ಪೈಪೋಟಿ ಹೆಚ್ಚುತ್ತಿರುವ ಆನ್‌ಲೈನ್ ಆಹಾರ ವಿತರಣಾ ಮಾರುಕಟ್ಟೆಯಲ್ಲಿ, ಸ್ವಿಗ್ಗಿ ತನ್ನ ಗ್ರಾಹಕರಿಗೆ ಹೊಸ ಆಯ್ಕೆಯೊಂದನ್ನು ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ ಊಟವನ್ನು ಹುಡುಕುತ್ತಿರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ‘Toing‘ ಎಂಬ ಹೊಸ, ಸ್ವತಂತ್ರ ಆ್ಯಪ್ ಅನ್ನು ಸ್ವಿಗ್ಗಿ ಪುಣೆಯಲ್ಲಿ ಪ್ರಾರಂಭಿಸಿದೆ. ಈ ಆ್ಯಪ್ ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಕಡಿಮೆ ಆದಾಯ ಹೊಂದಿರುವ ಯುವ ಉದ್ಯೋಗಿಗಳಿಗಾಗಿ ವಿನ್ಯಾಸಗೊಂಡಿದೆ.
ಸ್ವಿಗ್ಗಿಯ ಟೋಯಿಂಗ್ ಆಪ್ ಅಂದ್ರೇನು?
ಸ್ವಿಗ್ಗಿಯ ಹೊಸ ಟೋಯಿಂಗ್ ಆಪ್ 100 ರಿಂದ 150 ರೂ. ಒಳಗಿನ ಕೈಗೆಟುಕುವ ಆಹಾರ ಆಯ್ಕೆಗಳನ್ನು ಒದಗಿಸುತ್ತದೆ. ಇದು ವಿಶೇಷವಾಗಿ ಸೀಮಿತ ಆದಾಯದ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇಲ್ಲಿ ಮಿನಿ ಮೀಲ್ಸ್, ಬರ್ಗರ್‌ಗಳು, ಸ್ಯಾಂಡ್‌ವಿಚ್‌ಗಳು, ಕೇಕ್‌ಗಳು ಮತ್ತು ಸಿಹಿತಿಂಡಿಗಳು ಕೇವಲ ₹12 ರಿಂದ ಲಭ್ಯ. ಮುಖ್ಯ ಸ್ವಿಗ್ಗಿ ಆಪ್‌ನಲ್ಲಿ ಇದೇ ಐಟಂಗಳ ಬೆಲೆ ₹14.99 ಆಗಿದೆ. ಜೊತೆಗೆ, ₹99 ಒಳಗಿನ ಫ್ಲ್ಯಾಶ್ ಡೀಲ್‌ಗಳು ಸಹ ಆ್ಯಪ್‌ನಲ್ಲಿ ದೊರೆಯುತ್ತವೆ.
Toing ಆ್ಯಪ್‌ನ ಪ್ರಮುಖ ವೈಶಿಷ್ಟ್ಯಗಳು:
ಕಡಿಮೆ ಬೆಲೆ: Toing ನಲ್ಲಿ ಆಹಾರ ಪದಾರ್ಥಗಳ ಬೆಲೆ ₹100-150 ರ ನಡುವೆ ಇರುತ್ತದೆ. ಕೆಲವು ‘ಫ್ಲಾಶ್ ಡೀಲ್’ಗಳು ₹99ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಿವೆ.
ಕಡಿಮೆ ಶುಲ್ಕಗಳು: ಮುಖ್ಯ ಸ್ವಿಗ್ಗಿ ಆ್ಯಪ್‌ಗಿಂತ Toing ನಲ್ಲಿ ಶುಲ್ಕಗಳು ಕಡಿಮೆ ಇವೆ. ಉದಾಹರಣೆಗೆ, Toing ನಲ್ಲಿ ಪ್ಲಾಟ್‌ಫಾರ್ಮ್ ಶುಲ್ಕ ₹12 ಇದ್ದರೆ, ಸ್ವಿಗ್ಗಿ ಆ್ಯಪ್‌ನಲ್ಲಿ ಅದು ₹14.99 ಆಗಿದೆ. ಇದಲ್ಲದೆ, Toing ಪ್ಯಾಕೇಜಿಂಗ್ ಶುಲ್ಕ ಮತ್ತು ‘ಮಳೆ ಶುಲ್ಕ’ (Rain fee) ದಂತಹ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವುದಿಲ್ಲ.
ಸರಳ ಸೇವೆ: ಈ ಆ್ಯಪ್ ಕಡಿಮೆ ಬೆಲೆಯ, ಆಯ್ದ ರೆಸ್ಟೋರೆಂಟ್‌ಗಳನ್ನು ಒಳಗೊಂಡಿದ್ದು, ಗ್ರಾಹಕರಿಗೆ ಸುಲಭವಾಗಿ ಆಹಾರ ಆರ್ಡರ್ ಮಾಡಲು ಸಹಾಯ ಮಾಡುತ್ತದೆ.
ಪುಣೆಯಲ್ಲಿ ಲಾಂಚ್: ಸ್ವಿಗ್ಗಿ ತನ್ನ ಹೊಸ ಆ್ಯಪ್ ಅನ್ನು ಸಾಮಾನ್ಯವಾಗಿ ಲಾಂಚ್ ಮಾಡುವ ಬೆಂಗಳೂರಿನ ಬದಲು, ಪುಣೆಯಲ್ಲಿ ಪರೀಕ್ಷಿಸುತ್ತಿದೆ. ಅಲ್ಲಿನ ಯುವಜನತೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಸ್ವಿಗ್ಗಿಯ ಈ ಹೆಜ್ಜೆಯು, ರಾಪಿಡೋ (Rapido) ಇತ್ತೀಚೆಗೆ ಪ್ರಾರಂಭಿಸಿದ ‘Ownly’ ನಂತಹ ಆ್ಯಪ್‌ಗಳಿಗೆ ನೇರ ಸ್ಪರ್ಧೆ ನೀಡಲಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ, Toing ಆ್ಯಪ್ ಪುಣೆಯ ಕೋತ್ರುಡ್, ಹಿಂಜೆವಾಡಿ, ವಾಕಡ್, ಔಂಧ್, ಮತ್ತು ಪಿಂಪಲ್ ಸೌದಗರ್‌ನಂತಹ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ಎರಡರಲ್ಲೂ ಲಭ್ಯವಿದೆ.
ಮೋದಿಯವರ ಸರಳ ಜೀವನಕ್ಕೆ ಸಾಕ್ಷಿ ಅವರ ಆಸ್ತಿ ವಿವರ: ದೇಶದ ಪ್ರಧಾನಿಯ ಒಟ್ಟು ಆಸ್ತಿ ಕೇವಲ ಇಷ್ಟೇ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


