ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರದ ಆರೋಪ ಮಾಡಿದ್ದ ಮಾಸ್ಕ್‌ಮ್ಯಾನ್ ಚಿನ್ನಯ್ಯ ನೀಡಿದ್ದ ದೂರಿನ ಆಧಾರದ ಮೇಲೆ ರಚನೆಯಾಗಿರುವ ಎಸ್‌ಐಟಿ ಸದ್ಯ ತನ್ನ ತನಿಖೆಯನ್ನು ಮುಂದುವರಿಸುತ್ತಿದೆ.
ಚಿನ್ನಯ್ಯನ ಬಂಧನವಾದ ಬಳಿಕ ಇಡೀ ಪ್ರಕರಣವೇ ಮುಗಿದುಹೋಯಿತು, ಇಲ್ಲಿಗೆ ತನಿಖೆಗೆ ಪೂರ್ಣ ವಿರಾಮ ಬಿತ್ತು ಎಂದೇ ಹಲವರು ಅಭಿಪ್ರಾಯಪಟ್ಟಿದ್ದರು.
ಆದರೆ ಎಸ್‌ಐಟಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಸೌಜನ್ಯ ಮಾವ ವಿಠ್ಠಲ ಗೌಡ ನೀಡಿದ ಮಾಹಿತಿ ಮೇರೆಗೆ ಬಂಗ್ಲೆಗುಡ್ಡದಲ್ಲಿ ಸ್ಥಳ ಮಹಜರು ನಡೆಸಿ ನಿನ್ನೆ ( ಸೆಪ್ಟೆಂಬರ್ 17 ) ಶೋಧ ಕಾರ್ಯವನ್ನೂ ಸಹ ನಡೆಸಿದೆ.
ಮೊದಲಿನಂತೆ ಈ ಸ್ಥಳದಲ್ಲಿ ಉತ್ಖನನ ಮಾಡದ ಎಸ್‌ಐಟಿ ನೆಲದ ಮೇಲೆಯೇ ಸಿಕ್ಕ ಮೂಳೆ ಹಾಗೂ ಬುರುಡೆಗಳನ್ನು ಸಂಗ್ರಹಿಸಿಕೊಂಡಿದೆ.
ಇನ್ನು ಬಂಗ್ಲೆಗುಡ್ಡೆ 13 ಎಕರೆ ಪ್ರದೇಶದ ವಿಸ್ತೀರ್ಣ ಹೊಂದಿದ್ದು, ಇನ್ನೂ ಎಷ್ಟು ಕಡೆ ಶೋಧ ಕಾರ್ಯ ನಡೆಯಲಿದೆ ಎನ್ನುವ ಕುತೂಹಲ ಮನೆ ಮಾಡಿದೆ.
ನಿನ್ನೆ ಒಟ್ಟು 9 ಸ್ಥಳಗಳಲ್ಲಿ ಮಾನವನ ಅಸ್ತಿಪಂಜರದ ಅವಶೇಷಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದ್ದು, 5 ಬುರುಡೆಗಳು ಸಿಕ್ಕಿವೆ ಎನ್ನಲಾಗಿದೆ.
ಸದ್ಯ ಈ ಶೋಧ ಕಾರ್ಯದ ವೇಳೆ ಪೌರ ಕಾರ್ಮಿಕರು ದೊಡ್ಡ ದೊಡ್ಡ ಪೈಪ್‌ಗಳನ್ನು ಬಂಗ್ಲೆ ಗುಡ್ಡ ಕಾಡಿನೊಳಗೆ ಕೊಂಡೊಯ್ದಿದ್ದು, ಈ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋಧ ಕಾರ್ಯಕ್ಕೆ ಇಷ್ಟು ದೊಡ್ಡ ಹಾಗೂ ಉದ್ದನೆಯ ಪೈಪುಗಳು ಯಾಕೆ ಎಂಬ ಪ್ರಶ್ನೆ ಸಹಜವಾಗಿ ಜನ ಸಾಮಾನ್ಯರಲ್ಲಿ ಮೂಡಿದೆ.
ಇಷ್ಟು ದೊಡ್ಡ ಗಾತ್ರದ ಪೈಪ್‌ಗಳನ್ನು ಎಸ್‌ಐಟಿ ಅಧಿಕಾರಿಗಳು ಸಿಕ್ಕ ಉದ್ದನೆಯ ಮೂಳೆಗಳನ್ನು ಇರಿಸಲು ಬಳಸಲಿದ್ದಾರೆ. ಉದಾಹರಣೆಗೆ ಕೈ ಮೂಳೆ ಅಥವಾ ಕಾಲಿನ ಮೂಳೆಗಳನ್ನು ತುಂಬಲು ಈ ಪೈಪ್‌ಗಳು ಸಹಕಾರಿಯಾಗಲಿವೆ. ಕೆಲವೊಂದು ಬಾರಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಲು ಸಹ ಈ ಪೈಪ್‌ಗಳನ್ನು ಬಳಸಲಾಗುತ್ತದೆ.
ಬ್ಯಾಂಕ್ ಖಾತೆದಾರ ಮೃತಪಟ್ಟರೆ ಹಣ ಯಾರಿಗೆ ಸೇರುತ್ತೆ? ಇಲ್ಲಿದೆ ಬ್ಯಾಂಕ್ ನಿಯಮಗಳ ಪೂರ್ಣ ವಿವರ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


