೂರು ನಗರದಲ್ಲಿ ಸಂಜೆ 7ರ ನಂತರದ ಎಲ್ಲ ಶೋಗಳು ಹೌಸ್‌ಫುಲ್ ಆಗಿದ್ದು, ಬೆಂಗಳೂರಿನಲ್ಲೂ ಅದೇ ಸ್ಥಿತಿ ನಿರ್ಮಾಣವಾಗುತ್ತಿದೆ.
ಒಟ್ಟಿನಲ್ಲಿ ಚಿತ್ರಕ್ಕೆ ಮ್ಯಾಟ್ನಿ ಶೋ ಬಳಿಕ ಬಂದ ನೈಜ ವಿಮರ್ಶೆ ಜನರನ್ನು ತಲುಪಿದ್ದು, ಜನರು ಚಿತ್ರಮಂದಿರದತ್ತ ಮುಖ ಮಾಡಿದ್ದಾರೆ. ಈ ಮೂಲಕ ಎಕ್ಕ ಇಡೀ ವರ್ಷ ಸ್ಯಾಂಡಲ್‌ವುಡ್‌ಗೆ ಅಂಟಿದ್ದ ಬರವನ್ನು ನೀಗಿಸುವ ಭರವಸೆ ಹುಟ್ಟುಹಾಕಿದೆ.
ಎಕ್ಕ ಮೊದಲ ದಿನದ ಬಾಕ್ಸ್‌ಆಫೀಸ್ ಗಳಿಕೆ ಹೇಗಿದೆ? ನಿರ್ಮಾಪಕರ ಮೊದಲ ಪ್ರತಿಕ್ರಿಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


