ಬಿಗ್‌ಬಾಸ್ ಕನ್ನಡ ಸೀಸನ್ 12ರ ಉದ್ಘಾಟನೆಯಂದು ಸ್ಪರ್ಧಿಯಾಗಿ ಬಂದು ಅದೇ ದಿನ ಮನೆಯವರ ಬೆಂಬಲ ಸಿಗದೇ ಹೊರಬಿದ್ದಿದ್ದ ರಕ್ಷಿತಾ ಶೆಟ್ಟಿ ಮತ್ತೆ ಬಿಗ್‌ಬಾಸ್ ಮನೆಗೆ ಬಂದಿದ್ದು, ಅಶ್ವಿನಿ ಗೌಡ ಹಾಗೂ ಜಾನ್ವಿ ರಕ್ಷಿತಾ ಕಂಡಾಗಲೆಲ್ಲ ಚುಚ್ಚು ಮಾತುಗಳನ್ನಾಡಿದ್ದಾರೆ.
ಅಶ್ವಿನಿ ಗೌಡ ಒಂಟಿಯಾಗಿ ಇರಬೇಕಾದರೆ ಜಂಟಿಗಳ ಜತೆ ಮಾತನಾಡಬಾರದು ಎಂಬುದನ್ನು ತಿಳಿಸಿ ಎಂದು ಹೇಳಲು ರಕ್ಷಿತಾಳನ್ನು ಈಡಿಯಟ್, ಕಾರ್ಟೂನ್ ಎಂದೆಲ್ಲ ಕರೆದಿದ್ದರು. ಇದು ವೀಕ್ಷಕರ ಕೋಪವನ್ನೂ ಕೆರಳಿಸಿತ್ತು. ಕೋಪ ಎಷ್ಟೇ ಇರಲಿ ಅಥವಾ ಅಸೂಯೆ ಇರಲಿ ಮಾತಿನಲ್ಲಿ ಅದನ್ನು ವ್ಯಕ್ತಪಡಿಸುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ಅಶ್ವಿನಿ ಗೌಡ ವಿರುದ್ಧ ಟ್ರೋಲ್ ಮಾಡಿದ್ದರು.
ಅಷ್ಟೇ ಅಲ್ಲದೇ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಕೆ ಒಬ್ಬಳು ಎಸ್ ಎಂದು ನಾನು ಹೇಳಿರಲಿಲ್ವ ಎಂದು ಜಾನ್ವಿ ಬಳಿ ರಕ್ಷಿತಾ ಮೇಲೆ ನಾಲಿಗೆ ಹರಿಬಿಟ್ಟಿದ್ದ ಅಶ್ವಿನಿ ಗೌಡ ಮತ್ತೊಮ್ಮೆ ವೀಕ್ಷಕರ ಕೋಪಕ್ಕೆ ಗುರಿಯಾಗಿದ್ದರು.
ಹೀಗೆ ಮಿತಿ ಮೀರಿ ಮಾತನಾಡುತ್ತಿರುವ ಅಶ್ವಿನಿ ಗೌಡ ಹಾಗೂ ಜಾನ್ವಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡರೆ ಉತ್ತಮ ಎಂದು ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವಾಗಲೇ ಕಲರ್ಸ್ ಕನ್ನಡ ಇಂದು ( ಅಕ್ಟೋಬರ್ 18 ) ಹಂಚಿಕೊಂಡಿರುವ 30 ಸೆಕೆಂಡ್ ಪ್ರೋಮೊದಲ್ಲಿ ರಕ್ಷಿತಾ ಪರ ದನಿ ಎತ್ತಿದ್ದಾರೆ.
ಇದನ್ನು ನೋಡಿದರೆ ಹೇಳಬಹುದು ಎಲ್ಲಿಂದ ಬಂದಿದ್ದೀಯ ನೀನು, ಕಾರ್ಟೂನ್ ಎಂದೆಲ್ಲ ಹೇಳಿದ್ರಿ, ಅದೇ ಸುಧಿಯವರು ನಿಮಗೆ ಆಯಮ್ಮ ಎಂದಿದ್ದಕ್ಕೆ ಹಾಗೆಲ್ಲ ಕರೆಯಬೇಡಿ ನನಗೆ ಹೆಸರಿದೆ ಎಂದು ಹೇಳಿದ್ರಿ. ಆದರೆ ಆಕೆಯನ್ನು ತಾವು ಈಡಿಯಟ್ ಎಂದ್ರಲ್ಲ ಎಂದು ಪ್ರಶ್ನಿಸಿದರು.
ಈ ಸಮಯಕ್ಕೆ ಜಾನ್ವಿ ಉತ್ತರಿಸಿದ್ದು, ಫನ್‌ಗೋಸ್ಕರ ಮಾಡಿದ್ದು ಎಂದು ಮತ್ತದೇ ತಲೆಕೆಟ್ಟ ಉತ್ತರವನ್ನು ನೀಡಿದರು. ಇದರಿಂದ ಕೋಪಗೊಂಡ ಕಿಚ್ಚ ತಮಾಷೆ ಮಾಡ್ತಾ ನಿಮ್ಮ ವ್ಯಕ್ತಿತ್ವವನ್ನು ಕೊಲೆ ಮಾಡಿಕೊಳ್ಳುತ್ತಿದ್ದೀರ ನಿಮಗೆ ಅದು ಸರಿ ಎನಿಸುತ್ತಾ? ಒಬ್ಬರ ಅಸ್ತಿತ್ವ, ಒಬ್ಬರ ಗೌರವ, ಇನ್ನೊಬ್ಬರ ಆಟ ಸಾಮಾನು ಆಗಬಾರದು, ಯಾರ ಅಪ್ಪನ ಆಸ್ತಿನೂ ಅಲ್ಲ ಅದು ಎಂದು ಗುಡುಗಿದ್ದಾರೆ.
ಸದ್ಯ ಈ ಸಣ್ಣ ಪ್ರೋಮೊಗೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಕಿಚ್ಚನ ಕ್ಲಾಸ್‌ಗೆ ವೀಕ್ಷಕರು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


