Thursday, September 3, 2026
spot_img
More
    spot_img
    HomeEntertainmentವಿಷ್ಣು ಸಮಾಧಿ ನೆಲಸಮ: ಯಶ್‌ ಹೆಸರು ಯಾಕೆ ತರ್ತೀರಾ ಎಂದು ಅನಿರುದ್ಧ್‌ ಎದುರೇ ಫ್ಯಾನ್ಸ್‌ ಗರಂ;...

    ವಿಷ್ಣು ಸಮಾಧಿ ನೆಲಸಮ: ಯಶ್‌ ಹೆಸರು ಯಾಕೆ ತರ್ತೀರಾ ಎಂದು ಅನಿರುದ್ಧ್‌ ಎದುರೇ ಫ್ಯಾನ್ಸ್‌ ಗರಂ; ವಿಡಿಯೊ

    ಬೆಂಗಳೂರು: ಅಭಿಮಾನ್‌ ಸ್ಟುಡಿಯೊದಲ್ಲಿದ ಸಾಹಸಸಿಂಹ ವಿಷ್ಣುವರ್ಧನ್‌ ಸಮಾಧಿ ನೆಲಸಮವಾಗಿದ್ದು, ಸದ್ಯ ಭಾರೀ ವಿವಾದವನ್ನು ಎಬ್ಬಿಸಿದೆ.

    Advertisement

    ಹಿರಿಯ ನಟ ಬಾಲಕೃಷ್ಣ ಅವರ ಮಕ್ಕಳ ಹೆಸರಿನಲ್ಲಿರುವ ಈ ಜಾಗದಲ್ಲಿದ್ದ ವಿಷ್ಣು ಸಮಾಧಿಯನ್ನು ಹೈಕೋರ್ಟ್‌ ಸೂಚನೆ ಮೇರೆಗೆ ತೆರವು ಮಾಡಲಾಗಿದೆ.

    ಕಳೆದ ವಾರ ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮವಾಗಿದ್ದು ಕಂಡು ವಿಷ್ಣುವರ್ಧನ್‌ ಅಭಿಮಾನಿಗಳು ಕಣ್ಣೀರಿಟ್ಟಿದ್ದರು ಹಾಗೂ ಆಕ್ರೋಶ ಹೊರಹಾಕಿದ್ದರು.

    ಈ ಕುರಿತು ಇದೀಗ ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ್‌ ಜತ್ಕರ್ ತಮ್ಮ ನೇತೃತ್ವದಲ್ಲಿ ಅಭಿಮಾನಿಗಳ ಜತೆ ಸಭೆ ನಡೆಸಿದ್ದಾರೆ. ಈ ಸಮಯದಲ್ಲಿ ಎಲ್ಲ ಅಭಿಮಾನಿಗಳು ಒಕ್ಕೊರಲಿನಿಂದ ತಾವೂ ಸಹ ಜಾಗ ಉಳಿಸಿಕೊಳ್ಳಲು ಹಣ ನೀಡುತ್ತೇವೆ ತಮ್ಮ ನೆಚ್ಚಿನ ನಟನ ಸಮಾಧಿಯನ್ನು ಉಳಿಸಿಕೊಳ್ಳಬೇಕಿದೆ ಎಂದು ಅನಿರುದ್ಧ್‌ ಅವರಲ್ಲಿ ಮನವಿ ಮಾಡಿದರು.

    ಇದೇ ಸಮಯದಲ್ಲಿ ಅಭಿಮಾನಿಯೊಬ್ಬ ಈ ಹಿಂದೆ ಸಹ ಸಮಾಧಿ ವಿಚಾರವಾಗಿ ಸಣ್ಣ ಪ್ರತಿಭಟನೆ ನಡೆದಿತ್ತು. ಆ ಸಮಯದಲ್ಲಿ ವಿಷ್ಣು ಕುಟುಂಬದ ಜೊತೆ ಯಶ್‌ ಸಹ ಭಾಗವಹಿಸಿದ್ದರು. ಆದರೆ ಇಂದು ಯಶ್‌ ಅಲ್ಲ ಯಾವ ನಟನೂ ಸಹ ಇದರ ಬಗ್ಗೆ ದನಿ ಎತ್ತುತ್ತಿಲ್ಲ ಎಂದು ಕಿಡಿಕಾರಿದರು.

    ವಿಷ್ಣು ಅಭಿಮಾನಿಯೊಬ್ಬ ಈ ರೀತಿ ಹೇಳುತ್ತಿದ್ದಂತೆ ನೆರೆದಿದ್ದ ಇತರೆ ವಿಷ್ಣು ಅಭಿಮಾನಿಗಳು ಕೆಂಡಾಮಂಡಲವಾದರು. ಯಶ್‌ ಹೆಸರು ಯಾಕ್ರೀ ತರ್ತೀರಾ ಅವನಿಂದ ಮೈಕ್‌ ಕಿತ್ತುಕೊಳ್ಳಿ ಎಂದು ಕಿಡಿಕಾರಿದರು. ಈ ವೇಳೆ ಯಾವ ನಟನ ಹೆಸರನ್ನೂ ಸಹ ಎಳೆದು ತರಬೇಡಿ, ಇದು ನಮ್ಮ ಹಾಗೂ ನಮ್ಮ ನಟನ ಕುರಿತಾದ ವಿಷಯ ಎಂದು ಮತ್ತೋರ್ವ ಅಭಿಮಾನಿ ತಿಳಿಹೇಳಿದರು.

    ಧರ್ಮಸ್ಥಳ ಅಂದರೆ ಗುದ್ದಲಿ ಸಮೇತ ಹೋಗುತ್ತೀರಿ, ಮಸೀದಿಗೆ ಹೋಗ್ತೀರಾ? ಸರ್ಕಾರದ ವಿರುದ್ಧ ಅಶೋಕ್‌ ಕಿಡಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading