ಪ್ರಧಾನಮಂತ್ರಿ ಕಚೇರಿ ಮುಂದಿನ ತಿಂಗಳು ಸ್ಥಳಾಂತರ.
ಪ್ರಸ್ತುತ ಸೌತ್ ಬ್ಲಾಕ್‌ನಲ್ಲಿರುವ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಮುಂದಿನ ತಿಂಗಳು ಕೆಲವು ನೂರು ಮೀಟರ್ ದೂರದಲ್ಲಿರುವ ಕಾರ್ಯನಿರ್ವಾಹಕ ಎನ್‌ಕ್ಲೇವ್‌ಗೆ ಸ್ಥಳಾಂತರಗೊಳ್ಳಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಸೆಂಟ್ರಲ್ ವಿಸ್ಟಾ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಕಚೇರಿ ಮತ್ತು ಇತರ ಉನ್ನತ ಸರ್ಕಾರಿ ಕಚೇರಿಗಳಿಗಾಗಿ ಎಕ್ಸಿಕ್ಯುಟಿವ್ ಎನ್ ಕ್ಲೇವ್ ಸಿದ್ಧಪಡಿಸಲಾಗಿದೆ.
ಪ್ರಧಾನ ಮಂತ್ರಿ ಕಚೇರಿಯ ಜೊತೆಗೆ, ಎಕ್ಸಿಕ್ಯುಟಿವ್ ಎನ್ ಕ್ಲೇವ್ ನಲ್ಲಿ ಕ್ಯಾಬಿನೆಟ್ ಸಚಿವಾಲಯ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಮತ್ತು ಸಮ್ಮೇಳನ ಸೌಲಭ್ಯ ಹೊಂದಿದೆ. ಹೊಸ ಪ್ರಧಾನ ಮಂತ್ರಿ ಕಚೇರಿಯು ಪ್ರಧಾನ ಮಂತ್ರಿಯವರ ನಿವಾಸಕ್ಕೆ ಹತ್ತಿರದಲ್ಲಿದೆ.
ಸ್ಥಳಾವಕಾಶದ ಒತ್ತಡದ ಕಾರಣದಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಹಳೆಯ ಕಟ್ಟಡಗಳಲ್ಲಿ ಆಧುನಿಕ ಸೌಲಭ್ಯಗಳು ಇರಲಿಲ್ಲ. ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಭಾರತ ಸರ್ಕಾರವು ಹೊಂದಿರುವ ಇಮೇಜ್‌ಗೆ ಅನುಗುಣವಾಗಿ ಹೊಸ ಕಟ್ಟಡಗಳ ನಿರ್ಮಾಣವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


