ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿ ಚಿನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ರಚನೆಯಾಗಿರುವ ಎಸ್‌ಐಟಿ ಸದ್ಯ ವಿಠ್ಠಲ ಗೌಡ ನೀಡಿದ ಮಾಹಿತಿಯ ಆಧಾರದ ಮೇಲೆ ಬಂಗ್ಲೆ ಗುಡ್ಡದಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದೆ.
ನಿನ್ನೆ ( ಸೆಪ್ಟೆಂಬರ್ 17 ) ಬಂಗ್ಲೆಗುಡ್ಡದಲ್ಲಿ ನಡೆದ ಶೋಧ ಕಾರ್ಯದಲ್ಲಿ 5 ಬುರುಡೆಗಳು ಲಭ್ಯವಾಗಿದ್ದವು. ಹೀಗೆ ಮೊದಲ ದಿನವೇ ನೆಲದ ಮೇಲೆಯೇ ಇಷ್ಟು ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿದ್ದನ್ನು ಕಂಡು ಎಲ್ಲರೂ ಆಶ್ಚರ್ಯ ಹಾಗೂ ಕುತೂಹಲಕ್ಕೊಳಗಾಗಿದ್ದರು.
ಬಳಿಕ ಇಂದೂ ಸಹ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಬಂಗ್ಲೆಗುಡ್ಡದಲ್ಲಿ ಎರಡು ಬುರುಡೆಗಳು ಲಭಿಸಿವೆ. ಹೀಗೆ ನಿನ್ನೆ ಹಾಗೂ ಇಂದು ಸೇರಿ ಒಟ್ಟು 7 ಬುರುಡೆಗಳು ಸಿಕ್ಕಿದ್ದು, ಇಂದಿನ ಕಾರ್ಯಾಚರಣೆ ವೇಳೆ ಅಸ್ತಿಪಂಜರದ ಸಮೀಪದಲ್ಲಿಯೇ ಪುರುಷನೋರ್ವನ ಐಡಿ ಕಾರ್ಡ್ ಪತ್ತೆಯಾಗಿತ್ತು ಎನ್ನಲಾಗಿದೆ.
ಇನ್ನು ಈ ಐಡಿ ಕಾರ್ಡ್‌ನಲ್ಲಿರುವ ವ್ಯಕ್ತಿ ಹೆಸರು ಯು.ಬಿ ಅಯ್ಯಪ್ಪ ಹಾಗೂ ಇವರು ಕೊಡಗು ಜಿಲ್ಲೆಯ ಪೊನ್ನಂಪೇಟೆ ಮೂಲೆಯವರು ಎಂಬುದು ತಿಳಿದುಬಂದಿದೆ. 2017ರಲ್ಲಿ ಮೈಸೂರಿಗೆ ಆಸ್ಪತ್ರೆಗೆಂದು ತೆರಳುತ್ತೇನೆ ಎಂದು ಹೊರಟಿದ್ದ ಅಯ್ಯಪ್ಪ ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ದೂರನ್ನು ಸಹ ದಾಖಲಿಸಿದ್ದಾಗಿ ತಿಳಿದುಬಂದಿದೆ.
ಚಿನ್ನದ ದರ ಇಳಿಕೆ: ಡಾಲರ್ ಮೌಲ್ಯ ಏರಿಕೆಯೇ ಕಾರಣ ಇಂದಿನ ರೇಟ್ ಚೆಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


