ಕನ್ನಡ ಚಿತ್ರರಂಗ ಹಿಟ್ ನೀಡಲು ಒದ್ದಾಡುತ್ತಿರುವಾಗ ಹೊಸಬರ ತಂಡ ಬಂದು ಎಲ್ಲರ ಗಮನ ಸೆಳೆದು ಗೆದ್ದು ಬೀಗಿದ ಕೆಲ ಉದಾಹರಣೆಗಳಲ್ಲಿ ಸು ಫ್ರಮ್ ಸೋ ಅತ್ಯುತ್ತಮ ಎಂದೇ ಹೇಳಬಹುದು.
ಈ ವರ್ಷ ಎಕ್ಕ ಹೊರತುಪಡಿಸಿ ಉಳಿದೆಲ್ಲ ಚಿತ್ರಗಳು ಹತ್ತು ಕೋಟಿ ಕ್ಲಬ್ ದಾಟಲು ಸಹ ಪರದಾಡಿದ್ದು, ದಿಢೀರನೆ ಚಿತ್ರಮಂದಿರದ ಅಂಗಳಕ್ಕೆ ಲಗ್ಗೆ ಇಟ್ಟ ಸು ಫ್ರಮ್ ಸೋ ನೂರು ಕೋಟಿ ಗಡಿ ದಾಟುವ ಮೂಲಕ ದಾಖಲೆ ಬರೆದಿದೆ.
ಈ ಮೂಲಕ ಕನ್ನಡ ಚಿತ್ರರಂಗದಲ್ಲಿ 100 ಕೋಟಿ ಕ್ಲಬ್ ಸೇರಿದ 7ನೇ ಚಿತ್ರ ಎಂಬ ಸಾಧನೆಗೆ ಸು ಫ್ರಮ್ ಸೋ ಪಾತ್ರವಾಗಿದೆ. ಸದ್ಯ ನೂರರ ಗಡಿ ದಾಟಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಿತ್ರ ಕೊನೆಯದಾಗಿ ಎಷ್ಟು ಗಳಿಕೆ ಮಾಡಲಿದೆಯೋ ನೋಡಬೇಕಿದೆ.
ಕನ್ನಡ ಚಿತ್ರರಂಗದಲ್ಲಿ 100 ಕೋಟಿಗೂ ಅಧಿಕ ಗಳಿಕೆ ಮಾಡಿರುವ ಎಲ್ಲ ಚಿತ್ರಗಳ ಪಟ್ಟಿ ಮುಂದಿದೆ.
- ಕೆಜಿಎಫ್ ಚಾಪ್ಟರ್ 1
- ಕೆಜಿಎಫ್ ಚಾಪ್ಟರ್ 2
- ಜೇಮ್ಸ್
- ವಿಕ್ರಾಂತ್ ರೋಣ
- ಕಾಂತಾರ
- 777 ಚಾರ್ಲಿ
- ಸು ಫ್ರಮ್ ಸೋ
ವಿಷ್ಣು ಸಮಾಧಿ ನೆಲಸಮ: ಯಶ್ ಹೆಸರು ಯಾಕೆ ತರ್ತೀರಾ ಎಂದು ಅನಿರುದ್ಧ್ ಎದುರೇ ಫ್ಯಾನ್ಸ್ ಗರಂ; ವಿಡಿಯೊ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


