ಬೆಂಗಳೂರು: ಕಳೆದ ಜುಲೈನಲ್ಲಿ ಬರೋಬ್ಬರಿ 10 ಕೃಪಾಂಕಗಳನ್ನು ನೀಡಿ ಭಾರಿ ಸುದ್ದಿಯಲ್ಲಿದ್ದ ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇದೀಗ ಮತ್ತೊಂದು ಪರೀಕ್ಷೆಯಲ್ಲಿ 6 ಕೃಪಾಂಕಗಳನ್ನು ಘೋಷಿಸಿದೆ.
ಬರೋಬ್ಬರಿ 22 ಪ್ರಶ್ನೆಗಳ ಉತ್ತರಗಳಲ್ಲಿ ಮಾರ್ಪಾಡು ಮಾಡಿದೆ. ವಿವಿಧ ಇಲಾಖೆಯಲ್ಲಿನ ಗ್ರೂಪ್ ‘ಸಿ’ ಹುದ್ದೆಗಳ ನೇಮಕಾತಿಗೆ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪರಿಷ್ಕೃತ ಸರಿಯುತ್ತರಗಳನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ.
ಇದರಲ್ಲಿ ಸಾಮಾನ್ಯಜ್ಞಾನ ಪತ್ರಿಕೆ-1ರಲ್ಲಿ (ವಿಷಯ ಸಂಕೇತ-656) ಮೂರು ಕೃಪಾಂಕ ನೀಡಿದೆ. ಇದು ಸೇರಿ ಒಟ್ಟಾರೆ 16 ಪ್ರಶ್ನೆಗಳ ಉತ್ತರಗಳಲ್ಲಿ ಬದಲಾವಣೆ ಮಾಡಿದಂತಾಗಿದೆ. ಜತೆಗೆ, ಮೂರು ಪ್ರಶ್ನೆಗಳಿಗೆ ಪರ್ಯಾಯ ಉತ್ತರ ನೀಡಿದೆ. ಇನ್ನು, ವಿಷಯಾಧಾರಿತ ನಿರ್ದಿಷ್ಟ ಪತ್ರಿಕೆ-2ರಲ್ಲಿ (ವಿಷಯ ಸಂಕೇತ-657) ಮೂರು ಕೃಪಾಂಕ ನೀಡಿದ್ದು, ಮೂರು ಉತ್ತರಗಳನ್ನು ಬದಲಾಯಿಸಲಾಗಿದೆ. ಎರಡೂ ಪತ್ರಿಕೆಗಳಿಂದ ಒಟ್ಟಾರೆಯಾಗಿ 22 ಉತ್ತರಗಳನ್ನು ಬದಲಾವಣೆ ಮಾಡಿದಂತಾಗಿದೆ. ಪರಿಷ್ಕೃತ ಕೀ ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಬ್ಯಾಂಕ್ ಖಾತೆದಾರ ಮೃತಪಟ್ಟರೆ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಬ್ಯಾಂಕ್ ನಿಯಮಗಳ ಪೂರ್ಣ ವಿವರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


