Sunday, November 1, 2026
spot_img
More
    spot_img
    HomeEntertainmentಇಂದು ಮಗನ ಮೊದಲ ಚಿತ್ರದ ಎದುರು ಬಿಡುಗಡೆಗೊಂಡಿರುವ ʼಎಕ್ಕʼ ಬಗ್ಗೆ ಜನಾರ್ಧನ ರೆಡ್ಡಿ ಪ್ರತಿಕ್ರಿಯೆ

    ಇಂದು ಮಗನ ಮೊದಲ ಚಿತ್ರದ ಎದುರು ಬಿಡುಗಡೆಗೊಂಡಿರುವ ʼಎಕ್ಕʼ ಬಗ್ಗೆ ಜನಾರ್ಧನ ರೆಡ್ಡಿ ಪ್ರತಿಕ್ರಿಯೆ

    ಇಂದು ( ಜುಲೈ 18 ) ಶುಕ್ರವಾರ ಕನ್ನಡ ಚಿತ್ರರಂಗದ ಪಾಲಿಗೆ ಮೊದಲ ಶುಭ ಶುಕ್ರವಾರವಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

    ಹೌದು, ಈ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆಯಾದ ಕನ್ನಡ ಚಿತ್ರಗಳಾವುವು ದೊಡ್ಡ ಹಿಟ್ ಎನಿಸಿಕೊಂಡಿಲ್ಲ. ಹೀಗಾಗಿ ಚಿತ್ರರಂಗಕ್ಕೆ ವರ್ಷದ ಮೊದಲ ಗೆಲುವು ಯಾವಾಗ ಸಿಗಲಿದೆ ಎಂಬ ಪ್ರಶ್ನೆ ಎದ್ದಿರುವಾಗಲೇ ಎರಡು ಭರವಸೆಯ ಚಿತ್ರಗಳು ತೆರೆ ಮೇಲೆ ಬರಲು ಸಜ್ಜಾಗಿವೆ.

    ಒಂದೆಡೆ ಕಳೆದ ವರ್ಷವಷ್ಟೇ ಯುವ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಯುವ ರಾಜ್‌ಕುಮಾರ್‌ ನಟನೆಯ ಎರಡನೇ ಚಿತ್ರ ʼಎಕ್ಕʼ ಬಿಡುಗಡೆಯಾಗಿದ್ದರೆ, ಮತ್ತೊಂದೆಡೆ ರಾಜಕಾರಣಿ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ʼಜೂನಿಯರ್‌ʼ ಚಿತ್ರ ಬಿಡುಗಡೆಯಾಗಿದೆ.

    ಹಾಡುಗಳು, ಮೇಕಿಂಗ್‌, ಟ್ರೈಲರ್‌ ಎಲ್ಲದರಲ್ಲೂ ಎರಡೂ ಚಿತ್ರಗಳು ಭರವಸೆ ಹುಟ್ಟುಹಾಕಿದ್ದು, ಜನಾರ್ಧನ ರೆಡ್ಡಿ ನಿನ್ನೆ ಎರಡೂ ಚಿತ್ರಗಳ ಕುರಿತು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    “ಕನ್ನಡ ಕಂಠೀರವ, ನಮ್ಮೆಲ್ಲರ ಆರಾಧ್ಯದೈವ ಡಾ. ರಾಜಕುಮಾರ್ ಅವರ ಮೊಮ್ಮಗನಾದ ಯುವರಾಜ್ ಕುಮಾರ್ ಅವರ “ಎಕ್ಕ” ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ನಿರ್ಮಾಪಕರು ಹಾಗೂ ಸಂಪೂರ್ಣ ಚಿತ್ರತಂಡಕ್ಕೆ “ಎಕ್ಕ” ಚಿತ್ರವು ಯಶಸ್ವಿಯಾಗಲೆಂದು ಶುಭ ಹಾರೈಸುತ್ತೇನೆ. ನಾಳೆ ಬಿಡುಗಡೆಯಾಗುತ್ತಿರುವ “ಎಕ್ಕ” ಹಾಗೂ “ಜೂನಿಯರ್” ಎರಡು ಚಿತ್ರಗಳು ಕನ್ನಡ ಪ್ರೇಕ್ಷಕರ ಮನ ಗೆಲ್ಲುವ ಮೂಲಕ ಶತದಿನೋತ್ಸವವನ್ನು ಆಚರಿಸಲಿ ಎಂದು ಆಶಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದಾರೆ.

    ಮಹದೇವಪ್ಪಗೆ ಶಿಷ್ಟಾಚಾರದ ಬಗ್ಗೆ ಮಾತಾಡುವ ಕನಿಷ್ಟ ಸೌಜನ್ಯವೂ ಇಲ್ಲ: ಪ್ರತಾಪ್‌ ಸಿಂಹ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search