ಮಳವಳ್ಳಿ: ಅಪ್ರಾಪ್ತನಿಗೆ ಚಾಲನೆ ಮಾಡಲು ಬೈಕ್ ನೀಡಿದ್ದ ಸೋದರಮಾವನಿಗೆ ಪಟ್ಟಣದ ಜೆಎಂಎಫ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಹೇಂದ್ರ ಅವರು 25 ಸಾವಿರ ರೂ.ದಂಡ ಮತ್ತು ಒಂದು ದಿನದ ನ್ಯಾಯಾಂಗ ಬಂಧನದ ಶಿಕ್ಷೆ ವಿಧಿಸಿದ್ದಾರೆ.
2024ರ ಜೂ.1 ರಂದು ತಾಲ್ಲೂಕಿನ ಹಂಚೀಪುರ-ದುಗ್ಗನಹಳ್ಳಿ ರಸ್ತೆಯಲ್ಲಿ ಅಪ್ರಾಪ್ತನಿಗೆ ಬೈಕ್ ನೀಡಿ ಚಾಲನೆ ಮಾಡುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದೋಷಾ ರೋಪಣ ಪಟ್ಟಿ ಸಲ್ಲಿಸಿದ್ದರು. ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಮಹೇಂದ್ರ ಅವರು ಅಪ್ರಾಪ್ತನಿಗೆ ಬೈಕ್ ನೀಡಿದ್ದ ಸೋದರ ಮಾವ ಯೋಗೀಶ್ ಎಂಬವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
NPS ವಾತ್ಸಲ್ಯ ಯೋಜನೆ ಸಂಪೂರ್ಣ ವಿವರ: ಮಕ್ಕಳ ಭವಿಷ್ಯಕ್ಕಾಗಿ ಪೋಷಕರಿಗೆ ಶ್ರೇಷ್ಠ ಹೂಡಿಕೆ ಆಯ್ಕೆ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


