ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ಚಿನ್ನಯ್ಯ ಮಾಡಿದ್ದ ಆರೋಪದ ಮೇಲೆ ರಚನೆಯಾಗಿರುವ ಎಸ್‌ಐಟಿ ಇದೀಗ ಬಂಗ್ಲೆಗುಡ್ಡದಲ್ಲಿ ಬೀಡುಬಿಟ್ಟಿದೆ.
ಸೌಜನ್ಯ ಮಾವ ವಿಠ್ಠಲ ಗೌಡ ನೀಡಿದ ಮಾಹಿತಿಯ ಮೇರೆಗೆ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಇಲ್ಲಿ ಹಲವಾರು ಮೂಳೆ ಹಾಗೂ ತಲೆಬುರುಡೆಗಳು ಪತ್ತೆಯಾಗಿವೆ.
ನಿನ್ನೆ ( ಸೆಪ್ಟೆಂಬರ್ 17 ) ಇದೇ ಬಂಗ್ಲೆಗುಡ್ಡದಲ್ಲಿ 5 ಬುರುಡೆಗಳು ಪತ್ತೆಯಾಗಿದ್ದವು. ಇಂದು ಸಹ ಎರಡು ಬುರುಡೆಗಳು ಪತ್ತೆಯಾಗಿದ್ದು, ಮೂಳೆಗಳೂ ಸಹ ಪತ್ತೆಯಾಗಿವೆ ಎನ್ನಲಾಗಿದೆ. ಈ ಮೂಲಕ ತನಿಖೆ ಸಾಕು ನಿಲ್ಲಿಸಿ ಎಂದು ಬೊಬ್ಬೆ ಹೊಡೆಯುತ್ತಿದ್ದ ಗುಂಪು ಕಂಗಾಲಾಗಿರುವುದಂತೂ ಪಕ್ಕಾ.
ಈ ಮೂಲಕ ನಿನ್ನೆ ಹಾಗೂ ಇಂದು ಸೇರಿ ಒಟ್ಟು 7 ತಲೆ ಬುರುಡೆಗಳು ಪತ್ತೆಯಾಗಿದ್ದು, ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ ರೋಚಕ ತಿರುವನ್ನು ಪಡೆದುಕೊಂಡಿದೆ.
ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಡಿಲಿಟ್ ಮಾಡಿರುವುದಕ್ಕೆ ಸಾಕ್ಷಿ ಇದೆ ಎಂದ ಬಿಆರ್ ಪಾಟೀಲ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


