Thursday, September 3, 2026
spot_img
More
    spot_img
    HomeLatest newsಧರ್ಮಸ್ಥಳ: ನೀವು ರಾಜ್ಯಕ್ಕೆ ಗೃಹಮಂತ್ರಿನಾ ಅಥವಾ ನಕಲಿ ದೇವಮಾನವನ ಮಂತ್ರಿನಾ? ಪರಮೇಶ್ವರ್‌ಗೆ ಸಮೀರ್‌ ಪ್ರಶ್ನೆ; ವಿಡಿಯೊ

    ಧರ್ಮಸ್ಥಳ: ನೀವು ರಾಜ್ಯಕ್ಕೆ ಗೃಹಮಂತ್ರಿನಾ ಅಥವಾ ನಕಲಿ ದೇವಮಾನವನ ಮಂತ್ರಿನಾ? ಪರಮೇಶ್ವರ್‌ಗೆ ಸಮೀರ್‌ ಪ್ರಶ್ನೆ; ವಿಡಿಯೊ

    ಧರ್ಮಸ್ಥಳದಲ್ಲಿ ನಡೆದ ಹಲವಾರು ಕೊಲೆ ಹಾಗೂ ಅತ್ಯಾಚಾರ ಕೊಲೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ದೂರನ್ನು ನೀಡಿದ್ದು, ಅಲ್ಲಿ ನಡೆದ ಹತ್ಯೆಗಳ ಹೆಣಗಳನ್ನು ಹೂತಿದ್ದು ತಾನೇ ಎಂದು ಹೇಳಿಕೊಂಡಿದ್ದಾನೆ.

    Advertisement

    ಈ ದೂರು ದಾಖಲಾಗುತ್ತಿದ್ದಂತೆ ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವವರು ಸೇರಿದಂತೆ ಎಲ್ಲರ ಚಿತ್ತ ಇತ್ತ ನೆಟ್ಟಿತು. ಸಮಾಧಿ ತೆಗೆದು ಅಸ್ತಿಪಂಜರ ತೋರಿಸುತ್ತೇನೆ ಎಂದು ಹೇಳಿದ್ದ ಆ ವ್ಯಕ್ತಿ ತನ್ನೊಡನೆ ಅಸ್ತಿಪಂಜರವನ್ನೂ ಸಹ ತಂದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನುಮುಂದೆ ತನಿಖೆ ವೇಗವಾಗಿ ನಡೆಯಲಿದೆ ಎಂದೇ ಎಲ್ಲರೂ ಊಹಿಸಿದ್ದರು.

    ಆದರೆ ನಿರೀಕ್ಷೆಯಂತೆ ಪ್ರಕರಣ ಸಾಗುತ್ತಿಲ್ಲ, ಪೊಲೀಸರು ಸ್ಥಳ ಮಹಜರು ಮಾಡಲು ಬರುತ್ತಿಲ್ಲ ಎಂದು ದೂರುದಾರನ ಪರ ವಕೀಲರು ಮಾತನಾಡಿದ್ದು, ತನಿಖಾಧಿಕಾರಿ ನಿರ್ದೇಶನವಿಲ್ಲದೇ ಸಮಾಧಿ ಅಗೆಯುವ ಕೆಲಸ ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಹೀಗೆ ಸಾಕಷ್ಟು ಗೊಂದಲಗಳನ್ನು ಹುಟ್ಟುಹಾಕುತ್ತಿರುವ ಈ ಪ್ರಕರಣದ ಕುರಿತು ಯುಟ್ಯೂಬರ್‌ ಸಮೀರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಮಾಡಿದ್ದು, ಅಸಮಾಧಾನ ಹೊರಹಾಕಿದ್ದಾರೆ.

    ಮೊದಲಿಗೆ ತಾವು ಇತ್ತೀಚೆಗೆ ಹಂಚಿಕೊಂಡ ʼಧರ್ಮಸ್ಥಳ ಸೀರಿಯಲ್‌ ಕಿಲ್ಲರ್ಸ್‌ʼ ವಿಡಿಯೊ ಸುಳ್ಳು ಎಂದು ಆರೋಪಿಸಿದವರಿಗೆ ನಾನು ಹೇಳಿದ್ದು ಸುಳ್ಳು ಎನ್ನುವುದಾದರೆ ನಿಜವಾಗಿ ಆ ವ್ಯಕ್ತಿ ಸಾಕ್ಷಿ ಹೇಳಲು ಬಂದಿದ್ದಾರಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

    ಆತನನ್ನು ಕರೆದುಕೊಂಡು ಹೋಗಿ ಸಮಾಧಿ ತೆಗೆಸಿದರೆ ಸತ್ಯಾಂಶ ಹೊರಬರಲಿದ್ದು, ಪೊಲೀಸರು ಯಾಕೆ ಈ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ತಾನು ಅಸ್ತಿಪಂಜರಗಳನ್ನು ತೋರಿಸಲು ಸಿದ್ಧ ಎಂದು ವ್ಯಕ್ತಿ ಹೇಳಿಕೊಂಡು ತಿಂಗಳಾಗುತ್ತಾ ಬಂದಿದ್ದು, ಅಷ್ಟು ದಿನಗಳಿಂದ ಪೊಲೀಸರು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಕಾಯುತ್ತಿದ್ದಾರೆ. ಹೆಣಗಳನ್ನು ಆಚೆ ತೆಗೆಯುತ್ತಾರೆ ಎಂದು ಕಾಯುತ್ತಿದ್ದೇವೆ. ಆದರೆ ತಡದ ಮೇಲೆ ತಡ ಆಗುತ್ತಲೇ ಇದೆ ಎಂದು ಸಮೀರ್‌ ತಿಳಿಸಿದರು.

    ಹೀಗೆ ಪೊಲೀಸರು ತಡ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಮೀರ್‌ ತನ್ನ ಕಿವಿಗೆ ನಕಲಿ ದೇವಮಾನವನ ತಮ್ಮ ಹೋಗಿ ಗೃಹಸಚಿವ ಪರಮೇಶ್ವರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಯಾಕೆ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ ಎಂದರು.

    ಇನ್ನು ಈ ಭೇಟಿ ಯಾಕೆ ಎಂದು ಪರಮೇಶ್ವರ್‌ ಅವರನ್ನು ಕೇಳಿದರೆ ಏನಿಲ್ಲ ಶಿಕ್ಷಣ ಸಂಸ್ಥೆಯ ಕುರಿತು ಮಾತನಾಡಲು ಬಂದಿದ್ದರು ಎಂದರು. ಆದರೆ ಗೃಹಸಚಿವರಾದ ಇವರಿಗೂ ಶಿಕ್ಷಣ ಸಂಸ್ಥೆಗೂ ಏನು ಸಂಬಂಧ ಎಂದು ಪ್ರಶ್ನೆ ಹಾಕಿದ್ದಾರೆ ಸಮೀರ್.‌ ಅಲ್ಲದೇ ʼಅಲ್ಲ ಸರ್‌ ನೀವು ಕರ್ನಾಟಕ ರಾಜ್ಯದ ಗೃಹಮಂತ್ರಿನಾ ಅಥವಾ ನಕಲಿ ದೇವನಮಾನವ ಗೃಹಮಂತ್ರಿನಾ?ʼ ಎಂದು ನೇರವಾಗಿ ಪರಮೇಶ್ವರ್‌ಗೆ ಸಮೀರ್‌ ಪ್ರಶ್ನೆ ಹಾಕಿದ್ದಾರೆ.

    ಅಲ್ಲೊಬ್ಬಾ ತಾಯಿ ತನ್ನ ಮಗಳನ್ನು ಕಳೆದುಕೊಂಡು 22 ವರ್ಷವಾಗಿದ್ದು, ಮಗಳನ್ನು ಹುಡುಕಿಕೊಡುವುದು ಬೇಡ. ಆಕೆಯ ಅಸ್ತಿಪಂಜರ ಕೊಡಿ ಎಂದು ಎಸ್‌ಪಿ ಕಚೇರಿ ಮುಂದೆ ಕಣ್ಣೀರು ಹಾಕುತ್ತಿದ್ದರೂ, ಜೀವಂತ ಸಾಕ್ಷಿ ಬಂದಿದ್ದರೂ ಸರ್ಕಾರ ಏನು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಸಮೀರ್‌ ಆಕ್ರೋಶ ಹೊರಹಾಕಿದ್ದಾರೆ.

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading