ಕಳೆದ ಕೆಲವು ದಿನಗಳಿಂದ ವಿಶ್ರಾಂತಿಯಲ್ಲಿದ್ದ ಮಳೆರಾಯ ಮತ್ತೆ ಕರ್ನಾಟಕದಲ್ಲಿ ತನ್ನ ಅಬ್ಬರ ಆರಂಭಿಸಿದ್ದಾನೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸೆಪ್ಟೆಂಬರ್ 24ರವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಯೆಲ್ಲೋ ಅಲರ್ಟ್ ಘೋಷಣೆ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ರಾಯಚೂರು, ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳಲ್ಲಿ ತುಂತುರು ಮಳೆ ಮಾತ್ರ ನಿರೀಕ್ಷಿತವಾಗಿದೆ.
ಬೆಂಗಳೂರಿಗೆ ವರುಣನ ಎಂಟ್ರಿ
ರಾಜಧಾನಿ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಸೆಪ್ಟೆಂಬರ್ 18ರಂದು ಉತ್ತಮ ಮಳೆಯಾಗುವ ನಿರೀಕ್ಷೆ ಇದೆ, ಇದಕ್ಕಾಗಿ ಯೆಲ್ಲೋ ಅಲರ್ಟ್ ಕೂಡ ನೀಡಲಾಗಿದೆ. ಮುಂದಿನ ಕೆಲವು ದಿನಗಳವರೆಗೆ ಜಿಟಿ ಜಿಟಿ ಮಳೆ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ. ನಗರದಲ್ಲಿ ಗರಿಷ್ಠ ತಾಪಮಾನ 29°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ.
ಇತರೆ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ವಿಜಯನಗರ, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕೂಡ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಮತ್ತು ಉತ್ತರ ಕರ್ನಾಟಕದ ಹವಾಮಾನ ವರದಿ
ಕರಾವಳಿ ಭಾಗ:
ಹೊನ್ನಾವರ: ಗರಿಷ್ಠ ಉಷ್ಣಾಂಶ 29.2°C, ಕನಿಷ್ಠ ಉಷ್ಣಾಂಶ 24.5°C.
ಕಾರವಾರ: ಗರಿಷ್ಠ ಉಷ್ಣಾಂಶ 28.4°C, ಕನಿಷ್ಠ ಉಷ್ಣಾಂಶ 23.8°C.
ಮಂಗಳೂರು ವಿಮಾನ ನಿಲ್ದಾಣ: ಗರಿಷ್ಠ ಉಷ್ಣಾಂಶ 28.6°C, ಕನಿಷ್ಠ ಉಷ್ಣಾಂಶ 23.4°C.
ಶಕ್ತಿನಗರ: ಗರಿಷ್ಠ ಉಷ್ಣಾಂಶ 29.7°C, ಕನಿಷ್ಠ ಉಷ್ಣಾಂಶ 23.7°C.
ಉತ್ತರ ಕರ್ನಾಟಕ ಭಾಗ:
ಬೆಳಗಾವಿ ವಿಮಾನ ನಿಲ್ದಾಣ: ಗರಿಷ್ಠ ಉಷ್ಣಾಂಶ 26.7°C, ಕನಿಷ್ಠ ಉಷ್ಣಾಂಶ 20.6°C.
ಬೀದರ್: ಗರಿಷ್ಠ ಉಷ್ಣಾಂಶ 28.2°C, ಕನಿಷ್ಠ ಉಷ್ಣಾಂಶ 21.4°C.
ವಿಜಯಪುರ: ಗರಿಷ್ಠ ಉಷ್ಣಾಂಶ 27.0°C, ಕನಿಷ್ಠ ಉಷ್ಣಾಂಶ 22.0°C.
ಧಾರವಾಡ: ಗರಿಷ್ಠ ಉಷ್ಣಾಂಶ 26.6°C.
ಗದಗ: ಗರಿಷ್ಠ ಉಷ್ಣಾಂಶ 29.4°C, ಕನಿಷ್ಠ ಉಷ್ಣಾಂಶ 21.2°C.
ಕಲಬುರಗಿ: ಗರಿಷ್ಠ ಉಷ್ಣಾಂಶ 29.2°C, ಕನಿಷ್ಠ ಉಷ್ಣಾಂಶ 22.9°C.
ಹಾವೇರಿ: ಗರಿಷ್ಠ ಉಷ್ಣಾಂಶ 25.4°C, ಕನಿಷ್ಠ ಉಷ್ಣಾಂಶ 21.8°C.
ಕೊಪ್ಪಳ: ಗರಿಷ್ಠ ಉಷ್ಣಾಂಶ 29.4°C, ಕನಿಷ್ಠ ಉಷ್ಣಾಂಶ 23.8°C.
ರಾಯಚೂರು: ಗರಿಷ್ಠ ಉಷ್ಣಾಂಶ 29.4°C, ಕನಿಷ್ಠ ಉಷ್ಣಾಂಶ 22.8°C.
ಬೆಂಗಳೂರಿನಲ್ಲಿ ಹವಾಮಾನ ವರದಿ
ಬೆಂಗಳೂರಿನಲ್ಲಿ ಬುಧವಾರ ರಾತ್ರಿಯಿಂದ ಮಳೆಯಾಗುತ್ತಿದೆ. ನಗರದ ವಿವಿಧ ಭಾಗಗಳಲ್ಲಿ ದಾಖಲಾದ ಉಷ್ಣಾಂಶಗಳು ಹೀಗಿವೆ:
ಎಚ್‌ಎಎಲ್: ಗರಿಷ್ಠ ಉಷ್ಣಾಂಶ 28.2°C, ಕನಿಷ್ಠ ಉಷ್ಣಾಂಶ 20.9°C.
ಬೆಂಗಳೂರು ನಗರ: ಗರಿಷ್ಠ ಉಷ್ಣಾಂಶ 28.6°C, ಕನಿಷ್ಠ ಉಷ್ಣಾಂಶ 21.1°C.
ಕೆಐಎಎಲ್: ಗರಿಷ್ಠ ಉಷ್ಣಾಂಶ 29.1°C.
ಜಿಕೆವಿಕೆ: ಗರಿಷ್ಠ ಉಷ್ಣಾಂಶ 27.8°C, ಕನಿಷ್ಠ ಉಷ್ಣಾಂಶ 18.0°C.
ಪದವೀಧರರೇ ಗಮನಿಸಿ RBI ನಲ್ಲಿವೆ 120 ಹುದ್ದೆಗಳು: ಸಂಬಳ 78 ಸಾವಿರ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


