ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿರುವ ವಸುಂಧರಾ ಪ್ರದೇಶದಲ್ಲಿ ಶ್ರಾವಣ ಮಾಸ ಆರಂಭವಾದ ಕೆಎಫ್‌ಸಿ ರೆಸ್ಟೋರೆಂಟ್‌ಗೆ ಹಿಂದೂ ರಕ್ಷಾ ದಳದಿಂದ ವಿರೋಧ ವ್ಯಕ್ತವಾಗಿದೆ.
ಹಿಂದೂ ರಕ್ಷಣಾ ದಳದ ಕಾರ್ಯಕರ್ತರು ರೆಸ್ಟೋರೆಂಟ್‌ನ ಬಾಗಿಲನ್ನು ಬಲವಂತವಾಗಿ ಮುಚ್ಚಿದ್ದು, ಸಿಬ್ಬಂದಿಗಳಿಗೆ ಭೀತಿ ಮೂಡಿಸಿದ್ದಾರೆ. ಈ ಪ್ರತಿಭಟನೆ ಪೊಲೀಸರ ಸಮ್ಮುಖದಲ್ಲೇ ನಡೆದಿದ್ದು, ತೀವ್ರ ಗಲಭೆಯನ್ನು ಉಂಟುಮಾಡಿದೆ. ಸದ್ಯ ಈ ಘಟನೆ ಉತ್ತರ ಪ್ರದೇಶದಲ್ಲಿ ಮಾಂಸಹಾರ ವ್ಯಾಪಾರ ಮಾಡಲು ಆಸಕ್ತಿಯನ್ನು ಹೊಂದಿರುವ ಕಂಪನಿಗಳಿಗೆ ಸವಾಲನ್ನು ಹಾಕುತ್ತಿದೆ.
ಪ್ರತಿಭಟನಾಕಾರರು ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಮತ್ತು ಶ್ರಾವಣ ಮಾಸದಲ್ಲಿ ಶಾಖಾಹಾರವನ್ನು ಮಾತ್ರ ಸೇವಿಸುವಂತೆ ಆಗ್ರಹಿಸಿದ್ದಾರೆ. ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ತೀವ್ರ ಚರ್ಚೆಗೆ ಗುರಿಯಾಗಿದ್ದು, ಧಾರ್ಮಿಕ ನಂಬಿಕೆಗಳು ಮತ್ತು ವ್ಯಾಪಾರ ಸ್ವತಂತ್ರ್ಯದ ನಡುವಣ ಸಮತೋಲನವನ್ನು ಕಂಡುಕೊಳ್ಳುವ ಅಗತ್ಯವನ್ನು ಪ್ರತಿಬಿಂಬಿಸುತ್ತದೆ.
ಈ ವಿಡಿಯೊ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಆಹಾರ ಸೇವನೆ ವ್ಯಕ್ತಿಯ ಆಯ್ಕೆಯಾಗಿರಬೇಕೇ ಹೊರತು ಪರರ ಆಜ್ಞೆಯಾಗಿರಬಾರದು ಎಂದು ಮಾಂಸಹಾರ ಪ್ರಿಯರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು: ಪತ್ನಿ ಶೀಲ ಶಂಕಿಸಿ ಕೊಲೆಗೆ ಯತ್ನಿಸಿದ ಪತಿರಾಯ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


