ನವದೆಹಲಿ: ದೆಹಲಿಯ ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆ (DPS) ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಒಂದೇ ಇಮೇಲ್ ಐಡಿಯಿಂದ ಈ ಬೆದರಿಕೆಗಳು ಬಂದಿರುವುದು ಕಂಡುಬಂದಿದೆ.ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ
ದೆಹಲಿ ಪೊಲೀಸರ ತಂಡಗಳು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡಾಯಿಸಿದ್ದು, ಶಾಲಾ ಆವರಣಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿವೆ.
ದ್ವಾರಕಾದ ಸೆಕ್ಟರ್-19ರ ಸೇಂಟ್ ಥಾಮಸ್ ಶಾಲೆ, ಸೆಕ್ಟರ್ 18ಎನ ದೆಹಲಿ ಇಂಟರ್ನ್ಯಾಷನಲ್ ಸ್ಕೂಲ್, ಸೆಂಟ್ರಲ್ ಅಕಾಡೆಮಿ ಸ್ಕೂಲ್, ಜಿಡಿ ಗೋಯೆಂಕಾ ಸ್ಕೂಲ್, ಮಾಡರ್ನ್ ಇಂಟರ್ನ್ಯಾಷನಲ್ ಸ್ಕೂಲ್, ಮಾಡರ್ನ್ ಕಾನ್ವೆಂಟ್ ಶಾಲೆ ಮತ್ತು ಶ್ರೀ ರಾಮ್ ವರ್ಲ್ಡ್ ಶಾಲೆಗಳಿಗೆ ಈ ಬೆದರಿಕೆಗಳು ಬಂದಿವೆ.
ಪೊಲೀಸರ ಸೂಚನೆಯ ಮೇರೆಗೆ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ.ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ಸುಮಾರು 40 ಖಾಸಗಿ ಶಾಲೆಗಳಿಗೆ ಇದೇ ರೀತಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಆದರೆ, ತಪಾಸಣೆ ನಂತರ ಅವೆಲ್ಲವೂ ಹುಸಿ ಕರೆಗಳೆಂದು ದೃಢಪಟ್ಟಿತ್ತು. ಸದ್ಯ ದೆಹಲಿಯಲ್ಲೂ ತನಿಖೆ ಮುಂದುವರಿದಿದೆ.
ತುಮಕೂರು-ಬೆಂಗಳೂರು ನಡುವೆ 4 ರೈಲು ಮಾರ್ಗ; ತುಮಕೂರು-ದಾವಣಗೆರೆ ರೈಲು ಯೋಜನೆಗೆ ವೇಗ: ವಿ. ಸೋಮಣ್ಣ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


