ಬೆಂಗಳೂರು: ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ನೀಡಬೇಕೆಂದು ಅವರ ಅಳಿಯ ಅನಿರುದ್ಧ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.
ಗುರುವಾರ ( ಜುಲೈ 17 ) ಸಿಎಂ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ವಿಷ್ಣುವರ್ಧನ್ ಅವರು ನಾಯಕರಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರಿಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಗೌರವ ಸಿಗಲಿಲ್ಲ. ರಾಜ್ಯ ಸರ್ಕಾರ ಕರ್ನಾಟಕ ರತ್ನವನ್ನಾದರೂ ಕೊಡುವಂತಾಗಲಿ ಎಂದು ಮನವಿ ಮಾಡಿದ್ದಾರೆ.
ಇನ್ನು ಕರ್ನಾಟಕ ರತ್ನ ಪ್ರಶಸ್ತಿಗೆ ಈವರೆಗೆ 10 ಸಾಧಕರು ಪಾತ್ರರಾಗಿದ್ದು, ನಟ ಪುನೀತ್ ರಾಜ್‌ಕುಮಾರ್‌ಗೆ ಮಾತ್ರ ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಸಾಧಕರ ಪಟ್ಟಿ ಮುಂದಿದೆ.
ಕುವೆಂಪು, ಡಾ. ರಾಜ್‌ಕುಮಾರ್, ಎಸ್ ನಿಜಲಿಂಗಪ್ಪ, ಸಿ.ಎನ್.ಆರ್ ರಾವ್, ದೇವಿ ಶೆಟ್ಟಿ, ಭೀಮ್‌ಸೇನ್ ಜೋಶಿ, ಶಿವಕುಮಾರ ಸ್ವಾಮಿ, ಜವರೇಗೌಡ, ವೀರೇಂದ್ರ ಹೆಗಡೆ, ಪುನೀತ್ ರಾಜ್‌ಕುಮಾರ್
ಅಪ್ರಾಪ್ತರಿಗೆ ಬೈಕ್ ಕೊಡ್ತೀರಾ? ಅಬ್ಬಬ್ಬಾ ಇಷ್ಟು ದಂಡ ಕಟ್ಟಲು ಸಿದ್ಧರಾಗಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


