ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ್ದ ಸಾಕ್ಷಿ ದೂರುದಾರ ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಚನೆಯಾಗಿರುವ ಎಸ್‌ಐಟಿ ತನ್ನ ತನಿಖೆಯನ್ನು ಮುಂದುವರಿಸಿದೆ.
ಚಿನ್ನಯ್ಯನ ಬಂಧನದ ಬಳಿಕ ಸೌಜನ್ಯ ಮಾವ ವಿಠ್ಠಲ ಗೌಡ ಎಸ್‌ಐಟಿ ಅಧಿಕಾರಿಗಳಿಗೆ ಹೆಣ ಹೂತಿಟ್ಟ ಜಾಗಗಳನ್ನು ತೋರಿಸಿದ್ದು, ನಿನ್ನೆ ( ಸೆಪ್ಟೆಂಬರ್ 17 ) ಆ ಜಾಗಗಳಲ್ಲಿ ಶೋಧ ಕಾರ್ಯ ನಡೆದಿದೆ.
ಹೌದು, ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪವೇ ಇರುವ ಬಂಗ್ಲೆಗುಡ್ಡದಲ್ಲಿ ವಿಠ್ಠಲ ಗೌಡ ಕೆಲ ಜಾಗಗಳನ್ನು ಗುರುತಿಸಿದ್ದು, ಆ ಜಾಗಗಳಲ್ಲಿ ನೆಲವನ್ನು ಅಗೆಯದೇ ಒಟ್ಟು 9 ಕಡೆ ಮಾನವನ ಅಸ್ತಿಪಂಜರದ ಅವಶೇಷಗಳನ್ನು ಸಂಗ್ರಹಿಸಲಾಗಿದೆ.
ಬಂಗ್ಲೆಗುಡ್ಡಕ್ಕೆ ತೆರಳಿದ ಎಸ್‌ಐಟಿ ಅಧಿಕಾರಿಗಳಿಗೆ ಕೆಲವೇ ನಿಮಿಷಗಳಲ್ಲಿ ಮೂಳೆಗಳು ಲಭಿಸಿದ್ದು, ಒಟ್ಟು 5 ಬುರುಡೆಗಳು ಸಿಕ್ಕಿವೆ ಎನ್ನಲಾಗಿದೆ.
ಈ ಮೂಲಕ ಬುರುಡೆ ಗ್ಯಾಂಗ್, ಧರ್ಮಸ್ಥಳ ಪ್ರಕರಣವೇ ಬುರುಡೆ ಎಂದು ಬೊಬ್ಬೆ ಹೊಡೆಯುತ್ತಾ, ಚಿನ್ನಯ್ಯ ಹೇಳಿದ ಕಡೆ ಬುರುಡೆಯೇ ಸಿಗಲಿಲ್ಲ ಎಂದು ಕೇಕೆ ಹಾಕುತ್ತಿದ್ದವರಿಗೆ ಭಾರೀ ಹಿನ್ನಡೆಯಾಗಿದೆ. ಹೀಗಾಗಿಯೇ ತನಿಖೆ ಸಾಕು ಎಂದು ಪದೇ ಪದೇ ಹೇಳುತ್ತಿದ್ದವರು ಇದೀಗ ಸೈಲೆಂಟ್ ಆಗಿಬಿಟ್ಟಿದ್ದಾರೆ.
ಈ ಹಿಂದೆ ಚಿನ್ನಯ್ಯ ಹೇಳಿದ ಜಾಗ, ಸುಜಾತಾ ಭಟ್ ಪ್ರಕರಣದ ಎಲ್ಲದನ್ನೂ ಗಮನಿಸಿ ಚಿನ್ನಯ್ಯನ ಬಂಧನವೇ ಅಂತಿಮ, ಇಲ್ಲಿಗೆ ಪ್ರಕರಣ ಮುಗಿದೇ ಹೋಯ್ತು ಎಂದು ಸಮಾಧಾನಪಟ್ಟುಕೊಂಡಿದ್ದವರಿಗೆ ಸೌಜನ್ಯ ಮಾವ ವಿಠ್ಠಲ ಗೌಡ ನಿದ್ರೆಗೆಡಿಸಿದ್ದಾರೆ. ಎಸ್‌ಐಟಿ ಅಧಿಕಾರಿಗಳು ವಿಠ್ಠಲ ಗೌಡ ಹೇಳಿದ ಜಾಗದಲ್ಲಿ ಮೊದಲ ದಿನವೇ ಇಷ್ಟು ಮೂಳೆಗಳು ಸಿಕ್ಕಮೇಲೆ ಇನ್ನೂ ಹಲವೆಡೆ ಶೋಧ ಕಾರ್ಯಾಚರಣೆ ಮಾಡದೇ ಬಿಟ್ಟುಬಿಡುತ್ತದೆಯೇ?
ಅದರಲ್ಲೂ 13 ಎಕರೆ ಇರುವ ಈ ಬಂಗ್ಲೆ ಗುಡ್ಡದಲ್ಲಿ ಇನ್ನೂ ಎಲ್ಲೆಲ್ಲಿ ಮೂಳೆಗಳು ಸಿಗಲಿವೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಈಗ ಮೂಳೆಗಳು ಸಿಕ್ಕಿರುವ ಸ್ಥಳಗಳನ್ನು ಎಸ್‌ಐಟಿ ಮಾರ್ಕ್ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯವೇನಾದರೂ ನೆಲ ಅಗೆಯಿರಿ ಎಂದು ಅನುಮತಿ ನೀಡಿದರೆ ಮತ್ತೆ ಉತ್ಖನನ ಆರಂಭವಾಗಲಿದೆ. ನೆಲದ ಮೇಲೆಯೇ ಇಷ್ಟು ಲೀಲಾಜಾಲವಾಗಿ ಮೂಳೆಗಳು, ಬುರುಡೆಗಳು ಸಿಗುತ್ತಿವೆ ಎಂದಮೇಲೆ ನ್ಯಾಯಾಲಯ ಉತ್ಖನನ ಮಾಡಿಸುವ ಸಾಧ್ಯತೆಗಳು ಹೆಚ್ಚಿದೆ. ಈ ನಿಟ್ಟಿನಲ್ಲಿ ಇದು ಎಸ್‌ಐಟಿ ತನಿಖೆಯ ಅಂತ್ಯವಲ್ಲ, ಆರಂಭ ಎನ್ನಬಹುದು.
ಬ್ಯಾಂಕ್ ಖಾತೆದಾರ ಮೃತಪಟ್ಟರೆ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಬ್ಯಾಂಕ್ ನಿಯಮಗಳ ಪೂರ್ಣ ವಿವರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


