Thursday, September 3, 2026
spot_img
More
    spot_img
    HomeEntertainmentದರ್ಶನ್‌ ಫ್ಯಾನ್ಸ್‌ ಅಶ್ಲೀಲ ಮೆಸೇಜ್:‌ ಬರೀ 7 ಜನರ ಬಂಧನವಾಗಿದೆ ಎಂದ ರಮ್ಯಾ

    ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಮೆಸೇಜ್:‌ ಬರೀ 7 ಜನರ ಬಂಧನವಾಗಿದೆ ಎಂದ ರಮ್ಯಾ

    ಬೆಂಗಳೂರು: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ರದ್ದು ಮಾಡಿದ ಬೆನ್ನಲ್ಲೆ ಮತ್ತೊಮ್ಮೆ ಜೈಲು ಸೇರಿದ್ದರೆ, ಕೆಲ ದರ್ಶನ್ ಅಭಿಮಾನಿಗಳು ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿ ಸಿಕ್ಕಿಬಿದ್ದು ಕಂಬಿ ಹಿಂದೆ ನಿಂತಿದ್ದಾರೆ.

    Advertisement

    ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂ ಕೋರ್ಟ್‌ ನ್ಯಾಯ ದೊರಕಿಸಿಕೊಡಲಿದೆ ಎಂದು ರಮ್ಯಾ ಮಾಡಿದ್ದ ಟ್ವೀಟ್‌ಗೆ ಕೆರಳಿದ್ದ ದರ್ಶನ್‌ ಅಭಿಮಾನಿಗಳು ನಟಿ ರಮ್ಯಾ ತಮ್ಮ ಜೀವನದಲ್ಲೇ ಕೇಳಿರದ ಕೆಟ್ಟ ಶಬ್ದಗಳನ್ನು ಬಳಸಿ ನಿಂದಿಸಿದ್ದರು.

    ಈ ಕಾರಣಕ್ಕಾಗಿ 44 ಇನ್ಸ್ಟಾಗ್ರಾಮ್‌ ಖಾತೆಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಇಂದು ( ಆಗಸ್ಟ್‌ 18 ) ನಟಿ ರಮ್ಯಾ ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದಾಗ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.

    ದೂರು ನೀಡಿದ ಬಳಿಕ ಮೊದಲಿನ ಹಾಗೇನೂ ಅಶ್ಲೀಲ ಸಂದೇಶಗಳು ಹಾಗೂ ಕಾಮೆಂಟ್‌ಗಳು ಬರುತ್ತಿಲ್ಲ. ಕೆಲವೊಂದಿಷ್ಟು ಕಾಮೆಂಟ್‌ ಬರುತ್ತಿವೆ. ಸೆಲೆಬ್ರಿಟಿಯಾಗಿ ಅದನ್ನು ತಪ್ಪು ಎನ್ನುವ ರೀತಿ ಆ ಕಾಮೆಂಟ್‌ಗಳಿಲ್ಲ ಎಂದಿದ್ದಾರೆ. ಅಲ್ಲದೇ ದೂರು ನೀಡಿದ್ದವರ ಪೈಕಿ ಬರೀ 7 ಜನರ ಬಂಧನ ಮಾತ್ರ ಆಗಿದ್ದು, ಉಳಿದವರ ಬಂಧನ ಆಗಬೇಕಿದೆ ಎಂದರು.

    ಅಲ್ಲದೇ ತಮ್ಮ ನಡೆಯಿಂದ ಹಲವಾರು ಹೆಣ್ಣು ಮಕ್ಕಳಲ್ಲಿ ಧೈರ್ಯ ಬಂದಿದ್ದು, ದೂರು ನೀಡಿದರೆ ಶಿಕ್ಷೆ ಕೊಡಿಸಬಹುದು ಎಂದು ಯೋಚಿಸುವ ಮಟ್ಟಕ್ಕೆ ಬಂದಿದ್ದಾರೆ. ಹಲವಾರು ಹೆಣ್ಣುಮಕ್ಕಳು ಈ ಕುರಿತು ನನಗೆ ಸಂದೇಶ ಕಳುಹಿಸಿದ್ದಾರೆ, ಈ ಹಿಂದೆ ಕಾಮೆಂಟ್‌ ಹಾಗೂ ಮೆಸೇಜ್‌ಗಳನ್ನು ಡಿಲಿಟ್‌ ಮಾಡಿಬಿಡುತ್ತಿದ್ದರು. ಆದರೆ ಈಗ ಯೋಚಿಸುತ್ತಿದ್ದಾರೆ ಎಂದು ತಮ್ಮ ನಡೆಯನ್ನು ಪ್ರಶಂಸಿಸಿಕೊಂಡರು.

    ಧರ್ಮಸ್ಥಳದ ಕುರಿತ ಅಪಪ್ರಚಾರ ತಡೆಯಲು ರಾಜ್ಯ ಸರ್ಕಾರಕ್ಕೆ ಇಷ್ಟ ಇಲ್ವಾ?; ವಿಜಯೇಂದ್ರ ಕಿಡಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading